Advertisement

ಮಳೆ ನೀರು ಹರಿಯುವ ಚರಂಡಿ ಮಣ್ಣು ಪಾಲು!

10:21 AM Apr 06, 2022 | Team Udayavani |

ಹಳೆಯಂಗಡಿ: ಕಳೆದ ವಾರ ಒಂದೆರಡು ಬಾರಿ ಹನಿ ಹನಿ ಮಳೆ ಬಂದು ಮಳೆಗಾಲದ ಮುನ್ಸೂಚನೆ ನೀಡಿದೆ. ಆದರೆ ಹಳೆಯಂಗಡಿ ಮತ್ತು ಪಡುಪಣಂಬೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿ, ಒಳ ರಸ್ತೆಯ, ಪಿಡಬ್ಲ್ಯುಡಿ ರಸ್ತೆಯಲ್ಲಿ ಮಳೆಗಾಲದಲ್ಲಿ ಸರಾಗವಾಗಿ ಹರಿಯಬೇಕಾದ ಚರಂಡಿ ಮಾತ್ರ ಮಣ್ಣುಪಾಲಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಮುಖ್ಯ ಜಂಕ್ಷನ್‌ನ ಕಮಲ್‌ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಮಳೆಗಾಲದಲ್ಲಿ ನೀರು ನಿಂತು ಈಜುಕೊಳದ ಸ್ಥಿತಿ ನಿರ್ಮಾಣ ವಾಗುತ್ತದೆ. ಇಲ್ಲಿ ಚರಂಡಿಯೇ ನಿರ್ಮಾಣವಾಗಿಲ್ಲ, ಹೆದ್ದಾರಿ ನೇಕಾರ ಮಹಲ್‌ನ ಮುಂಭಾಗದಲ್ಲಿ ಕೊಳಚೆ ನೀರು ತುಂಬಿ ಹೊರ ಹರಿಯುತ್ತಿದೆ. ಮಳೆಗಾಲದಲ್ಲಿ ಹೀಗೆಯೇ ಇದ್ದರೆ ನೇರವಾಗಿ ಕಟ್ಟಡಕ್ಕೆ ನೀರು ನುಗ್ಗಲಿದೆ. ಇನ್ನು ಕೆನರಾ ಬ್ಯಾಂಕ್‌ನ ಮುಂಭಾಗದಲ್ಲಿ ಇದ್ದ ಚರಂಡಿ ರಸ್ತೆಯಾಗಿ ಮಾರ್ಪಾಡಾಗಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಇದ್ದಾಗ ಹೆದ್ದಾರಿಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತ್ತು.

ಕುಸಿತದ ಭೀತಿ

ಹಳೆಯಂಗಡಿ ಹೆದ್ದಾರಿಯಿಂದ ಕೊಪ್ಪಲ ರಸ್ತೆಯ ತಿರುವಿನ ಬಳಿಯಿರುವ ರಾಜ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ಕಟ್ಟಿರುವ ಕಲ್ಲುಗಳು ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ. ಇದಕ್ಕೆ ಸಂಪರ್ಕದ ಹೆದ್ದಾರಿಯ ಕೆಳಭಾಗದಲ್ಲಿನ ಸಿಮೆಂಟ್‌ ಪೈಪ್‌ನಲ್ಲಿ ಹೂಳು ತುಂಬಿದೆ. ಚೇಳಾçರಿನ ತಿರುವಿನಲ್ಲಿರುವ ರೈಲ್ವೇ ಸೇತುವೆಯ ಕೆಳಭಾಗವು ತಗ್ಗು ಪ್ರದೇಶವಾಗಿದ್ದು ಎರಡೂ ಬದಿಯಲ್ಲಿ ಚರಂಡಿ ಇಲ್ಲದಿರುವುದರಿಂದ ಮಳೆ ನೀರು ಹಾಗೂ ಸೇತುವೆಯ ಮೇಲಿಂದ ಹರಿಯುವ ನೀರು ಸಂಗ್ರಹಗೊಂಡು ರಸ್ತೆಯನ್ನು ಮುಳುಗಿಸಲು ಸಜ್ಜಾಗಿದೆ.

ಹೂಳು ಎತ್ತುವ ಭರವಸೆ ಈಡೇರಿಲ್ಲ!

Advertisement

ಇಂದಿರಾನಗರದ ಜನವಸತಿ ಪ್ರದೇಶದ ಬಳಿಯ ಇಂದಿರಾ ಪಾರ್ಕ್‌ ಬಳಿಯ ಚರಂಡಿಯಲ್ಲಿ ಕೊಳಚೆ ನೀರಿನ ತ್ಯಾಜ್ಯ ಶೇಖರಣೆಗೊಂಡು ಮಳೆ ನೀರು ನೇರವಾಗಿ ರಸ್ತೆಯಲ್ಲಿಯೇ ಹರಿಯಲು ಮುಂದಾಗಿದೆ.

ಪಡುಪಣಂಬೂರು ಹೆದ್ದಾರಿಯ ಕಿರು ಸೇತು ವೆಯ ರಾಜ ಕಾಲುವೆಯಲ್ಲಿ ಕಳೆದ ವರ್ಷ 10 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ನಡೆದು ಬೆಳ್ಳಾಯರು ಮತ್ತು ಪಡುತೋಟ, ಚಿತ್ರಾಪುವಿನ ನೂರಾರು ಎಕರೆ ಕೃಷಿ ಭೂಮಿ ಮುಳುಗುವುದರಿಂದ ಸಂರಕ್ಷಿಸಲ್ಪಟ್ಟಿತ್ತು. ಆದರೆ ಮತ್ತೆ ಈ ರಾಜ ಕಾಲುವೆಯಲ್ಲಿ ಹೂಳು ತುಂಬಿದೆ. ಸಮ ರ್ಪಕವಾಗಿ ಹೂಳು ತೆಗೆದಿಲ್ಲ ಎಂದು ಪಂಚಾಯತ್‌ಗೆ ಸ್ವತಃ ಸದಸ್ಯರೊಬ್ಬರು ದೂರು ನೀಡಿದ್ದರ ಪರಿಣಾಮ ಹೂಳೆತ್ತುವ ಭರವಸೆ ಮಳೆಗಾಲ ಹತ್ತಿರ ಬಂದರೂ ಈಡೇರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next