Advertisement

ಮುಂಬಯಿಗೆ ಜಿಗಿದ “ಡ್ರ್ಯಾಗನ್‌’, “ಪಿಂಟೊ’!

02:59 AM May 21, 2019 | sudhir |

ಮಂಗಳೂರು: ಪಿಲಿಕುಳ ನಿಸರ್ಗ ಧಾಮದಲ್ಲಿ “ಗೇಮ್‌ ಆಫ್‌ ಥ್ರೋನ್ಸ್‌’ನ ಡ್ರಾಗನ್‌ ಪಾತ್ರಧಾರಿಯಂತೆ ಗಮನ ಸೆಳೆದಿದ್ದ ಗಂಡು ಚಿರತೆ ಈಗ ಮುಂಬಯಿಯ ಬೈಕುಲಾ ಮೃಗಾಲಯ ಸೇರಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆ ಸಿಗಲಿದೆ.

Advertisement

ಪಿಲಿಕುಳದ ಉದ್ಯಾನವನದಲ್ಲಿ ಮೂರು ವರ್ಷಗಳಿಂದ ಇದ್ದ ಈ ಚಿರತೆ ಅತ್ಯಂತ ಧೈರ್ಯಶಾಲಿಯಾಗಿತ್ತು. ಪಿಲಿಕುಳ ಮೃಗಾಲಯದ ಪಶು ವೈದ್ಯರು ಅದಕ್ಕೆ ಡ್ರಾಗನ್‌ ಎಂದು ಹೆಸರಿಟ್ಟಿದ್ದರು. ಡ್ರಾಗನ್‌ ಜತೆಗೆ, 5 ವರ್ಷದ “ಪಿಂಟೊ’ ಎನ್ನುವ ಹೆಣ್ಣು ಚಿರತೆಯನ್ನು ಕೂಡ ಮುಂಬಯಿಗೆ ಕಳುಹಿಸಲಾಗಿದೆ.

ಮೂರು ವರ್ಷ ಪ್ರಾಯದ ಗಂಡು ಚಿರತೆ “ಡ್ರಾಗನ್‌’ ಮತ್ತು 5 ವರ್ಷ ಪ್ರಾಯದ ಹೆಣ್ಣು ಚಿರತೆ “ಪಿಂಟೊ’ ಎ. 28ರಂದು ಮುಂಬಯಿನ ಬೈಕುಲಾ ಮೃಗಾಲಯವೆಂದೇ ಪ್ರಸಿದ್ಧವಾದ “ವೀರಮಠ ಜೀಜಾ ಬಾೖ ಭೋಂಸ್ಲೆ ಉದ್ಯಾನವನ ಮತ್ತು ಮೃಗಾಲಯ’ ತಲುಪಿವೆ.

ಕಾಡಿನಿಂದ ಉದ್ಯಾನವನಕ್ಕೆ
ಡ್ರಾಗನ್‌ ಮತ್ತು ಅದರ ಜತೆ ಇನ್ನೊಂದು ಮರಿ ಚಿರತೆ ಮೂರು ವರ್ಷಗಳ ಹಿಂದೆ ಮೂಡುಬಿದಿರೆ ಸಮೀಪದ ನಿಡ್ಡೋಡಿಯಲ್ಲಿ ಅನಾಥವಾಗಿ ಪತ್ತೆಯಾಗಿದ್ದವು. ಸಾರ್ವಜನಿಕರ ಮಾಹಿತಿಯನ್ವಯ ಅರಣ್ಯ ಇಲಾಖೆಯ ಅಧಿಕಾರಿಗಳು ಅವುಗಳನ್ನು ರಕ್ಷಿಸಿ ಪಿಲಿಕುಳ ನಿಸರ್ಗ ಧಾಮಕ್ಕೆ ಒಪ್ಪಿಸಿದ್ದರು.

ಅಲ್ಲಿ ಒಂದು ಮರಿ ಸತ್ತು, ಡ್ರಾಗನ್‌ ಮಾತ್ರ ಬದುಕುಳಿದಿತ್ತು.

Advertisement

“ಪಿಂಟೊ’ 5 ವರ್ಷಗಳ ಹಿಂದೆ ಚಿಕ್ಕ ಮರಿಯಾಗಿದ್ದಾಗ ಮಂಗಳೂರು- ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿ ಪತ್ತೆಯಾಗಿತ್ತು. ಅದಕ್ಕೆ “ಪಿಂಟು’ ಎಂದು ಹೆಸರಿಸಲಾಗಿದ್ದು, ಕ್ರಮೇಣ ಅದು “ಪಿಂಟೊ’ ಎಂದೇ ಪ್ರಸಿದ್ಧಿ ಪಡೆಯಿತು.

ಪ್ರಾಣಿ ವಿನಿಮಯ
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಈ ಚಿರತೆಗಳನ್ನು ಮುಂಬಯಿ ಮೃಗಾಲಯಕ್ಕೆ ನೀಡಲಾಗಿದೆ. ಅಲ್ಲಿಂದ 20 ನೀರ ಪಕ್ಷಿಗಳನ್ನು ಮಂಗಳೂರಿಗೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next