Advertisement

ಟೆಲಿಕಾಂನಲ್ಲಿ 40 ಲಕ್ಷ ಕೆಲಸ

06:00 AM May 03, 2018 | |

ನವದೆಹಲಿ: ಕುಸಿಯುತ್ತಿರುವ ಟೆಲಿಕಾಂ ವಲಯಕ್ಕೆ ಚೇತರಿಕೆ ನೀಡಲು ತರಂಗಾಂತರ ಶುಲ್ಕಗಳ ಬದಲಾವಣೆ, ಮನೆಗಳಿಗೆ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸಂಪರ್ಕ ಹಾಗೂ 2022ರ ವೇಳೆಗೆ 40 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ನಿರೀಕ್ಷೆಯನ್ನು ಹೊಸ ಟೆಲಿಕಾಂ ನೀತಿ ಪ್ರಸ್ತಾಪಿಸಿದೆ. ರಾಷ್ಟ್ರೀಯ ಡಿಜಿಟಲ್‌ ಸಂವಹನಗಳ ನೀತಿ 2018 ಎಂಬ ಹೆಸರಿನ ಈ ಕರಡು ನೀತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಬುಧವಾರ ಬಿಡುಗಡೆ ಮಾಡಿದೆ.

Advertisement

ನಿಯಂತ್ರಕಗಳ ಸುಧಾರಣೆ ಮೂಲಕ 2022ರ ವೇಳೆಗೆ 6.50 ಲಕ್ಷ ಕೋಟಿ  ಹೂಡಿಕೆ ಆಕರ್ಷಿಸುವ ವಿಶ್ವಾಸ ಹೊಂದಿದೆ. ಲೈಸೆನ್ಸ್‌ ಶುಲ್ಕಗಳು, ಸ್ಪೆಕ್ಟ್ರಂ ಬಳಕೆ ಶುಲ್ಕ ಸೇರಿದಂತೆ ಇತರ ಅಂಶಗಳನ್ನು ಮರುಪರಿಶೀಲಿಸಲು  ನಿರ್ಧರಿಸಲಾಗಿದೆ. ಇದು 40 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಮತ್ತು ಇದು ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಲಿದೆ. 2017ರ ಅಂಕಿ ಅಂಶದಂತೆ ಟೆಲಿಕಾಂ ವಲಯವು ದೇಶದ ಜಿಡಿಪಿಗೆ ಶೇ. 6ರಷ್ಟು ಕೊಡುಗೆ ನೀಡುತ್ತಿದ್ದು, ಇದು ಶೇ. 8ಕ್ಕೆ ಏರಲಿದೆ ಎಂದು ನಿರೀಕ್ಷಿಸಲಾಗಿದೆ.

ಬ್ರಾಡ್‌ಬ್ಯಾಂಡ್‌ ಸೌಲಭ್ಯ: ಶೇ. 50ರಷ್ಟು ಕುಟುಂಬಗಳಿಗೆ ಬ್ರಾಡ್‌ಬ್ಯಾಂಡ್‌ ನೀಡುವ  ಹಾಗೂ ಲ್ಯಾಂಡ್‌ಲೈನ್‌ ಪೋರ್ಟಬಿಲಿಟಿ ಸೇವೆ ಆರಂಭಿಸುವ ಬಗ್ಗೆಯೂ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರತಿಯೊಬ್ಬರಿಗೂ 50 ಎಂಬಿಪಿಎಸ್‌ ವೇಗದ ಯೂನಿವರ್ಸಲ್‌ ಬ್ರಾಡ್‌ಬ್ಯಾಂಡ್‌ ಕವರೇಜ್‌ ಒದಗಿಸುವುದು ಹಾಗೂ 2020ರ ವೇಳೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 1 ಜಿಬಿಪಿಎಸ್‌ ಕನೆಕ್ಟಿವಿಟಿ ಒದಗಿಸುವುದು ಮತ್ತು 2022ರ ವೇಳೆಗೆ ಇದನ್ನು 10 ಜಿಪಿಎಸ್‌ಗೆ ಏರಿಸುವ ಪ್ರಸ್ತಾವನೆಯನ್ನೂ  ಮಾಡಲಾಗಿದೆ.

ವಲಯ ಪುನಶ್ಚೇತನ: ತರಂಗಾಂತರ ಶುಲ್ಕ ಹಾಗೂ ಇತರ ಶುಲ್ಕಗಳು ಸದ್ಯದ ಟೆಲಿಕಾಂ ಸೇವಾ ವಲಯದ ಪ್ರಮುಖ ಬಾಧ್ಯತೆಗಳಾಗಿವೆ. ಇದರಿಂದ ಟೆಲಿಕಾಂ ವಲಯ 7.8 ಲಕ್ಷ ಕೋಟಿ  ನಷ್ಟದಲ್ಲಿದೆ. ಹೀಗಾಗಿ ಸುಸ್ಥಿರ, ಕೈಗೆಟಕುವ ಬೆಲೆಯಲ್ಲಿ ತರಂಗಾಂತರಗಳನ್ನು ಒದಗಿಸುವ ಪ್ರಸ್ತಾವನೆ ಇದೆ. ಮುಂದಿನ ತಲೆಮಾರಿನ ನೆಟ್‌ವರ್ಕ್‌ಗಳಿಗಾಗಿ 3 ಗಿಗಾಹರ್ಟ್ಸ್ನಿಂದ 24 ಗಿಗಾಹರ್ಟ್ಸ್ ಶ್ರೇಣಿಯ ತರಂಗಾಂತರಗಳನ್ನು ಹಂಚುವ ಪ್ರಸ್ತಾವನೆ ಮಾಡಲಾಗಿದೆ.

ಮೊದಲೇ ಕೇಬಲ್‌ ಕಡ್ಡಾಯ 
ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ಟೆಲಿಕಾಂ ಸೇವೆ ಒದಗಿಸುವ ನಿಟ್ಟಿನಲ್ಲಿ ಕೇಬಲ್‌ಗ‌ಳನ್ನು ಮೊದಲೇ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ದೇಶಾದ್ಯಂತ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ರೂಪಿಸುವ ನಿಟ್ಟಿನಲ್ಲಿ ನ್ಯಾಷನಲ್‌ ಬ್ರಾಡ್‌ಬ್ಯಾಂಡ್‌ ಮಿಷನ್‌ ಪರಿಚಯಿಸುವ ಪ್ರಸ್ತಾವನೆಯನ್ನೂ ಮಾಡಲಾಗಿದೆ.

Advertisement

ದೇಶಾದ್ಯಂತ ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕಾಗಿ ನ್ಯಾಷನಲ್‌ ಬ್ರಾಡ್‌ಬ್ಯಾಂಡ್‌ ಮಿಷನ್‌ ರಚನೆ
ಟೆಲಿಕಾಂ ವಲಯಕ್ಕೆ 6.5 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ
ಜಿಡಿಪಿಗೆ ಶೇ. 8ರಷ್ಟು ಕೊಡುಗೆ ನೀಡುವ ಸಾಧ್ಯತೆ
2022ರ ವೇಳೆಗೆ 10 ಜಿಬಿಪಿಎಸ್‌ ವೇಗದ ಇಂಟರ್‌ನೆಟ್‌ ಗ್ರಾಪಂಗಳಿಗೆ

Advertisement

Udayavani is now on Telegram. Click here to join our channel and stay updated with the latest news.

Next