Advertisement

ಡಾ|ವೆಂಕಟರಾಯ ಪ್ರಭು ಮಾಹೆ ಸಹಕುಲಪತಿ

12:34 AM Dec 31, 2021 | Team Udayavani |

ಉಡುಪಿ: ಮಂಗಳೂರು ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ವೆಂಕಟರಾಯ ಎಂ. ಪ್ರಭು ಅವರನ್ನು ಮಾಹೆ ಆರೋಗ್ಯ ವಿಜ್ಞಾನಗಳ ಸಹಕುಲಪತಿಗಳನ್ನಾಗಿ ಜ. 1ರಿಂದ ನೇಮಿಸಲಾಗಿದೆ ಎಂದು ಮಾಹೆ ಪ್ರಕಟಿಸಿದೆ.

Advertisement

ಮಂಗಳೂರಿನಲ್ಲಿ ಜನಿಸಿದ ಡಾ| ಪ್ರಭು ಅವರು ಕೆಎಂಸಿ ಮಣಿಪಾಲ/ಮಂಗಳೂರಿನ 1976ರ  ಎಂಬಿಬಿಎಸ್‌ ಬ್ಯಾಚ್‌ನ ಹಳೆ ವಿದ್ಯಾರ್ಥಿಯಾಗಿದ್ದು, ಪದವಿ ಮತ್ತು ಸ್ನಾತಕೋತ್ತರ (ಎಂಡಿ ಜನರಲ್‌ ಮೆಡಿಸಿನ್‌) ಎರಡರಲ್ಲೂ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದವರು. 1985ರಿಂದ ಮಣಿಪಾಲ ಸಂಸ್ಥೆಯೊಂದಿಗೆ ನಂಟನ್ನು ಹೊಂದಿರುವ ಇವರು ಮಂಗಳೂರು ಕೆಎಂಸಿ ವೈದ್ಯಕೀಯ ವಿಭಾಗದ ವಿವಿಧ ಬೆಳವಣಿಗೆಯಲ್ಲಿ ಜತೆಯಾದವರು. ಪ್ರಾಧ್ಯಾಪನ ವೃತ್ತಿಯಿಂದ ಪ್ರಾರಂಭಿಸಿ ಪ್ರಾಧ್ಯಾಪಕ ಹುದ್ದೆವರೆಗೆ ಮುಂದುವರಿದು 2001ರಿಂದ ಒಂದು ದಶಕದವರೆಗೆ ಇಲ್ಲಿನ ಅಸೋಸಿಯೇಟ್‌ ಡೀನ್‌ ಆಗಿ ಮತ್ತು  2011ರಿಂದ ಇನ್ನೊಂದು ದಶಕದವರೆಗೆ ಡೀನ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ಮಂಗಳೂರಿನ ಕೆಎಂಸಿ ಡೀನ್‌ ಹುದ್ದೆಯನ್ನು ಅಲಂ ಕರಿಸಿದ ಮೊದಲ ಕೆಎಂಸಿ ಹಳೆ ವಿದ್ಯಾರ್ಥಿ ಎಂಬ ವಿಶಿಷ್ಟ ಹೆಗ್ಗಳಿಕೆ ಇವರದ್ದು ಮತ್ತು ಅಸೋಸಿಯೇಟ್‌ ಡೀನ್‌ ಮತ್ತು ಡೀನ್‌ ಆಗಿ ಕಾಲೇಜಿನಲ್ಲಿ ದೀರ್ಘ‌ಕಾಲ ಸೇವೆ ಸಲ್ಲಿಸಿದ ಆಡಳಿತಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರು.

ಡೀನ್‌ ಆಗಿ ಅಧಿಕಾರ ವಹಿಸಿ ಕೊಂಡ ತರುವಾಯ ಶ್ರೇಯಾಂಕ ರಹಿತವಾಗಿದ್ದ ಕೆಎಂಸಿ ಮಂಗಳೂರು 2018ರಿಂದ ಇಲ್ಲಿಯವರೆಗೆ ಸತತವಾಗಿ ನಾಲ್ಕು ವರ್ಷ ನೂರಾರು ವೈದ್ಯಕೀಯ ಕಾಲೇಜುಗಳು ಪ್ರತೀ ವರ್ಷವೂ ಆಶಿಸುವ ಎನ್‌ಐಆರ್‌ಎಫ್ ಶ್ರೇಯಾಂಕಗಳ ಘೋಷಿತ ಶ್ರೇಣಿಗಳಲ್ಲಿ ಅಗ್ರ 25ರೊಳಗೆ ಸ್ಥಾನ ಪಡೆದುಕೊಂಡಿರುವುದು ಅವರ ಗಮನಾರ್ಹ ಸಾಧನೆಯಾಗಿದೆ.

ಡಾ| ಪ್ರಭು ಅವರು 2003- 2004ರಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಐಎಂಎ ದ.ಕ. ಶಾಖೆಯ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಯನ್ನು 1990 ಮತ್ತು 1995ರಲ್ಲಿ ಪಡೆದು ಕೊಂಡಿದ್ದಾರೆ. ಅವರು 2000- 2001ರಲ್ಲಿ ಅಸೋಸಿಯೇಶನ್‌ ಫಿಸಿಶಿಯನ್ಸ್ ಆಫ್ ಇಂಡಿಯಾ, ದ.ಕ. ಚಾಪ್ಟರ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯಎಪಿಐ ಕಾನ್ಫರೆನ್ಸ್ 2013 ರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜೀವಮಾನದ ಸಾಧನೆಗಾಗಿ ಗೌರವವನ್ನು ಪಡೆದಿದ್ದಾರೆ.

Advertisement

2010ರಿಂದ ಇಲ್ಲಿಯವರೆಗೆ ಐಎಎಂಆರ್‌ಎ (ಇಂಟರ್‌ನ್ಯಾಶನಲ್‌ ಅಸೋಸಿಯೇಶನ್‌ ಆಫ್ ಮೆಡಿಕಲ್‌ ರೆಗುಲೇಟರಿ ಅಥಾರಿಟೀಸ್‌) ಸದಸ್ಯರಾಗಿ ಫಿಲಡೆಲ್ಫಿಯಾ (2010), ಒಟ್ಟಾವಾ (2012), ಲಂಡನ್‌ (2014)ನಲ್ಲಿ ನಡೆದ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಸಮ್ಮೇಳನಗಳಲ್ಲಿ ಮಾಹೆಯನ್ನು ಪ್ರತಿನಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next