ಉಡುಪಿ: ವೈದ್ಯಕೀಯ ರಂಗದಲ್ಲಿ ವೈದ್ಯರು ತೆರೆಯ ಮುಂದೆ ಹಾಗೂ ಪ್ರಯೋಗಾಲಯ ತಂತ್ರಜ್ಞರು ತೆರೆಯ ಮರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ನಾಗಭೂಷಣ ಉಡುಪ ಹೇಳಿದರು.
ಪ್ರಸಾದ್ ನೇತ್ರಾಲಯದ ಸಹಸಂಸ್ಥೆ ಗಳಾದ ನೇತ್ರಜ್ಯೋತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಮತ್ತು ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ವಿದ್ಯಾಸಂಸ್ಥೆಗಳ ವತಿಯಿಂದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ಪ್ರಯೋಗಾಲಯ ತಂತ್ರಜ್ಞಾನ ಸಮ್ಮೇಳನ “ಮಂಥನ್-2023′ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದಲ್ಲಿಯೂ ಮಹತ್ತರ ಬದಲಾ ವಣೆ ಗಳಾಗಿವೆ, ಆಗುತ್ತಲೇ ಇರು ತ್ತವೆ. ಹೊಸ ಬೆಳವಣಿಗೆಗಳನ್ನು ಅರಿತು ಕೊಳ್ಳಬೇಕಾದುದು ಪ್ರಯೋಗಾ ಲಯ ತಂತ್ರಜ್ಞರ ಜವಾಬ್ದಾರಿ ಎಂದರು.
ಪ್ರೊ| ಕಾಂತಿಲತಾ ಪೈ ಮಾತ ನಾಡಿ, ಪ್ರಯೋಗಾಲಯ ತಂತ್ರಜ್ಞರು, ವಿದ್ಯಾರ್ಥಿಗಳು ಇಂಥ ಸಮ್ಮೇಳನಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರೆ ಪರಿಣತ ಮತ್ತು ಯಶಸ್ವಿ ತಂತ್ರಜ್ಞರಾಗಿ ರೂಪುಗೊಳ್ಳುವರು ಎಂದರು.
Related Articles
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ| ವೀಣಾ ಮಾತನಾಡಿ, ರಕ್ತ ಸಂಗ್ರಹ ಮತ್ತು ರೋಗಿಗಳಿಗೆ ರಕ್ತ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಯೋಗಾಲಯ ತಂತ್ರಜ್ಞರು ಮಹತ್ತರ ಜವಾಬ್ದಾರಿ ಯನ್ನು ಹೊತ್ತಿರುವವರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣ ಪ್ರಸಾದ್ ಮಾತನಾಡಿ, ಸಮ್ಮೇಳನ ದಲ್ಲಿ ಭಾಗವಹಿಸಿದ ಎಲ್ಲರೂ ಇಲ್ಲಿ ಮಂಡಿಸಲ್ಪಟ್ಟ ವಿಷಯಗಳ ಬಗ್ಗೆ ಮಂಥನ ನಡೆಸಿ ತಮ್ಮ ವೃತ್ತಿ ಜೀವನ ದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಮ್ಮೇಳನ ಸಾರ್ಥಕ ಎಂದರು.
ಶಿವಾನಿ ಡಯಾಗ್ನೊಸ್ಟಿಕ್ ಲ್ಯಾಬ್‌ನ ಮುಖ್ಯಸ್ಥ ಪ್ರೊ| ಶಿವಾನಂದ ನಾಯಕ್ ಮಾತನಾಡಿದರು. ಉಜ್ವಲ್ ಸಮೂಹ ಸಂಸ್ಥೆಯ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ನೇತ್ರಜ್ಯೋತಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಪ್ರಾಂಶುಪಾಲ ರಾಜೀಬ್ ಮಂಡಲ, ಆಡಳಿತಾಧಿಕಾರಿ ಅಬ್ದುಲ್ ಖಾದರ್, ಪ್ರಧಾನ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ಪರ್ಕಳ, ಸಮ್ಮೇಳನದ ಆಯೋಜನ ಕಾರ್ಯದರ್ಶಿ ಪುರುಷೋತ್ತಮ, ಸಂಪನ್ಮೂಲ ವ್ಯಕ್ತಿಗಳಾದ ಡಾ| ಶಿವಶಂಕರ್ ಎ.ಆರ್., ಓಂಕಾರೇಶ್ವರ್ ಪಾಟೀಲ್ ಉಪಸ್ಥಿತರಿದ್ದರು.
ನಿವೇದಿತಾ ಸ್ವಾಗತಿಸಿ, ರಕ್ಷಿತಾ ನಿರೂಪಿಸಿ, ಸುಶ್ಮಾ ವಂದಿಸಿದರು.