Advertisement
ವಿಶ್ವ ಏಡ್ಸ್ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ಏಡ್ಸ್ ರೋಗಿಗಳಿಗೆ ಉಚಿತ ಔಷಧ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಐದು ಕೋಟಿ ರೂ.ಹೆಚ್ಚುವರಿ ಅನುದಾನ ಲಭ್ಯವಿದ್ದು, ಜತೆಗೆ ರಾಜ್ಯ ಸರ್ಕಾರದಿಂದ ನೆರವು ನೀಡುವ ಮೂಲಕ ಬಿಪಿಎಲ್ ಮತ್ತು ಎಪಿಎಲ್ ಒಳಗೊಂಡಂತೆ ಎಲ್ಲಾ ವರ್ಗದ ಏಡ್ಸ್ ರೋಗಿಗಳಿಗೆ ವಾರ್ಷಿಕ ತಲಾ ಐದು ಲಕ್ಷ ರೂ. ವೆಚ್ಚ ಮಾಡುವ ಮೂಲಕ ಉಚಿತ ಔಷಧಿಯನ್ನು ವಿತರಿಸಬೇಕು. ಈ ನಿಟ್ಟಿನಲ್ಲಿ ಏಡ್ಸ್ ನಿಯಂತ್ರಣ ಸೊಸೈಟಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
Related Articles
Advertisement
ಇದನ್ನೂ ಓದಿ:ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್ ಬೆಳವಣಿಗೆಗೆ ಕಾರಣವೇನು…
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ಉದಯ್ ಬಿ.ಗರುಡಾಚಾರ್ ವಹಿಸಿಕೊಂಡಿದ್ದರು. ಆರೋಗ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಈ ವೇಳೆ ಏಡ್ಸ್ ನಿಯಂತ್ರಣದಲ್ಲಿ ಉತ್ತಮ ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಮತ್ತು ಏಡ್ಸ್ ನಿಯಂತ್ರಣ ಸೊಸೈಟಿ ಸಿಬ್ಬಂದಿಗೆ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. 2030 ಏಡ್ಸ್ ನಿರ್ಮೂಲನೆ ಗುರಿ
ಕರ್ನಾಟಕದಲ್ಲಿ 2030 ವೇಳೆ ಏಡ್ಸ್ ನಿರ್ಮೂಲನೆ ಮಾಡಬೇಕು ಎಂಬ ಸಂದೇಶವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಹಾದಿಯಲ್ಲಿ ಸರ್ಕಾರದ ಜತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಜಾಗೃತಿ ಮೂಡಿಸು, ಸ್ವಯಂ ಮುಂಜಾಗ್ರತೆ ಕೈಗೊಳ್ಳುವ ಹಾಗೂ ಏಡ್ಸ್ ರೋಗಿಗಳನ್ನು ದೂಷಿಸದೆ ಸಾಮಾನ್ಯರಂತೆ ನಡೆಸಿಕೊಳ್ಳುವ ಹಾದಿಯಲ್ಲಿ ಸಾಗಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.