Advertisement

ಶಿಕಾರಿಪುರದಲ್ಲಿ ಯಡಿಯೂರಪ್ಪರನ್ನು ಹಾಡಿ ಹೋಗಳಿದ ಸಚಿವ ಡಾ.ಸುಧಾಕರ್

02:08 PM May 02, 2022 | Team Udayavani |

ಶಿಕಾರಿಪುರ: ಪಟ್ಟಣದಲ್ಲಿ ಸೋಮವಾರ ನಡೆದ ಸರ್ಕಾರಿ ಆಸ್ಪತ್ರೆಯ ಮೇಲ್ದರ್ಜೆಗೇರಿಸುವ ಕಾರ್ಯಕ್ರಮದಲ್ಲಿ ಭಾಗಿಯಾದ ಆರೋಗ್ಯ ಸಚಿವ ಡಾ.ಸುಧಾಕರ್ ಮಾಜಿ ಸಿಎಂ, ಕ್ಷೇತ್ರದ ಶಾಸಕ ಬಿ. ಎಸ್ . ಯಡಿಯೂರಪ್ಪರನ್ನು ಅವರನ್ನು ಹಾಡಿ ಹೋಗಳಿದರು.

Advertisement

ನಮಗೆ ಸರ್ಕಾರದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೆ ಯಡಿಯೂರಪ್ಪ ಅವರು, ಶಿಕಾರಿಪುರದಂತ ಒಂದು ತಾಲ್ಲೂಕಿನಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಿದ್ದಾರೆ. ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದರು.

ದೇಶದ ಜಿಡಿಪಿ ಹೆಚ್ಚಳಕ್ಕೆ ಆರೋಗ್ಯದ ಕೊಡುಗೆಯೂ ಇದೆ. ಅದಕ್ಕಾಗಿ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಿಪಿಎಲ್ ಕಾರ್ಡುದಾರ ರ ಜೊತೆಗೆ ಎಪಿಎಲ್ ಕಾರ್ಡುದಾರ ರಿಗೂ ಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಇತಿಹಾಸದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ದಾಖಲೆ ಮಟ್ಟದಲ್ಲಿ ವೈದ್ಯರ ನೇಮಕ ಆಗಿದೆ. ಹಾಗಾಗಿ ಕೋವಿಡ್ ನ್ನು ನಾವು ಸಮರ್ಥವಾಗಿ ಎದುರಿಸಿದ್ದೇವೆ. ಇದರಿಂದಾಗಿ ನನಗೆ ಸದನದಲ್ಲಿ ವೈದ್ಯರ ಕೊರತೆಯ ಪ್ರಶ್ನೆ ಎದುರಾಗುತ್ತಿಲ್ಲ. ಲಭ್ಯತೆ, ಉಚಿತ ಮತ್ತು ಗುಣಮಟ್ಟ ಎಂಬ ಉದ್ಧೇಶದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯವನ್ನು ಶಿಕಾರಿಪುರಕ್ಕೆ ನೀಡಲಾಗುತ್ತದೆ. ಯಡಿಯೂರಪ್ಪ ಅವರ ಅಪೇಕ್ಷೆಯಂತೆ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಶೀಘ್ರದಲ್ಲಿ ಇದರ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದರು.

ಪ್ರಿಯಾಂಕ್ ಖರ್ಗೆಗೆ ತಿರುಗೇಟು

Advertisement

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ , ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಮೊದಲು ಸತ್ಯವನ್ನು ಅರ್ಥ ಮಾಡಿಕೊಂಡು ಮಾತನಾಡೋದನ್ನ ಕಲಿಯಬೇಕು. ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಟಪಡಿಸಿದೆ. ಅಮೆರಿಕಾದಿಂದ ಆಗಲಿ, ವಿದೇಶದಿಂದಾಗಲಿ ಬಿಟ್ ಕಾಯಿನ್ ಕಳುವು ಆಗಿದೆ ಅಂತಾಗಲಿ ಯಾವುದೇ ಕಂಪನಿಗಳಿಂದ ಆಗಲಿ ಇದರಲ್ಲಿ ಭಾರತದ ಪಾಲಿದೆ ಎಂಬುದನ್ನು ಹೇಳಿಲ್ಲ. ಭಾರತಕ್ಕೆ ವಿಷಯ ವಿನಿಮಯ ಮಾಡುವಂತಹ ಕೆಲಸ ಸಹ ಆಗಿಲ್ಲ. ಈಗಾಗಿ ಈ ಬಗ್ಗೆ ತನಿಖೆ ಪ್ರಶ್ನೆಯೇ ಇಲ್ಲ.ಅದನ್ನು ಇಟ್ಟುಕೊಂಡು ಮೂರನೇ ಸಿಎಂ ಎನ್ನುವುದು ಹಾಸ್ಯಾಸ್ಪದ. ಎಲ್ಲದರಲ್ಲೂ ರಾಜಕೀಯ ಲಾಭ ಗಳಿಸಲು, ಇಲ್ಲದಿರುವ ವಿಷಯವನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಾರೆ ಎಂದರು.

ಪಿಎಸ್ ಐ ಪರೀಕ್ಷೆ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆ ಹಂತದಲ್ಲಿ ಇರುವಾಗ ಎಲ್ಲರೂ ಸಹ ಮಾತನಾಡೋದು ಸರಿಯಲ್ಲ.ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಸರಕಾರ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅದಕ್ಕೆ ತಾರ್ಕಿಕ ಅಂತ್ಯವನ್ನು ಸರಕಾರ ಹಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next