Advertisement
ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ‘ಪ್ರಾರಂಭದಿಂದ ಹೇಳುತ್ತಿದ್ದೇನೆ. ವಿಶ್ವವ್ಯಾಪಿಯಾಗಿ ಹರಡುತ್ತಿರುವ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ,ಅಂತರ್ ರಾಷ್ಟ್ರೀಯ ವಿಮಾನ ಬಂದ್ ಮಾಡಿಲ್ಲ, ಆದರೆ ನಿಯಂತ್ರಣ ಮಾಡಲು, ಕಡಿಮೆ ಮಾಡಲು ಸಾಧ್ಯವಿದೆ’ ಎಂದರು.
Related Articles
Advertisement
‘ರಾಜ್ಯದಲ್ಲಿ 99 % ಮೊದಲ ಡೋಸ್ ಪೂರ್ಣವಾಗಿದೆ.80 % 2 ನೇ ಡೋಸ್ ಪೂರ್ಣವಾಗಿದ್ದು ನಾವು ಉತ್ತಮ ಸಾಧನೆ ಮಾಡಿದ್ದೇವೆ’ ಎಂದರು.
’15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ವೇಗ ಪಡೆದಿದ್ದು, 4 ದಿನಕ್ಕೆ 42 % ಆಗಿದೆ,ಇಡೀ ದೇಶದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ ಆಂಧ್ರ ನಮಗಿಂತ ಮುಂದಿದೆ’ ಎಂದರು.
’64 ಲಕ್ಷದ 27 ಸಾವಿರ ಡೋಸ್ ಲಸಿಕೆ ನಮ್ಮಲ್ಲಿ ದಾಸ್ತಾನು ಇದೆ. ಯಾವುದೇ ಕೊರತೆ ಇಲ್ಲ’ ಎಂದು ಸಚಿವರು ತಿಳಿಸಿದರು.
‘ಪಾಸಿಟಿವ್ ರೇಟ್ ರಾಜ್ಯದಲ್ಲಿ 3.95 % ಆಗಿದೆ, ಬೆಂಗಳೂರು ನಗರ , ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ ಮತ್ತು ಕೋಲಾರದಲ್ಲಿ ಹೆಚ್ಚು ಪಾಸಿಟಿವ್ ಆಗುತ್ತಿದೆ.ಅದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.
‘ವಿಶ್ವ ಆರೋಗ್ಯ ಸಂಸ್ಥೆ ಸುದ್ದಿಗೋಷ್ಠಿಯಲ್ಲಿ ಹೇಳಿದ, ಒಂದು ರಾಜ್ಯ, ಒಂದು ದೇಶದಲ್ಲಿ ಸಂಪೂರ್ಣ ಲಸಿಕಾಕರಣ ಆದರೆ ಸೋಂಕು ತಡೆಯಲು ಸಾಧ್ಯವಿಲ್ಲ. ವಿಶ್ವದಲ್ಲಿ ಸಂಪೂರ್ಣ ಲಸಿಕಾಕರಣವಾದರೆ ಮಾತ್ರ ಸೋಂಕು ನಿರ್ಮೂಲನೆ ಸಾಧ್ಯ’ ಎನ್ನುವ ವಿಚಾರ ಉಲ್ಲೇಖಿಸಿದರು.
‘ದೂರದೃಷ್ಟಿಯ ನಾಯಕ ನರೇಂದ್ರ ಮೋದಿ ಅವರು ನಮ್ಮ ದೇಶಕ್ಕೆ ಸಿಕ್ಕಿರುವುದು ಹೆಮ್ಮೆ , ಅನೇಕ ಬಡ ದೇಶಗಳು , ಲಭ್ಯತೆ ಇಲ್ಲದ ದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಿದ್ದಾರೆ. ವಸುದೈವ ಕುಟುಂಬಕಂ ಮಾತಿನಂತೆ ಕರ್ತವ್ಯ ಮಾಡಿದ್ದಾರೆ’ ಎಂದರು.