Advertisement
ಇದೇ ಸಂದರ್ಭದಲ್ಲಿ ಮಹಿಳಾ ವಿಭಾಗದ ಸದಸ್ಯೆ ಜ್ಯೋತಿ ಆರ್. ಎನ್. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಸಂಘದ ಮಹಿಳಾ ವಿಭಾಗವು ವರ್ಷದ ಅತ್ಯುತ್ತಮ ಮಹಿಳಾ ಸಾಧಕಿಯೋರ್ವರಿಗೆ ಪ್ರತೀ ವರ್ಷ ನೀಡುತ್ತಾ ಬರುತ್ತಿರುವ ಪ್ರೇಮಾ ನಾರಾಯಣ ರೈ ಪ್ರಶಸ್ತಿಯನ್ನು ಈ ಬಾರಿ ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನವಿಮುಂಬಯಿಯ ಹೆಸರಾಂತ ವೈದ್ಯೆ ಡಾ| ಶಾಲಿನಿ ವಾಸುದೇವ ಶೆಟ್ಟಿ ಎಂ. ಡಿ. ಇವರಿಗೆ ಪ್ರದಾನ ಮಾಡಲಾಯಿತು.
Related Articles
Advertisement
ಪ್ರಸಿದ್ಧ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ ಹೆಸರಿನಲ್ಲಿ ಅವರ ಪುತ್ರಿ ಭೂಮಿಕಾ ಎಂ. ಶೆಟ್ಟಿ ಅವರು ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಪ್ರತೀ ವರ್ಷ ಆಯೋಜಿಸುತ್ತಿರುವ ಬಂಟರವಾಣಿ ಲೇಖನ ಸ್ಪರ್ಧೆಯಲ್ಲಿ ಈ ಬಾರಿ ಬಹುಮಾನ ಪಡೆದ ಸ್ಪರ್ಧಿಗಳ ಹೆಸರನ್ನು ಬಂಟರ ವಾಣಿಯ ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಘೋಷಿಸಿದರು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಮಾತನಾಡಿ, ಡಾ| ಶಾಲಿನಿ ವಿ. ಶೆಟ್ಟಿ ಅವರು ತನ್ನ ಆತ್ಮವಿಶ್ವಾಸ, ಅಪರಿಮಿತ ಪರಿಶ್ರಮ ಮತ್ತು ಛಲದಿಂದ ಮುಂದೆ ಬಂದವರು. ಕನ್ನಡ ಮಾಧ್ಯಮದಲ್ಲಿ ಕಲಿತರೂ ಬದುಕಿನಲ್ಲಿ ಸಾಧನೆಯ ಮೂಲಕ ಏನನ್ನೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟವರು. ಅವರ ಸಾಧನೆ
ಇತರರಿಗೂ ಮಾದರಿಯಾಗಿದೆ ಎಂದು ತಿಳಿಸಿ, ಡಾ| ಶಾಲಿನಿ ವಿ. ಶೆಟ್ಟಿ ಅವರ ತಂದೆ ಕೆ. ಕೆ. ಶೆಟ್ಟಿ ಅವರ ಬಗ್ಗೆ ಇರುವ ಅಪಾರ ಗೌರವ, ಕುಟುಂಬದೊಂದಿಗಿನ ಅನ್ಯೋನ್ಯ ಸಂಬಂಧದ ಬಗ್ಗೆ ತಿಳಿಸಿ ಕೆ. ಕೆ. ಶೆಟ್ಟಿ ದಂಪತಿಯನ್ನು ಅಭಿನಂದಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಮೂರು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಮಹಿಳಾ ಪದಾಧಿಕಾರಿಗಳು, ಸದಸ್ಯೆಯರು ನೀಡಿದ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ. ಮುಖ್ಯವಾಗಿ ನಮ್ಮ ದಾನಿಗಳ ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಬಂಟರ ಸಂಘದ ಮಹಿಳಾ ವಿಭಾಗಕ್ಕೆ ದೇಣಿಗೆ ನೀಡಿ ಸಹಕರಿಸಿದ ಪ್ರೇಮಾ ಸುಧಾಕರ ಶೆಟ್ಟಿ ಅವರನ್ನು ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಅವರು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಆರಂಭದಲ್ಲಿ ಮಹಿಳಾ ವಿಭಾಗದಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ:ಚಿಣ್ಣರ ಬಿಂಬದ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರ: ಪ್ರಕಾಶ್ ಭಂಡಾರಿ
ಬಂಟರ ಸಂಘದ ಮಹಿಳಾ ವಿಭಾಗವು ತನ್ನನ್ನು ಗೌರವಿಸಿದ್ದಕ್ಕೆ ಕೃತಜ್ಞಳಾಗಿದ್ದೇನೆ. ನಾನು ಕನ್ನಡ ಮಾಧ್ಯಮದಲ್ಲಿ ಕಲಿತವಳು. ಮುಂದೆ ಇಂಗ್ಲಿಷ್ ಕಲಿತು ವೈದ್ಯಕೀಯ ಕ್ಷೇತ್ರಕ್ಕೆ ಬರಬೇಕು ಎಂಬ ಹಂಬಲ ನನ್ನಲ್ಲಿತ್ತು. ಅದಕ್ಕಾಗಿ ಅಪಾರ ಪರಿಶ್ರಮಪಟ್ಟು ಇಂಗ್ಲಿಷ್ ಮಾಧ್ಯಮದಲ್ಲಿ ಓದು ಮುಂದುವರಿಸಿ ಮುಂದೆ ಎಂಬಿಬಿಎಸ್, ಆ ಬಳಿಕ ಎಂಡಿ ಮುಗಿಸಿದೆ. ನಾನಿಂದು ವೈದ್ಯಳಾಗಿ ಯಶಸ್ಸು ಹೊಂದಲು ನನ್ನ ಮಾತಾಪಿತರು ನೀಡಿದ ಪ್ರೋತ್ಸಾಹ, ಪ್ರೇರಣೆ ಕಾರಣವಾಗಿದೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಆಶ್ರಮದಲ್ಲಿರುವ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ಕಾಳಜಿಯಿಂದ ಸೇವೆಗೈಯುತ್ತಿರುವ ನನಗೆ ನನ್ನ ವೃತ್ತಿಯಲ್ಲಿ ಸಂತೃಪ್ತಿ ದೊರಕಿದೆ. ಸಂಘದ ಮಹಿಳಾ ವಿಭಾಗದ ಮಹಿಳೆಯರ ಆರೋಗ್ಯದ ಬಗ್ಗೆ ವೈದ್ಯಕೀಯ ಶಿಬಿರ ಮಾಡುವುದಿದ್ದಲ್ಲಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ.
–ಡಾ| ಶಾಲಿನಿ ವಾಸುದೇವ ಶೆಟ್ಟಿ, ಪ್ರಶಸ್ತಿ ಪುರಸ್ಕೃತರು