Advertisement

ಡಾ|ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ

04:35 PM Feb 03, 2019 | |

ಮುಂಬಯಿ: ಅಗಲಿದ ಶಿಕ್ಷಕರಿಗೆ ಗೌರವ ನೀಡಿರುವುದನ್ನು ನೋಡಿ ಹೃದಯ ತುಂಬಿದೆ. ಡಾ| ಶೆಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿಯಾಗಿದ್ದು, ಅವರ ಕಾಯಕ ಸಿದ್ಧಾಂತ ಎಲ್ಲರಿಗೂ ಮಾದರಿಯಾಗಿದೆ. ಇದಕ್ಕೆ ಇಂದಿನ ಕಿಕ್ಕಿರಿದ ಸಭೆಯೇ ಸಾಕ್ಷಿ. ಈ ಕಾರ್ಯಕ್ರಮದಲ್ಲಿ ಕಳೆದ 6 ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ಆರಾಧನಾ ವೃಂದ ಕೇವಲ ಧಾರ್ಮಿಕ ಸೇವೆಯಲ್ಲದೆ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆಯನ್ನು ಮಾಡಿ ಜನಮನ್ನಣೆಯನ್ನು ಪಡೆದಿದೆ. ಅಯ್ಯಪ್ಪ ದೇವರ ಅನುಗ್ರಹ ನಿಮ್ಮ ಮೇಲೆ ಸದಾಯಿರಲಿ ಎಂದು ಫೋರ್ಟ್‌ ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಜೆ. ಎಂ. ಕೋಟ್ಯಾನ್‌ ಅವರು ನುಡಿದರು.

Advertisement

ಜ. 20ರಂದು ಭಾಯಂದರ್‌ ಪೂರ್ವದ ಲಾಲ್‌ಬಹದ್ದೂರ್‌ ಶಾಸ್ತ್ರೀ ಸಭಾಂಗಣದಲ್ಲಿ ನಡೆದ ಶ್ರೀ ಅಯ್ಯಪ್ಪ ಆರಾಧನಾ ವೃಂದ ಆಯೋಜಿಸಿದ್ದ ಪ್ರಸಾದ ವಿತರಣೆ, ಅರಸಿನ ಕುಂಕುಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು. ಡಾ| ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರು, ಶಿಕ್ಷಣ ತಜ್ಞ ದಿ| ಡಾ| ಸಂಜೀವ ಶೆಟ್ಟಿ ಅವರು ನಡೆದು ಬಂದ ದಾರಿ, ಏರಿದ ಎತ್ತರ ಹಾಗೂ ಅವರ ಸಾಧನೆಯ ಶಿಖರವನ್ನು ನಾವು ಮುಟ್ಟಲಾಗದಿದ್ದರೂ ಅವರ ನೆನಪು ಬರುವಂತೆ ಆರಾಧನಾ ಸಂಸ್ಥೆ ಮಾಡಿದೆ. ಅವರ ನೆನಪಿನ ಪ್ರಶಸ್ತಿ ಪ್ರಧಾನ ಕಾರ್ಯ ಶ್ಲಾಘನೀಯ. ತಾವು ಕೊಟ್ಟ ಕನ್ನಡ ಸಂಜೀವಿನಿ ಬಿರುದು ಹಾಗೂ ಪ್ರಶಸ್ತಿಯನ್ನು ಸಂತಸದಿಂದ ಸ್ವೀಕರಿಸಿದ್ದೇನೆ ಎಂದು ನುಡಿದರು.

ಪ್ರಶಸ್ತಿಯ ಪ್ರಾಯೋಜಕರಾದ ಚಿತ್ರಾಪು ಕೆ. ಎಂ. ಕೋಟ್ಯಾನ್‌, ಕುಬೆವೂರು ಡಾ| ಸಂಜೀವ ಶೆಟ್ಟಿ ಅವರ ಕನ್ನಡ ಸೇವೆಯ ಬಗ್ಗೆ ಮಾತನಾಡಿ, ನೆರೆದ ಸಭೆಗೆ ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರ ಸಾಹಿತ್ಯ ಸೇವೆಯ ಬಗ್ಗೆ ವಿವರಿಸಿದರು. ಲತಾ ಸಂತೋಷ್‌ ಶೆಟ್ಟಿ ದಂಪತಿಯನ್ನು ವೇದಿಕೆಯ ಗಣ್ಯರು ಪ್ರಶಸ್ತಿ, ಫಲಪುಷ್ಪ, ಶಾಲು ಹೊದೆಸಿ ಸಮ್ಮಾನಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅರುಣ್‌ ಕಾಮರ್ಸ್‌ ಕ್ಲಾಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅರುಣ್‌ ಪಕ್ಕಳ ಅವರು ಮಾತನಾಡಿ, ಸಂಜೀವ ಶೆಟ್ಟಿಯವರಂತಹ ಮಹಾನ್‌ ಶಿಕ್ಷಣ ತಜ್ಞರನ್ನು ನೆನಪಿಸಿ ಅವರ ಹೆಸರಿನ ಪ್ರಶಸ್ತಿ ಪ್ರಧಾನಿಸುವ ಕಾರ್ಯ ಮಾಡುತ್ತಿರುವ ಆರಾಧನಾ ಸಂಸ್ಥೆಯ ಕಾರ್ಯ ಅಭಿನಂದನೀಯ. ಅದಕ್ಕೆ ಬೇಕಾದ ಜನರನ್ನೇ ಆರಿಸಿ ಪ್ರಶಸ್ತಿ ನೀಡಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಸೇವೆ ನಿರಂತರವಾಗಿ ನಡೆಯುತ್ತಿರಲಿ ಎಂದರು.

ಸಂಸ್ಥೆಯ ಅಧ್ಯಕ್ಷ ಸುಕೇಶ್‌ ಶೆಟ್ಟಿ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ವೇದಿ ಕೆಯಲ್ಲಿ ಗೌರವಾಧ್ಯಕ್ಷರುಗಳಾದ ಪ್ರಮೋದ್‌ ಕೋಟ್ಯಾನ್‌, ರವಿಕಾಂತ್‌ ಶೆಟ್ಟಿ ಇನ್ನ, ಗುಣಪಾಲ ಉಡುಪಿ, ಉಪಾಧ್ಯಕ್ಷ ಉದಯ ಹೆಗ್ಡೆ, ಗುರುಸ್ವಾಮಿ ಸುಧಾಕರ ಪೂಜಾರಿ, ಸಮಾಜ ಸೇವಕಿ ಸುಮಿತ್ರಾ ಕರ್ಕೇರ, ಮಯೂರಿ ಗಣೇಶ್‌ ಬೋಯಿರ್‌, ಆರಾಧನಾ ಫ್ರೆಂಡ್ಸ್‌ನ ಕಾರ್ಯಾಧ್ಯಕ್ಷೆ ಪ್ರೇಮಾ ಮಾಧವ ಹೆಗ್ಡೆ, ಕಾರ್ಯದರ್ಶಿ ಶೈಲಜಾ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭದಲ್ಲಿ ಆರಾಧನಾ ಫ್ರೆಂಡ್ಸ್‌ನ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ಸ ಮ್ಮುಖದಲ್ಲಿ ಪ್ರತಿಭಾವಂತ ಮಕ್ಕಳಾದ ಶ್ರೀನಿಧಿ ಎಸ್‌. ಶೆಟ್ಟಿ, ಕರಾಟೆಪಟು ರಿಷಬ್‌ ಶೆಟ್ಟಿ, ಮೋಕ್ಷಾ ಎಸ್‌. ಪೂಜಾರಿ ಇವರನ್ನು ಗೌರವಿಸಲಾಯಿತು. ಆರಂಭದಲ್ಲಿ ಆರಾಧನಾ ಫ್ರೆಂಡ್ಸ್‌ ಸದಸ್ಯೆಯರು, ಗುರುಸ್ವಾಮಿ ಸುಧಾಕರ ಪೂಜಾರಿ ಅವರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಆನಂತರ ಅರಸಿನ ಕುಂಕುಮ, ಭಜನಾ ಕಾರ್ಯಕ್ರಮ ನಡೆಯಿತು. ಭಜನೆಯಲ್ಲಿ ಹಾರ್ಮೋನಿಯಂ ಮತ್ತು ತಬಲಾದಲ್ಲಿ ಬಾಲಾಜಿ ಭಜನಾ ಮಂಡಳಿಯ ರೂವಾರಿ ಜತೀಶ್‌ ಕುಂದರ್‌, ಗಗನ್‌ ಮೆಂಡನ್‌ ಸಹಕರಿಸಿದರು. ಸದಸ್ಯೆಯರು ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.

ವೃಂದದ ಸರ್ವ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಆರಾಧನಾ ಫ್ರೆಂಡ್ಸ್‌ನ ಪ್ರೇಮಾ ಹೆಗ್ಡೆ, ವನಿತಾ ಹೆಗ್ಡೆ, ಶೈಲಜಾ ಸುಧಾಕರ ಶೆಟ್ಟಿ, ಪ್ರಮೀಳಾ ಶೆಟ್ಟಿ, ಸರೋಜಿನಿ ಪೂಜಾರಿ, ಸುನಿತಾ ಕೋಟ್ಯಾನ್‌, ಸುರೇಖಾ ಶೆಟ್ಟಿ, ಜಯಮಾಲಾ ಅಶೋಕ್‌ ಶೆಟ್ಟಿ, ಮಮತಾ ಹೆಗ್ಡೆ, ವಾರಿಜಾ ಪೂಜಾರಿ, ಆಶಾ ವಸಂತ್‌ ಶೆಟ್ಟಿ, ಸುನಿಲ್‌ ಸುವರ್ಣ, ನಿರ್ಮಲಾ ಶೆಟ್ಟಿ, ವೀಣಾ ಶೆಟ್ಟಿ, ಶಶಿಕಲಾ ಶೆಟ್ಟಿ, ಲಕ್ಷ್ಮೀ ಶೆಟ್ಟಿ, ಲಲಿತಾ ನಾಗೇಶ್‌ ಪೂಜಾರಿ, ರಾಧಾ ಶೆಟ್ಟಿ, ಉಷಾ ಅಂಚನ್‌, ಶಶಿಕಲಾ ಪೂಜಾರಿ, ಸುಶೀಲಾ ಶೆಟ್ಟಿ, ವಿದ್ಯಾ ಶೆಟ್ಟಿ, ಸುನಿತಾ ಕರ್ಕೇರ, ಕುಶಲಾ ಶೆಟ್ಟಿ, ಶ್ರೀದೇವಿ ಶೆಟ್ಟಿ, ಲಕ್ಷ್ಲೀ ಐಲ್‌, ಇಂದಿರಾ ಶೆಟ್ಟಿ, ಪುಷ್ಪಾ ಶೆಟ್ಟಿ, ವಿದ್ಯಾ ಸಾಲ್ಯಾನ್‌, ವಸಂತಿ ಅಶೋಕ್‌ ಶೆಟ್ಟಿ, ಅನಿತಾ ಗಣೇಶ್‌ ಶೆಟ್ಟಿ ಮೊದಲಾದವರು ಸಹಕರಿಸಿದರು. ಅರುಣ್‌ ಶೆಟ್ಟಿ ಎರ್ಮಾಳ್‌ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸುಧಾಕರ ಪೂಜಾರಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next