ಕನ್ನಡ ಅಧ್ಯಾಪಕನಾಗಿದ್ದ ನಾನು, ಡಾ.ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದೆ.. ಕನ್ನಡ ಎಂ.ಎ.ಮಾಡುವ ಸಂದರ್ಭದಲ್ಲಿ ನಾವಿಬ್ಬರೂ ಒಂದೇ ಗರಡಿಯಲ್ಲಿಕಲಿತವರಾದರೂ ನನಗಿಂತ ಅವರು 4-6 ವರ್ಷ ಕಿರಿಯರು.ಹೀಗಾಗಿ ನಮ್ಮಿಬ್ಬರ ಮಧ್ಯೆ ಸಂಪರ್ಕ ಇರಲಿಲ್ಲ. ಮುಂದೆ ನಾನುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರುಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಇದಿನಬ್ಬ ಅವರಿಗೆ ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಸಿದ್ದಲಿಂಗಯ್ಯನವರುಪ್ರಾಧಿಕಾರದ ಅಧ್ಯಕ್ಷರಾದಾಗ ನಮ್ಮಿಬ್ಬರಿಗೂ ಪರಿಚಯವಿದ್ದವರು, ನನ್ನನ್ನು ಅವರ ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಳ್ಳುವಂತೆ ಸೂಚಿಸಿದರು. ಆದರೆ ಸಿದ್ದಲಿಂಗಯ್ಯನವರು ಆಮಾತಿಗೆ ಕಿವಿಗೊಡಲಿಲ್ಲ. ಎಂದಿನಂತೆ ನಾನು ನನ್ನ ಮಾತೃಇಲಾಖೆಯಲ್ಲಿ, ಪ್ರಾಚಾರ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ.
ನಾಲ್ಕಾರು ತಿಂಗಳು ಕಳೆದಿರಬಹುದು; ಒಂದು ದಿನ ಇದ್ದಕ್ಕಿದ್ದಂತೆ ಮಿತ್ರ ಮರಿಶಾಮಾಚಾರ್ ನನಗೆ ಫೋನ್ ಮಾಡಿ, ಶ್ರೀಜೆ.ಎನ್.ಶಾಮರಾವ್ ಅವರ ಮೂಲಕ ಕವಿಗಳನ್ನುಭೇಟಿಯಾಗಲು ತಿಳಿಸಿದರು. ಅದರಂತೆ ಮುಂದಿನ ಭಾನುವಾರಭೇಟಿಯಾಗಿ ಪರಿಚಯ ಮಾಡಿಕೊಂಡೆ. ನನ್ನನ್ನು ಆಪ್ತಕಾರ್ಯದರ್ಶಿಯಾಗಿ ನೇಮಕ ಮಾಡಿ ಕೊಳ್ಳಲುಒಪ್ಪಿಗೆ ಕೊಡಬೇ ಕೆಂದು ಕೋರಿ ದರು. ನನಗೂಬೆಂಗಳೂರಿಗೆ ಬರ ಬೇಕಿ ದ್ದುದ ರಿಂದ ಒಪ್ಪಿದೆ.
ಅವರಮಾಮೂಲಿ ಸ್ವಭಾವದಂತೆ ಇವತ್ತು, ನಾಳೆ ಎಂದುತಳ್ಳುತ್ತ ಬಂದರು. ಬೇಸತ್ತ ನಾನು ಅವರಿಗೆ “ದಯವಿಟ್ಟು ಒಂದು ತೀರ್ಮಾನ ತೆಗೆ ದುಕೊಳ್ಳಿ’ ಎಂದುಸ್ವಲ್ಪ ನೇರವಾಗಿ ತಿಳಿಸಿದೆ. ಮಾರನೇ ದಿನವೇಈ ಹಿಂದೆ ಇದ್ದವರನ್ನು ರಿಲೀವ್‌ಮಾಡಿ ನನ್ನನ್ನು ನೇಮಕ ಮಾಡಿಕೊಂಡರು. ಮುಂದೆ ಸುಮಾರು 7ವರ್ಷ ಗಳ ಕಾಲ ನನ್ನ ಮತ್ತು ಅವರ ಒಡನಾಟಕಚೇರಿಯಲ್ಲಿಯೂ, ಮುಂದಿನ ಹತ್ತು ವರ್ಷಗಳ ಕಾಲಗೆಳೆಯನಾಗಿಯೂ ಮುಂದುವರಿ ಯಿತು. ಅವರ ಬಗ್ಗೆಒಂದೇ ಮಾತಿನಲ್ಲಿ ಹೇಳುವುದಾದರೆ, ಅವರುಮಹಾನ್ ಮಾನವತಾವಾದಿ. ಅತ್ಯುತ್ತಮ ಹಾಸ್ಯ ಪ್ರಜ್ಞೆ ಇದ್ದವರು, ಪ್ರಾಮಾಣಿಕರು. ಕೆಲವು ಬಾರಿಟೀಕೆಗೆ ಗುರಿ ಯಾಗುವಷ್ಟು ಜಾಣ ರುಹಾಗೂ ಮೃದು ಸ್ವಭಾವ ದವರು. ಅವರೊಂದಿಗೆ ಗಂಟೆಗಟ್ಟಲೆ, ತಿಂಗಳುಗಟ್ಟಲೆ ಚರ್ಚಿಸಿದ್ದೇನೆ,
ಹರಟೆ ಹೊಡೆದಿದ್ದೇನೆ.ಹರಿತವಾದ ವ್ಯಂಗ್ಯವನ್ನು ಅರ್ಥ ಮಾಡಿಕೊಳ್ಳುವ ಶಕ್ತಿಇದ್ದವರಿಗೆ ಸಿದ್ದಲಿಂಗಯ್ಯನವರು ನಯವಾಗಿಯೇ ಬಿಸಿಮುಟ್ಟಿಸಬಲ್ಲವರಾಗಿದ್ದರು.ಸಿದ್ದಲಿಂಗಯ್ಯನವರ ಬಹುದೊಡ್ಡ ಗುಣ ಎಂದರೆ, ಅವರಿಗೆ”ನಾನು ಬಾಸ್’ ಎಂಬ ಹಮ್ಮು ಇರಲಿಲ್ಲ. ಉಳಿದ ನೌಕರರನ್ನುಇವರು ನನ್ನ ಕೈಕೆಳಗಿನವರು ಎಂದು ನೋಡುವ ಬುದ್ಧಿ ಅವರಿಗೆಎಂದೂ ಬರಲಿಲ್ಲ.”ಕಚೇರಿಯಲ್ಲಿ ಇರುವ ನಾವೆಲ್ಲರೂ ಒಂದೇಕುಟುಂಬಕ್ಕೆ’ ಸೇರಿದವರು ಎಂಬ ಮನೋಭಾವ ಅವರಿಗಿತ್ತು.
ದಲಿತಕವಿ ಎಂದು ಅವರು ಕರೆಸಿಕೊಂಡರು ನಿಜ, ಆದರೆ ಉಳಿದಜಾತಿಯ ಜನರ ಬಗ್ಗೆ ಅವರಿಗೆ ದ್ವೇಷವಿರಲಿಲ್ಲ. ಯಾರೇ ಬಂದುಸಹಾಯ ಕೇಳಿದರೂ ತಕ್ಷಣ ಸ್ಪಂದಿಸುತ್ತಿದ್ದರು.”ಎಲ್ಲ ಜಾತಿಯ ಬಡವರು ಬಂದರುಎಲ್ಲ ಮತಗಳ ಶೋಷಿತರು’- ಎಂದು ಬರೆದ ಸಿದ್ದಲಿಂಗಯ್ಯನವರು, ಬದುಕಿನಲ್ಲಿಯೂಅದೇ ತತ್ವವನ್ನು ನಂಬಿದ್ದರು. ಎಲ್ಲಾ ಮತಗಳಲ್ಲಿಯೂ ಬಡವರಿದ್ದಾರೆ. ಅವರ ಶೋಷಣೆ ನಿಲ್ಲಬೇಕು, ಬಡವರ ಕಷ್ಟಗಳುಕೊನೆಯಾಗಬೇಕು ಎಂದು ಸದಾ ಹೇಳುತ್ತಿದ್ದರು. ಅಂಥವ್ಯಕ್ತಿಯನ್ನು ಕಳೆದುಕೊಂಡು ನಾಡು ಬಡವಾಗಿದೆ.
ಪ್ರೊ. ಮುಕುಂದನ್