Advertisement

ವಚನಗಳ ಅಧ್ಯಯನಕ್ಕೆ ಆದ್ಯತೆ ನೀಡಲು ಡಾ|ಸಾದರ ಸಲಹೆ

03:14 PM Apr 30, 2017 | |

ಧಾರವಾಡ: ಕಾಯಕ ಯೋಗಿ ಬಸವಣ್ಣನವರು ಪೂಜಿಸಿದ “ಲಿಂಗ’ ಜಾತಿಯ ಪ್ರತೀಕ ಎಂದು ತಪ್ಪು ಕಲ್ಪನೆ ಮೂಡಿಸುವುದು ಸರಿಯಲ್ಲ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ|ಬಸವರಾಜ ಸಾದರ ಹೇಳಿದರು. 

Advertisement

ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಬಸವ ಜಯಂತಿ ನಿಮಿತ್ತ ಇಲ್ಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಬಸವಣ್ಣನವರ ಹೋರಾಟದ ಪ್ರಸ್ತುತತೆ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. 

ಲಿಂಗ ಪೂಜೆ ಅದು ಪಂಚಭೂತಗಳಿಗೆ ಪ್ರತಿಕ್ರಿಯೆ ನೀಡುವ ಒಂದು ಸಂಕೇತ ಎಂಬ ಸತ್ಯ ವಚನ ಸಾಹಿತ್ಯದ ಮೂಲಕ ತಿಳಿಯುತ್ತದೆ. ಹೀಗಾಗಿ ಪ್ರತಿಯೊಬ್ಬರು ವಚನಗಳ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇರಿಸುವಂತೆ ಸರ್ಕಾರ ಆದೇಶ ನೀಡಿರುವುದು ಹೆಮ್ಮೆಯ ಸಂಗತಿ.

ಆದರೆ, ದೇವರ ಭಾವಚಿತ್ರಗಳನ್ನು ಇರಿಸಿದ ಮಾತ್ರಕ್ಕೆ ಸಮಾಜದಲ್ಲಿನ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಚೇರಿಯಲ್ಲಿನ ದೇವರ ಭಾವಚಿತ್ರದ ಕೆಳಗೆಯೇ ಹೀನ ಕೃತ್ಯ ನಡೆಸುವ ಮೂಲಕ ಬಸವಣ್ಣ ಸೇರಿದಂತೆ ಇತರೆ ಮಹನೀಯರಿಗೆ ಅಪಮಾನ ಎಸಗುತ್ತಿದ್ದಾರೆ.

ಹೀಗಾಗಿ ಎಲ್ಲ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಭ್ರಷ್ಟಾಚಾರ ಹಾಗೂ ಲಂಚಗುಳಿತನ ನಡೆಯುತ್ತಿದೆ ಎಂದು ವಿಷಾದಿಸಿದರು. ಬಸವಣ್ಣ ಸೇರಿದಂತೆ ಹಲವು ವಚನಕಾರರು 800 ವರ್ಷಗಳ ಹಿಂದೆ ತಮ್ಮ ವಚನಗಳಲ್ಲಿ ಇಂದಿನ ನಮ್ಮ ಸಂವಿಧಾನದ ಪ್ರಮುಖ ಆಶಯಗಳನ್ನು ಪ್ರತಿಪಾದಿಸಿದ್ದಾರೆ.

Advertisement

ವೈಚಾರಿಕ ಹಾಗೂ ವೈಜ್ಞಾನಿಕ ವಿಚಾರಗಳ ನಿಜವಾದ ಚಿಂತಕರಾಗಿದ್ದ ಬಸವಣ್ಣನವರು ಸ್ವಾತಂತ್ರÂ, ಸಮಾನತೆ, ಸಹೋದರತ್ವ ಹಾಗೂ ನ್ಯಾಯದಂತಹ ಇತರೆ ಆಶಯಗಳನ್ನು ಮುಂದಿಟ್ಟುಕೊಂಡು ಸಮಾಜದ ಏಳ್ಗೆಗೆ ಶ್ರಮಿಸಿದರು. 12ನೇ ಶತಮಾನದಲ್ಲಿ ವ್ಯಕ್ತಿತ್ವ ಹಾಗೂ ಬದುಕಿನ ಶುದ್ಧಿಯಿಂದ ವಚನಕಾರರು ರಚಿಸಿದ ವಚನ ಸಾಹಿತ್ಯ ಪ್ರಾಮಾಣಿತ ರೂಪವಾಗಿದೆ ಎಂದರು. 

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ|ಪ್ರಮೋದ ಗಾಯಿ ಮಾತನಾಡಿದರು. ಪ್ರೊ| ಎಂ.ಎನ್‌. ಜೋಶಿ, ಪ್ರೊ|ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ|ಆರ್‌. ಎಲ್‌. ಹೈದರಾಬಾದ, ಪ್ರೊ|ಧನವಂತ  ಹಾಜವಗೋಳ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next