Advertisement
ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಲಿರುವ ಕುಟುಂಬ ವರ್ಗ, ಅಭಿಮಾನಿಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
Related Articles
Advertisement
ಇವತ್ತು ಟೀವಿ, ಇಂಟರ್‌ನೆಟ್ಟು, ಅಸಂಖ್ಯಾತ ಪತ್ರಿಕೆಗಳು,ಆಧುನಿಕ ಸಂವಹನ ಮಾಧ್ಯಮಗಳಿದ್ದರೂ, ಒಬ್ಬ ನಟನ ಫೋಟೋವನ್ನು ಮುಂದೆ ಹಿಡಿದು ಯಾರಿದು ಹೇಳಿ ಎಂದರೆ ನೂರಕ್ಕೆ ಎಪ್ಪತ್ತು ಮಂದಿ ಅಡ್ಡಡ್ಡ ತಲೆಯಾಡಿಸುತ್ತಾರೆ. ಅದರ ಅರ್ಥ ಇಷ್ಟೇ. ಒಬ್ಬ ನಟ ಎಲ್ಲರಿಗೂ ಹತ್ತಿರವಾಗುವುದು ಸ್ಟಾರ್‌ಗಿರಿಯಿಂದಲೋ ಪ್ರಚಾರದಿಂದಲೋ ಅಲ್ಲ. ಅಣ್ಣಾವ್ರಿಗೆ ಇದ್ದ ಜನಪ್ರೀತಿ ಮತ್ತು ಸಜ್ಜನಿಕೆಯಿಂದ. ನಾಡಿನ ಕುರಿತು ಅವರಿಗಿದ್ದ ಖಚಿತ ಅಭಿಪ್ರಾಯಗಳಿಂದ.
ಎಲ್ಲರ ಮೇಲೂ ಅವರಿಗಿದ್ದ ಅಕ್ಕರೆಯಿಂದ. ಇಡೀ ಭಾರತೀಯ ಚಿತ್ರರಂಗದಲ್ಲೇ ಡಾ ರಾಜಕುಮಾರ್ ರಷ್ಟು ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಯಾವೊಬ್ಬ ನಟನೂ ನಟಿಸಿಲ್ಲ ಎಂಬುದು ಗೊತ್ತಿರಬಹುದು. ಇದು ಅವರ ಹೆಸರಿನಲ್ಲಿರುವ ಒಂದು ಅಪರೂಪದ ದಾಖಲೆ.
ಇನ್ನೊಂದು ವಿಶೇಷವೆಂದರೆ, ಡಾ ರಾಜಕುಮಾರ್ ಅವರ ಮಹತ್ವದ ಚಿತ್ರಗಳನ್ನು ಬೇರೆಬೇರೆ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಭಾಷೆಯ ಜನಪ್ರಿಯ ಮತ್ತು ಯಶಸ್ವಿ ಕಲಾವಿದರು ಆ ಚಿತ್ರಗಳಲ್ಲಿ ನಟಿಸಿರುವುದು ವಿಶೇಷ.
ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ಅಮಿತಾಭ್ ಬಚ್ಚನ್, ಧರ್ಮೇಂದ್ರ, ರಾಜೇಶ್ ಖನ್ನಾ ಇವರೆಲ್ಲರೂ ತಮ್ಮ ಭಾಷೆಗಳಲ್ಲಿ ಡಾ. ರಾಜಕುಮಾರ್ ಅವರ ಚಿತ್ರಗಳನ್ನು ರೀಮೇಕ್ ಮಾಡುವುದರ ಜೊತೆಗೆ, ಅವರು ನಿರ್ವಹಿಸಿದ ಪಾತ್ರಗಳನ್ನು ನಿರ್ವಹಿಸಿದ್ದಾರೆ.