Advertisement

ಡಾ.ರಾಜ್‌ಕುಮಾರ್‌ ಚಾ.ನಗರ ಜಿಲ್ಲೆಯ ಹೆಮ್ಮೆ

01:41 PM Apr 25, 2022 | Team Udayavani |

ಚಾಮರಾಜನಗರ: ಇಡೀ ಕುಟುಂಬವೇ ಒಟ್ಟಾಗಿ ಕುಳಿತು ನೋಡುವಂತಹ ಚಲನಚಿತ್ರಗಳಲ್ಲಿ ನಟಿಸಿದ ಡಾ.ರಾಜಕುಮಾರ್‌ ಅವರು, ನಾಡಿನ ಜನಮಾನಸದಲ್ಲಿ ಎಂದೆಂದಿಗೂ ಅಜರಾಮರರಾಗಿದ್ದಾರೆ. ಅವರು ನಮ್ಮ ಜಿಲ್ಲೆಯ ಹೆಮ್ಮೆ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅಭಿಪ್ರಾಯಪಟ್ಟರು.

Advertisement

ನಗರದ ಜಿಲ್ಲಾಧಿ ಕಾರಿ ಕಚೇರಿ ಸಭಾಂ ಗಣದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿ ಕೊಂಡಿದ್ದ ಕನ್ನಡದ ಮೇರುನಟ, ಡಾ.ರಾಜ ಕುಮಾರ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ರಾಜಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಯುವಕರಿಗೆ ಆದರ್ಶ: ಡಾ.ರಾಜಕುಮಾರ್‌ ಅವರು 50 ವರ್ಷ ಚಲನಚಿತ್ರಗಳಲ್ಲಿ ನಟಿಸಿದ ವಿಶ್ವದ ಗಮನ ಸೆಳೆದ ಏಕೈಕ ನಟರು. ಸಾಮಾನ್ಯ ಜನಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ರಾಜಕುಮಾರ್‌, ತಪ್ಪುಗಳನ್ನು ತಿದ್ದುವಂತಹ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನಮನ ಸೂರೆಗೊಂಡಿದ್ದಾರೆ. ಬಂಗಾರದ ಮನುಷ್ಯ ಹಾಗೂ ಧ್ರುವತಾರೆ ಚಿತ್ರಗಳಲ್ಲಿ ರಾಜಕುಮಾರ್‌ ರೈತರ ಪ್ರೇರಣೆಯಾಗಿದ್ದರು. ಯುವಕರು ಸಮಾಜದ ಸತøಜೆಗಳಾಗಲು ರಾಜ್‌ ಅದರ್ಶರಾಗಿದ್ದಾರೆ ಎಂದು ತಿಳಿಸಿದರು.

ಭಾಷಾಪ್ರೇಮ ಅಪಾರ: ಡಿ.ವೈ.ಎಸ್‌.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಮಾತನಾಡಿ, ಡಾ.ರಾಜಕುಮಾರ್‌ ಅವರಿಗೆ ಕನ್ನಡ ಭಾಷಾಪ್ರೇಮ ಅಪಾರವಾಗಿತ್ತು. ಸಾಮಾಜಿಕ ಮೌಲ್ಯಗಳಿಗೆ ಒತ್ತು ನೀಡುವ ಚಿತ್ರಗಳಲ್ಲಿ ನಟಿಸುತ್ತಿದ್ದ ರಾಜಕುಮಾರ್‌ ಅವರು ಚಲನಚಿತ್ರಗಳಲ್ಲಿ ಮಹಿಳೆಯರಿಗೆ ಗೌರವ ತರುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು. ರಾಜಕುಮಾರ್‌ ಮುಂದಿನ ಪೀಳಿಗೆಗೂ ಜೀವಂತವಾಗಿರುತ್ತಾರೆ ಎಂದರು.

ಕನ್ನಡಪರ ಸಂಘಟನೆಯ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಡಾ.ರಾಜಕುಮಾರ್‌ ಅವರು ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ರಾಜಕುಮಾರ್‌ ಅವರು ಕನ್ನಡ ಶಕ್ತಿ. ಕನ್ನಡದ ಜ್ಞಾನಕೋಶವಾಗಿದ್ದ ರಾಜಕುಮಾರ್‌ ಅವರನ್ನು ನೂರು ಆಯಾಮಗಳಲ್ಲಿ ನೋಡಬಹುದಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್‌ ನಟಿಸದ ಪಾತ್ರವಿಲ್ಲ. ರಾಜಕುಮಾರ್‌ ತವರು ಜಿಲ್ಲೆಯಲ್ಲಿರುವ ನಾವೇ ಧನ್ಯರು ಎಂದರು.

Advertisement

ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ಸಿ.ಎಂ. ವೆಂಕಟೇಶ್‌, ಸುರೇಶ್‌ನಾಗ್‌, ಕಲೆ ನಟರಾಜು ನಡೆಸಿಕೊಟ್ಟ ಡಾ. ರಾಜಕುಮಾರ್‌ ಅಭಿನಯಿಸಿದ ಪ್ರಮುಖ ಚಲನಚಿತ್ರಗಳ ಗೀತೆಗಳ ಗಾಯನ ಎಲ್ಲರ ಮೆಚ್ಚುಗೆ ಗಳಿಸಿತು. ಎಎಸ್ಪಿ ಕೆ.ಎಸ್‌.ಸುಂದರರಾಜು, ಜಿಪಂ ಲೆಕ್ಕಾಧಿಕಾರಿ ಎಚ್‌.ಎಸ್‌.ಗಂಗಾಧರ್‌, ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌, ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ, ತಾಪಂ ಇಒ ಪ್ರೇಮ್‌ಕುಮಾರ್‌, ಸಾಹಿತಿ ಸೋಮಶೇಖರ ಬಿಸಿಲವಾಡಿ, ಕುಮಾರಿ ವೈಷ್ಣವಿ, ವಿವಿಧ ಸಂಘಟನೆಗಳ ಮುಖಂಡರಾದ ನಿಜಧ್ವನಿ ಗೋವಿಂದರಾಜು, ಆಲೂರು ನಾಗೇಂದ್ರ, ಜಿ. ಬಂಗಾರು, ಗು.ಪುರುಷೋತ್ತಮ್‌, ಕೆ.ಎಂ.ನಾಗರಾಜು, ಜಯಕುಮಾರ್‌, ಸಿ.ಎಂ. ಮಹದೇವಶೆಟ್ಟಿ ಇತರರಿದ್ದರು.

ಅಹಂಕಾರ, ಹಣ ವ್ಯಾಮೋಹ ವಿಲ್ಲದ ಪರಿಪೂರ್ಣ ಮಾನವ ಪ್ರೇಮವನ್ನು ಅಭಿವ್ಯಕ್ತಿಗೊಳಿಸಿದ ಡಾ.ರಾಜಕುಮಾರ್‌ ಅವರಿಗೆ ಚಾಮರಾಜನಗರ ಸ್ವರ್ಗದ ಬಾಗಿಲಾಗಿತ್ತು. ಗುರುನಿಂದನೆ, ಮಾತಾಪಿತೃ ನಿಂದನೆಯಂತಹ ಇಂದಿನ ಪರಿಸ್ಥಿತಿಯಲ್ಲಿ ರಾಜಕುಮಾರ್‌ ಪ್ರತಿಯೊಬ್ಬರಿಗೂ ಆದರ್ಶ ವ್ಯಕ್ತಿತ್ವವಾಗಿದ್ದಾರೆ. ಸರಳತೆ, ಮಾನವತೆಗೆ ಉತ್ತಮ ಉದಾಹರಣೆ ಡಾ.ರಾಜಕುಮಾರ್‌. – ಸುರೇಶ್‌ ಋಗ್ವೇದಿ, ತಾಲೂಕು ಅಧ್ಯಕ್ಷ, ಕಸಾಪ

ಜಿಲ್ಲೆಯ ಹಾಗೂ ಕನ್ನಡನಾಡಿನ ಸಾಂಸ್ಕೃತಿಕ ರಾಯಭಾರಿ ಯಾಗಿದ್ದ ಡಾ.ರಾಜಕುಮಾರ್‌ ಅವರು ಭಾಷೆಯನ್ನು ಹೇಗೆ ಮಾತನಾಡಬೇಕು, ಉತ್ಛರಿಸಬೇಕು ಎಂಬುದನ್ನು ಕನ್ನಡಿಗರಿಗೆ ಹೇಳಿಕೊಟ್ಟರು. – ಸಿ.ಎಂ.ನರಸಿಂಹಮೂರ್ತಿ, ಕರ್ನಾಟಕ ಜಾನಪದ ಅಕಾಡಮಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next