ಮಣ್ಣು ಮೆತ್ತಿಕೊಂಡ ಕೈಗಳಲಿ ನೇಗಿಲು ಹಿಡಿದ ರಾಜೀವನ ಪಾತ್ರದಲ್ಲಿ ಡಾ. ರಾಜ್ ಹಾಡುವ ಈ ಸಾಲುಗಳು “ಬಂಗಾರದ ಮನುಷ್ಯ’ ಚಿತ್ರದ್ದು. ಮಣ್ಣನ್ನು ಬಂಗಾರ ಎನ್ನುತ್ತಾರೆ ತಿಳಿದವರು. ಹಲವು ಸಿನಿಮಾಗಳಲ್ಲಿ ಮಣ್ಣಲಿ ಉತ್ತು, ಬಿತ್ತು ಬೆಳೆ ತೆಗೆವ ಶ್ರಮಿಕನ ಪಾತ್ರದಲ್ಲಿ ಕಾಣಿಸಿಕೊಂಡ ಡಾ. ರಾಜ್ ನಿಜಜೀವನದಲ್ಲಿಯೂ ನೆಲ, ಜಲ ಭಾಷೆಯ ಕುರಿತು ಪೂಜ್ಯ ಭಾವನೆಯನ್ನು ಹೊಂದಿದ್ದರು. ಮಣ್ಣಿನ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಆಚರಿಸುವ ಸದುದ್ದೇಶದಿಂದಲೇ ಏಪ್ರಿಲ್ 16, ಭಾನುವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ “ಡಾ. ರಾಜಕುಮಾರ್ ಜಾನಪದ ಹಬ್ಬ’ ಏರ್ಪಾಡಾಗಿದೆ.
Advertisement
ರಾಜ್ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ನೋಡುವುದು ಸಹಜ, ಆದರೆ ಅವರನ್ನೊಬ್ಬ ಜನಪದ ವ್ಯಕ್ತಿಯಾಗಿ ನೋಡುವ ವಿನೂತನ ದೃಷ್ಟಿಕೋನ ಈ ಕಾರ್ಯಕ್ರಮದ ವಿಶೇಷತೆ. “ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಎಂಬ ಎರಡು ಸಂಪುಟಗಳನ್ನು ರಚಿಸಿದ ದೊಡ್ಡಹುಲ್ಲೂರು ರುಕ್ಕೋಜಿಯವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮದ ಪರಿಕಲ್ಪನೆ ಕೂಡಾ ಅವರದೇ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಅವರು ಡಾ. ರಾಜಕುಮಾರ್ ಕುರಿತ ರಾಷ್ಟ್ರೀಯ ಉತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸಿದ್ದರು. ಅದೇ ಸಮಯದಲ್ಲಿ ಅವರಿಗೆ ಈ ಕಾರ್ಯಕ್ರಮದ ಪರಿಕಲ್ಪನೆ ಹೊಳೆದಿದ್ದು.
Related Articles
Advertisement
ಇಂಥ ಮಹತ್ತರ ಕಾರ್ಯಕ್ರಮವೊಂದು ನಡೆಯುತ್ತಿದೆ ಎಂದು ತಿಳಿದ ತಕ್ಷಣ “ಆವತ್ತು ಅಲ್ಲಿಗೆ ಬರುವ ರಾಜ್ ಅಬಿಮಾನಿಗಳಿಗೆ ನಂದೇ ಊಟ!’ ಎಂದು ಖಡಾಖಂಡಿತವಾಗಿ ಹೇಳಿದವರು ಕುಂಬಳಗೂಡು ನರಸಿಂಹಮೂರ್ತಿಯವರು. ಕಾರ್ಯಕ್ರಮದ ಸಂಚಾಲಕರಲ್ಲೊಬ್ಬರಾಗಿರುವ ಅವರು, ರಾಜ್ ಅವರ ಅಭಿಮಾನಿ. ತಮ್ಮೂರಿನಲ್ಲಿ ರಾಜಕುಮಾರ್ ಹೆಸರಿನ ಉದ್ಯಾನವನ ಮತ್ತು ಗ್ರಂಥಾಲಯ ಕಟ್ಟಿಸಿದವರಿವರು. ಇದೀಗ ಡಾ. ರಾಜಕುಮಾರ್ ಜಾನಪದ ಹಬ್ಬಕ್ಕೆಂದೇ ಗ್ರಾಮೀಣ ಶೈಲಿಯ ಅಡುಗೆಯನ್ನು ಮಾಡಿಸುತ್ತಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಈ ಕಾರ್ಯಕ್ರಮ ರಾಜಕುಮಾರ್ ಅಭಿಮಾನಿಗಳಿಗೆ ಅಕ್ಷರಶಃ ಹಬ್ಬದೂಟವೇ!
ಡಾ. ರಾಜ್ ಅವರು ಉಳಿಸಿ ಹೋಗಿರುವ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಪ್ರಯತ್ನದಲ್ಲಿ ಕನ್ನಡಿಗರೆಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸುತ್ತಾರೆಂಬ ವಿಶ್ವಾಸ ಸಂಘಟಕರದು.
ಎಲ್ಲಿ?: ರವೀಂದ್ರ ಕಲಾಕ್ಷೇತ್ರಯಾವಾಗ?: ಏಪ್ರಿಲ 16, ಬೆಳಗ್ಗೆ 9ರಿಂದ ಸಂಜೆ 6.30 -ರಾಶಿ ಪೂಜೆ: ರಾಜಕುಮಾರ್ ಸಮಸ್ತ ಪರಿವಾರದವರಿಂದ
-ಜನಪದ ಸಾಂಸ್ಕೃತಿಕ ನಾಯಕನಾಗಿ ಡಾ. ರಾಜಕುಮಾರ್: ಚಿಂತನೆ
-ನೇಗಿಲ ಯೋಗಿ ಡಾ. ರಾಜಕುಮಾರ್: ಉಪನ್ಯಾಸ
-ಸಹೃಯಿಗಳಿಗೆ ಗೌರವಾರ್ಪಣೆ ಶಿಡ್ಲಘಟ್ಟ ಮತ್ತು ಜಂಗಮಕೋಟೆಯಿಂದ ಡೊಳ್ಳು ಕುಣಿತ, ವೀರಗಾಸೆ,
ಮಂಡ್ಯ ಕಲಾತಂಡದವರಿಂದ ನಗಾರಿ ಊಟಕ್ಕೆ…
ರಾಗಿ ಮುದ್ದೆ
ಅನ್ನ
ಕಾಳು ಸಾರು
ಹುರುಳಿ ಹಪ್ಪಳ
ಹೆಸರುಬೇಳೆ ಪಾಯಸ
ಮಜ್ಜಿಗೆ