Advertisement

ಉಡುಪಿ ಜಿ.ಪಂ. ನೂತನ ಸಿಇಒ ಡಾ|ನವೀನ್‌ ಭಟ್‌

02:21 AM Oct 05, 2020 | Hari Prasad |

ಉಡುಪಿ: ಉಡುಪಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಎಲ್ಲೂರು ಮೂಲದ ಡಾ| ನವೀನ್‌ ಭಟ್‌ ಅವರು ನೇಮಕಗೊಂಡಿದ್ದು, ಅ. 5ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

2017ರ ಐಎಎಸ್‌ ಬ್ಯಾಚ್‌ನವ ರಾದ ಡಾ| ಭಟ್‌ ಅವರು ಐಎಎಸ್‌ ಪರೀಕ್ಷೆಯಲ್ಲಿ 37ನೇ ರ್‍ಯಾಂಕ್‌ (ಕರ್ನಾಟಕಕ್ಕೆ 3ನೇ ಸ್ಥಾನ) ಗಳಿಸಿದ್ದರು. ಹಾಸನದ ಉಪ ವಿಭಾಗಾಧಿಕಾರಿ ಆಗಿದ್ದರು. ಈಗ ಮೊದಲ ಬಾರಿಗೆ ಜಿ.ಪಂ. ಸಿಇಒ ಆಗಿ ಪದೋನ್ನತಿಯ ವರ್ಗಾವಣೆ ಪಡೆದಿದ್ದಾರೆ.

ಅವರು ಮೂಡುಬಿದಿರೆ, ಮೊಡಂ ಕಾಪು ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಅಳಿಕೆಯಲ್ಲಿ ಪಿಯುಸಿ, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದರು. ಸಿಇಟಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ್‍ಯಾಂಕ್‌, ವೈದ್ಯಕೀಯದಲ್ಲಿ 26ನೇ ರ್‍ಯಾಂಕ್‌ ಗಳಿಸಿದ ಪ್ರತಿಭಾವಂತರು.

Advertisement

Udayavani is now on Telegram. Click here to join our channel and stay updated with the latest news.

Next