ಬೆಂಗಳೂರು: ಕೋಲಾರದ ಡಾ| ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ 2021ನೇ ಸಾಲಿನ “ಮಾಸ್ತಿ ಪ್ರಶಸ್ತಿ’ಯನ್ನು ಪ್ರಕಟಿಸಿದೆ.
ಹಿರಿಯ ಲೇಖಕ ಡಾ| ಬಿ.ಎ.ವಿವೇಕ ರೈ (ಜಾನಪದ), ಮಾಧವ ಕುಲಕರ್ಣಿ (ವಿಮರ್ಶೆ), ಜಯಂತ ಕಾಯ್ಕಿಣಿ (ಕಾವ್ಯ), ಆರ್.ವಿಜಯ ರಾಘವನ್ (ಕಾವ್ಯ), ಡಾ| ಎಂ.ಎಸ್.ಆಶಾದೇವಿ (ವಿಮರ್ಶೆ), ವಸುಮತಿ ಉಡುಪ (ಸೃಜನಶೀಲ) ಮತ್ತು ಎಚ್.ಎಲ್. ಪುಷ್ಪ (ಕಾವ್ಯ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನ.6ರಂದು ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಡಾ| ಬಿ.ಎ. ವಿವೇಕ ರೈ
ಇವರು ಕನ್ನಡ ಸಂಶೋಧಕ, ವಿಮರ್ಶಕ ಹಾಗೂ ಜಾನಪದ ವಿದ್ವಾಂಸರಾಗಿ 55 ವರ್ಷಗಳಿಂದ ಸಾರಸ್ವತ ಲೋಕದಲ್ಲಿ ತೊಡಗಿಸಿಕೊಂಡವರು.
ತುಳು ಗಾದೆಗಳು, ತುಳು ಒಗಟುಗಳು, ತೌಳವ ಸಂಸ್ಕೃತಿ, ತುಳುವ ಅಧ್ಯಯನದ ಕೆಲವು ವಿಚಾರಗಳು, ತುಳು ಜನಪದ ಸಾಹಿತ್ಯ, ಅನ್ವಯಿಕ ಜಾನಪದ, ಭಾರ ತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು (ಅನುವಾದ), ಗಿಳಿಸೂವೆ, ಇರುಳಕಣ್ಣು, ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ, ಬ್ಲಾಗಿಲನ್ನು ತೆರೆದು, ಜರ್ಮನಿಯ ಒಳಗಿಂದ ಕನ್ನಡ ನಾಡು ನುಡಿಯ ಬರಹಗಳು, ಅರಿವು ಸಾಮಾನ್ಯವೇ, ನೆತ್ತರ ಮದುವೆ (ಅನುವಾದ), ಚಿಲಿಯಲ್ಲಿ ಭೂಕಂಪ, ಕನ್ನಡ-ದೇಸಿ ಸಮ್ಮಿಲನದ ನುಡಿಗಳು, 80 ದಿನಗಳಲ್ಲಿ ವಿಶ್ವ ಪರ್ಯಟನೆ ಅವರ ಪ್ರಮುಖ ಕೃತಿಗಳು. ಅವರು “ಉದಯವಾಣಿ’ಯಲ್ಲಿ ಬರೆದ ಅಂಕಣ “ಪುಸ್ತಕ ಕಲಿತದ್ದು, ಕಲಿಸಿದ್ದು’ ಜನಪ್ರಿಯವಾಗಿತ್ತು.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!