Advertisement

ಕನ್ನಡಿಗರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ: ಡಾ|ಮನು ಬಳಿಗಾರ

07:42 PM Jan 30, 2021 | Team Udayavani |

ಕಾಗವಾಡ(ಮಿರ್ಜಿ ಅಣ್ಣಾರಾಯ ವೇದಿಕೆ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಒಡಕು ಹುಟ್ಟಿಸುವ ಧ್ವನಿ ಬಗ್ಗೆ ಜನರು ನಿರ್ಲಕ್ಷ ವಹಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ|ಮನು ಬಳಿಗಾರ ಹೇಳಿದರು.

Advertisement

ಬೆಳಗಾವಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಕರ್ನಾಟಕದವರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ. ಹೀಗಾಗಿ ಮಲಗಿದ ಸಿಂಹದ ಮೀಸೆ ಎಳೆದು ಕೆಣಕುವ ಕೆಲಸ ಮಹಾರಾಷ್ಟ್ರದ ನಾಯಕರು ಮಾಡಬಾರದೆಂದು ಎಚ್ಚರಿಸಿದರು.

ಗಡಿ ವಿವಾದ ಬಗ್ಗೆ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಕ್ಕಾಗಿ ಅವಿವೇಕಿತನದ ಹೇಳಿಕೆ ಕೊಡುತ್ತಿರುವವರಿಗೆ ಜನರು ಬುದ್ಧಿ ಕಲಿಸಿದ್ದಾರೆ ಎಂದರು.

ಹಾವೇರಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕೊರೊನಾ ನಿಯಮಾವಳಿ ಸಡಿಲಿಕೆ ಆಗಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ:ಯೋಗಿ ಆದಿತ್ಯನಾಥರಂತೆ ಸುತ್ತೂರು ಶ್ರೀಗಳನ್ನು ಸಿಎಂ ಮಾಡಿ! ರೈತ ಹಿತರಕ್ಷಣಾ ಸಮಿತಿ ಒತ್ತಾಯ

Advertisement

ಪರರ ವಿಚಾರಗಳ ಬಗ್ಗೆ ಮನ್ನಣೆ ನೀಡಬೇಕು ಎಂಬುದನ್ನು ಕರ್ನಾಟಕ ಸಾವಿರಾರು ವರ್ಷಗಳಿಂದ ಕಲಿಸಿ ಕೊಟ್ಟಿದೆ. ಸೌಹಾರ್ದಯುತವಾಗಿ ಬದುಕು ಕಟ್ಟಿಕೊಂಡಿರುವ ನಾಡು ನಮ್ಮದು. ಭಾಷೆಯ ಮೆರಗು ತಿಳಿದರೆ ಸೌಹಾರ್ದತೆ ಹೆಚ್ಚಾಗುತ್ತದೆ ಎಂದರು.

ಕೋವಿಡ್‌ ಪರಿಣಾಮ ಕುರಿತು ಸಮ್ಮೇಳನದಲ್ಲಿ ಗೋಷ್ಠಿ ಇರಲಿದೆ. ಕೊರೊನಾ ಉಂಟು ಮಾಡಿದ ಪರಿಣಾಮಗಳ ಕುರಿತು ಚರ್ಚೆಯಾಗಲಿದೆ. ನಷ್ಟ ಉಂಟಾಗಿದ್ದು, ಅದರಿಂದ ಹೊರ ಬರುವುದು ಹೇಗೆ, ಈ ಪರಿಸ್ಥಿತಿಯಲ್ಲಿ ಉದ್ಯೋಗ ಸೃಷ್ಟಿಸುವುದು ಹೇಗೆಂಬ ಸಮಾಲೋಚನೆ ನಡೆಸಲಾಗುವುದು. ಆರೋಗ್ಯ ಜಾಗೃತಿ ಮೂಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next