Advertisement
ಶಿರಿಯಾರ ಮಂಜು ನಾಯ್ಕರ ಲಾಲಿತ್ಯಪೂರ್ಣ ಶ್ರುತಿಬದ್ಧ ಮಾತುಗಾರಿಕೆ, ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಮೊಳಹಳ್ಳಿ ಹೆರಿಯ ನಾಯ್ಕರ ರಂಗತಂತ್ರ ಮತ್ತು ಕಿರು ಹೆಜ್ಜೆ ಇವರು ಮೂವರನ್ನು ಒಮ್ಮೆಗೆ ನೋಡಬೇಕಾದರೆ ಸುರೇಶ ಬಂಗೇರರ ವೇಷಗಾರಿಕೆಯ ಸೊಗಸನ್ನು ನೋಡಬೇಕು.ಕನಕಾಂಗಿ ಕಲ್ಯಾಣ,ಜಾಂಬವತಿ ಕಲ್ಯಾಣ,ಕೃಷ್ಣಾರ್ಜುನ-ಸುಭದ್ರ ಕಲ್ಯಾಣ ಸಹಿತ ಯಾವುದೇ ಪ್ರಸಂಗದ ಕ್ರಷ್ಣನಿರಲಿ ಅಲ್ಲಿ ಮಂಜುನಾಯ್ಕರ ನಿರಾತಂಕ ನಿರರ್ಗಳವಾದ ಶ್ರುತಿಬದ್ಧ ಮಾತುಗಾರಿಕೆ,ಕರ್ಣಾರ್ಜುನದ ಅರ್ಜುನ,ವೀರಮಣಿ ಕಾಳಗದ ಪುಷ್ಕಳ,ತಾಮ್ರದ್ವಜ ಮುಂತಾದ ವೇಷಗಳಲ್ಲಿ ಹೆರಿಯನಾಯ್ಕರ ರಂಗ ನಿರ್ವಹಣೆ,ಹೆಜ್ಜೆಗಾರಿಕೆ,ಅತಿಕಾಯನಂಥ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಮಟಾ³ಡಿ ಶೈಲಿಯನ್ನು ಗುರುತಿಸಬಹುದು.
Related Articles
Advertisement
ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿ ಅನಂತರ 17 ವರ್ಷ ಸೌಕೂರು,ಸಾಲಿಗ್ರಾಮ,ಪೆರ್ಡೂರು ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿ ಸದ್ಯ ಅಮೃತೇಶ್ವರಿ ಮೇಳದ ಪುರುಷವೇಷದಾರಿ ಜೊತೆಗೆ ಮೇಳದ ಪ್ರಬಂದಕರಾಗಿ ಸೇವೆ ಸಲ್ಲಿಸುತಿದ್ದಾರೆ.ಹೊಸ ಪ್ರಸಂಗಕ್ಕೂ ನ್ಯಾಯ ಒದಗಿಸಿದ ಅವರಿಗೆ ಬಹು ಪ್ರಸಿದ್ದಿ ತಂದ ಪಾತ್ರ ನಾಗಶ್ರೀಯ ಪ್ರಸಂಗದಲ್ಲಿ ಶಿರಿಯಾರ ಮಂಜು ನಾಯ್ಕರು ಮಾಡುತಿದ್ದ ಶುಬ್ರಾಂಗನ ಪಾತ್ರ. ಸತಿ ಶೀಮಂತಿನಿಯ ಚಂದ್ರಾಂಗದ,ಚೆಲುವೆ ಚಿತ್ರಾವತಿಯ ಹೇಮಾಂಗದ,ಬಾನು ತೇಜಸ್ವಿ ಮುಂತಾದ ಪಾತ್ರಗಳು ಅಷ್ಟೇ ಪ್ರಸಿದ್ಧ.
– ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ