Advertisement

ಡಾ|ಜಯದೇವಿತಾಯಿ ಕನ್ನಡ ಸೇವೆ ಅನನ್ಯ: ಬಿರಾದಾರ

03:36 PM Jul 04, 2017 | |

ಭಾಲ್ಕಿ: ನೆರೆಯ ಮಹಾರಾಷ್ಟ್ರದಲ್ಲಿದ್ದರೂ ಸದಾ ಕನ್ನಡ ನಾಡು-ನುಡಿಗಾಗಿ ಮಿಡಿಯುತ್ತಿದ್ದ ಡಾ| ಜಯದೇವಿ ತಾಯಿ ಲಿಗಾಡೆ ಅವರು ಕನ್ನಡ ಭಾಷೆ- ಸಂಸ್ಕೃತಿ, ಅದರಲ್ಲೂ ವಿಶೇಷವಾಗಿ ಶರಣ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಅಖೀಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ
ಬಿರಾದಾರ ಹೇಳಿದರು.

Advertisement

ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ, ಪತಂಜಲಿ ಯೋಗ ಸಮಿತಿಯಿಂದ ಶಿವಯೋಗ ನಿಲಯದಲ್ಲಿ ಆಯೋಜಿಸಿದ್ದ ಡಾ| ಜಯದೇವಿ ತಾಯಿ ಲಿಗಾಡೆ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಏಕೀಕರಣಕ್ಕಾಗಿ ಈ ಮಹಾ ತಾಯಿ ಸಲ್ಲಿಸಿದ ಸೇವೆಯನ್ನು ಈ ನಾಡು ಯಾವತ್ತೂ ಮರೆಯುವುದಿಲ್ಲ. ಸದಾ ಅನಾಥರ ಸೇವೆ, ಕನ್ನಡ ಸಾಹಿತ್ಯ ಸೇವೆ, ಸಮಾಜ ಸೇವೆ ಅವರ ಜೀವನ ಉಸಿರಾಗಿತ್ತು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಮಾತನಾಡಿ, ಡಾ| ಜಯದೇವಿ ತಾಯಿ ಲಿಗಾಡೆ ಅವರ ಸರಳತೆ, ಸಮಾಜ ಸೇವಾ ಗುಣವನ್ನು ನಮ್ಮ ಶರಣ ಶರಣೆಯರು ಮೈಗೂಡಿಸಿಕೊಳ್ಳಬೇಕು ಎನ್ನುವುದೇ
ಈ ಜಯಂತ್ಯುತ್ಸವದ ಉದ್ದೇಶವಾಗಿದೆ ಎಂದು ಹೇಳಿದರು. 

ಶಿವಕಲ್ಯಾಣಿ ವಿಶ್ವನಾಥ ನಾಗನಕೇರೆ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಹಿಳಾ ಘಟಕದ ಅಧ್ಯಕ್ಷ ಸಾವಿತ್ರಿ ಧನರಾಜ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಕಲ್ಯಾಣಿಯ ಜನ್ಮ ದಿನ 
ಆಚರಿಸಲಾಯಿತು. ಶರಣೆ ರೂಪಾ ಪ್ರಾಸ್ತಾವಿಕ ಮಾತನಾಡಿದರು. ಸುನಿತಾ ಏಕಲೂರೆ, ಕರುಣಾ ಪಾಟೀಲ ಬಸವಣ್ಣನವರ ಹಾಗೂ ಜಯದೇವಿ ತಾಯಿಯವರ ಭಾವ ಚಿತ್ರಪೂಜೆ ನೆರವೇರಿಸಿದರು. ಸುರೇಖ ವಚನ ಗಾಯನ
ಪ್ರಸ್ತುತಪಡಿಸಿದರು. ಪೂರ್ಣಿಮಾ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next