Advertisement

WHO ಕಾರ್ಯಕಾರಿ ಮಂಡಳಿಗೆ ಭಾರತ ಬಾಸ್‌

07:31 PM May 21, 2020 | Hari Prasad |

ನವದೆಹಲಿ: ಕೋವಿಡ್ ವೈರಸ್‌ ಸೋಂಕಿನ ಮೂಲ ಪತ್ತೆಗೆ ಸ್ವತಂತ್ರ ತನಿಖೆ ನಡೆಸುವಂತೆ 100ಕ್ಕೂ ಹೆಚ್ಚು ರಾಷ್ಟ್ರಗಳು ಸಮ್ಮತಿಸಿರುವ ನಡುವೆಯೇ ಭಾರತ, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಚುಕ್ಕಾಣಿ ಹಿಡಿಯುತ್ತಿದೆ.

Advertisement

194 ರಾಷ್ಟ್ರಗಳನ್ನು ಒಳಗೊಂಡಂತೆ ಮಂಗಳವಾರ ನಡೆದ ವಿಶ್ವ ಆರೋಗ್ಯ ಸಭೆಯಲ್ಲಿ ಮಂಡಳಿಯ ಉನ್ನತ ಹುದ್ದೆಗೆ ಭಾರತದ ಪ್ರತಿನಿಧಿಯನ್ನು ನೇಮಿಸುವ ಪ್ರಸ್ತಾವನೆಗೆ ಎಲ್ಲ ರಾಷ್ಟ್ರಗಳೂ ಸಹಿ ಹಾಕಿದ್ದು, ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌, ಮೇ 22ರಂದು ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮಂಡಳಿಯಲ್ಲಿ ಇರುವವರು ಯಾರು?
– ಆರೋಗ್ಯ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಪ್ರಾವೀಣ್ಯ ಪಡೆದ 34 ಸದಸ್ಯರನ್ನು ಮಂಡಳಿ ಒಳಗೊಂಡಿದೆ.

– ಸದಸ್ಯ ರಾಷ್ಟ್ರವನ್ನು ಪ್ರತಿನಿಧಿಸುವ ಈ 34 ಮಂದಿಯನ್ನು ವಿಶ್ವ ಆರೋಗ್ಯ ಸಭೆ ಆಯ್ಕೆ ಮಾಡುತ್ತದೆ.

– ಪ್ರತಿಯೊಂದು ಸದಸ್ಯ ರಾಷ್ಟ್ರದ ಸದಸ್ಯತ್ವದ ಅವಧಿ ಮೂರು ವರ್ಷ.

Advertisement

– ವರ್ಷದಲ್ಲಿ ಕನಿಷ್ಠ ಎರಡು ಬಾರಿ ನಡೆಯುವ ಕಾರ್ಯಕಾರಿ ಮಂಡಳಿ ಸಭೆ.

– ಪ್ರಮುಖ ಸಭೆ ಜನವರಿಯಲ್ಲಿ, ಎರಡನೇ ಸಭೆ ಮೇ ತಿಂಗಳು ನಡೆಯುತ್ತದೆ.

ಅಧ್ಯಕ್ಷರ ಕೆಲಸವೇನು?

– ರೊಟೇಷನ್‌ ಮಾದರಿಯಲ್ಲಿ ಆಯ್ಕೆಯಾಗುವ ಅಧ್ಯಕ್ಷರ ಅಧಿಕಾರಾವಧಿ ಒಂದು ವರ್ಷ.

– ಮೊದಲನೆಯದಾಗಿ ಇದೊಂದು ಪೂರ್ಣಾವಧಿ ಜವಾಬ್ದಾರಿಯಲ್ಲ.

– ಮಂಡಳಿಯ ಸಭೆಗಳ ನೇತೃತ್ವ ವಹಿಸುವುದಷ್ಟೇ ಅಧ್ಯಕ್ಷರ ಕೆಲಸ

ಮಂಡಳಿ ಕೆಲಸವೇನು?

– ಆರೋಗ್ಯ ಸಭೆಯ ನೀತಿ, ನಿರ್ಧಾರಗಳ ಕುರಿತು ಸಲಹೆ ನೀಡುವುದು.

– ನೀತಿ ಮತ್ತು ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ರೂಪಿಸುವುದು.

– ಆರೋಗ್ಯ ಸಭೆಯ ಕೆಲಸ ಕಾರ್ಯಗಳನ್ನು ಸರಳವಾಗಿಸುವುದು

Advertisement

Udayavani is now on Telegram. Click here to join our channel and stay updated with the latest news.

Next