ದೇವಸ್ಥಾನಕ್ಕೆ ಆಗಮಿಸಿದ ಡಾ| ಜಿ. ಶಂಕರ್ ಮತ್ತು ಶಾಲಿನಿ ಜಿ. ಶಂಕರ್ ದಂಪತಿಯನ್ನು ಪೂರ್ಣಕುಂಭ ಸಹಿತ ಮಲ್ಲಿಗೆ ಹಾರ, ಕಮಲದ ಹೂವನ್ನು ನೀಡಿ ಪುಷ್ಪವೃಷ್ಟಿಯೊಂದಿಗೆ ಬರಮಾಡಿಕೊಳ್ಳಲಾಯಿತು. ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಹೋಮ, ಶ್ರೀ ಮಹಾಲಕ್ಷ್ಮೀ, ಭದ್ರಕಾಳಿ, ಗಣಪತಿ ದೇವರ ಸನ್ನಿಧಾನದಲ್ಲಿ ಸರ್ವಾಲಂಕಾರ ಸೇವೆ ಮತ್ತು ಮಹಾಪೂಜೆ ನಡೆಯಿತು. ದೀರ್ಘಾಯುಷ್ಯದ ಹಾರೈಕೆಯೊಂ ದಿಗೆ ದೇವರ ಪ್ರಸಾದ ಸಹಿತವಾಗಿ ಗೌರವಿಸಲಾಯಿತು.
Advertisement
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಉಚ್ಚಿಲ ದೇವಸ್ಥಾನದ ಜೀರ್ಣೋದ್ಧಾರದ ಪ್ರೇರಕ ಶಕ್ತಿಯಾಗಿ, ಮೊಗವೀರ ಸಮಾಜ ಸೇರಿದಂತೆ ಎಲ್ಲ ಸಮಾಜದ ನೊಂದವರಿಗೆ ಸಹಾಯ ಹಸ್ತವನ್ನು ಚಾಚಿರುವ ಡಾ| ಜಿ. ಶಂಕರ್ ಹೃದಯವಂತ ನಾಯಕರಾಗಿದ್ದಾರೆ. ಸಮಾಜದ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವ ಅವರಿಗೆ ದೇವರು ಇನ್ನಷ್ಟು ಸಮಾಜ ಸೇವೆಗೈಯ್ಯುವ ಭಾಗ್ಯವನ್ನು ಒದಗಿಸಲಿ ಎಂದು ಹಾರೈಸಿದರು.
ಡಾ| ಜಿ. ಶಂಕರ್ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಓರ್ವ ಸಹೃದಯ ದಾನಿಯಾಗಿದ್ದಾರೆ. ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆಯನ್ನಾಗಿಸುವ ಹಿಂದಿನ ಪ್ರೇರಕ ಶಕ್ತಿ, ಉಚ್ಚಿಲ ದೇವಸ್ಥಾನದ ಪುನರ್ ನಿರ್ಮಾಣದ ರೂವಾರಿ, ಬಡತನವನ್ನು ಮೆಟ್ಟಿನಿಂತು ಕಠಿಣ ಪರಿಶ್ರಮದಿಂದ ಜೀವನವನ್ನು ರೂಪಿಸಿಕೊಂಡ ಕಾಯಕಯೋಗಿ ಎನಿಸಿರುವ ಅವರು ನೂರು ಕಾಲ ಬಾಳಿ ಬೆಳಗುವಂತಾಗಲಿ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶುಭ ಹಾರೈಸಿದರು.
Related Articles
Advertisement
ಉಡುಪಿ: ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾ ಮೊಗವೀರ ಯುವ ಸಂಘಟನೆಯ ವತಿಯಿಂದ ಗುರುವಾರ ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಸಂಘಟನೆಯ ವಿವಿಧ ಘಟಕಗಳ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖೀ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಹೆಮ್ಮಾಡಿ, ಕುಂದಾಪುರ, ಕೋಟೇಶ್ವರ, ಕೋಟ, ಸಾಲಿಗ್ರಾಮ, ಹಾಲಾಡಿ, ಮಂದಾರ್ತಿ, ಬ್ರಹ್ಮಾವರ, ಕೋಡಿ ಬೆಂಗ್ರೆ, ಪಡುತೋನ್ಸೆ ಬೆಂಗ್ರೆ, ಕಲ್ಯಾಣಪುರ, ಹಿರಿಯಡ್ಕ, ಮಲ್ಪೆ, ಉಪ್ಪೂರು, ಬೆಳ್ಳಂಪಳ್ಳಿ, ಉದ್ಯಾವರ, ದೊಡ್ಡಣಗುಡ್ಡೆಯ ಮೊಗವೀರ ಘಟಕಗಳಲ್ಲಿ ಅಶಕ್ತರಿಗೆ ಧನಸಹಾಯ, ವೃದ್ಧಾಶ್ರಮ, ಅನಾಥಾಶ್ರಮದ ಮಕ್ಕಳಿಗೆ, ಶಾಲಾ ಮಕ್ಕಳಿಗೆ ಸಿಹಿತಿಂಡಿ ಹಾಗೂ ಊಟ, ದಿನಸಿ ಸಾಮಗ್ರಿ, ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಅಂಗವಿಕಲ ಸ್ವ ಉದ್ಯೋಗಿಗೆ ಗೌರವ, ನೀಲಾವರದ ಗೋಶಾಲೆಗೆ ಹುಲ್ಲು ನೀಡಲಾಯಿತು.
ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಶಿವರಾಮ ಕೆ.ಎಂ., ಮಾಜಿ ಅಧ್ಯಕ್ಷ ಸಂಜೀವ ಎಂ.ಎಸ್., ಉಪಾಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ, ಜಯಂತ್‌ಅಮೀನ್, ಮಂಜುನಾಥ ಸುವರ್ಣ, ಪ್ರಧಾನ ಕಾರ್ಯದರ್ಶಿ ರವೀಶ್ ಎಸ್. ಕೊರವಡಿ, ಸಲಹಾ ಸಮಿತಿ ಸದಸ್ಯ ರಮೇಶ್ ವಿ. ಕುಂದರ್ ಕೋಟ, ಸಂಘಟನೆಯ ಸರ್ವಸದಸ್ಯರು ಉಪಸ್ಥಿತರಿದ್ದರು.
ಜಿ. ಶಂಕರ್ ಪ್ರೇರಕ ಶಕ್ತಿ
ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ಮಾತನಾಡಿ, ಸಮಸ್ತರ ಒಳಿತನ್ನು ಬಯಸುವ ಡಾ| ಜಿ. ಶಂಕರ್ ಸಮಾಜದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಅನಾರೋಗ್ಯ ಪೀಡಿತರ ಪಾಲಿನ ಜೀವರಕ್ಷಕ, ವಿದ್ಯಾರ್ಜನೆಗೆ ವಿದ್ಯಾಪೋಷಕ, ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾಗಿ ಇಡೀ ಸಮಾಜವನ್ನು ಒಗ್ಗಟ್ಟಿನಲ್ಲಿ ತೆಗೆದುಕೊಂಡು ಹೋಗುವ ದೊಡ್ಡ ಪ್ರೇರಕ ಶಕ್ತಿ ಎಂದರು.