Advertisement

ಡಾ|ಜಿ. ಶಂಕರ್‌ ರಕ್ತದಾನದ ಕ್ರಾಂತಿಕಾರ : ಪ್ರಮೋದ್‌ ಮಧ್ವರಾಜ್‌

07:50 AM Aug 07, 2017 | |

ಉಡುಪಿ: ಯುವಕರಿಂದ ರಕ್ತದಾನವನ್ನು ಮಾಡಿಸುವ ಮೂಲಕ ರಾಜ್ಯದಲ್ಲಿ ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆಎಂದು ಘೋಷಿಸಲು ಶ್ರಮಪಟ್ಟ ನಾಡೋಜ ಡಾ| ಜಿ. ಶಂಕರ ರಕ್ತದಾನ ಕ್ರಾಂತಿಕಾರ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಆ. 6ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್‌ ಪ್ರದೇಶದಲ್ಲಿರುವ ಮಥುರಾ ಕಂಫ‌ರ್ಟ್ಸ್ನಲ್ಲಿ  ಬೆಳ್ಳಂಪಳಿ ಮೊಗವೀರ ಯುವ ಸಂಘಟನೆ, ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಕೆ. ಕೃಷ್ಣಮೂರ್ತಿ ಆಚಾರ್ಯ, ಕೆಎಂಸಿ ಮಣಿಪಾಲ, ಉಡುಪಿ ಚಿಲ್ಲಾಡಳಿತ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರಗಿದ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಕ್ತದಾನ ಸರ್ವಶ್ರೇಷ್ಠ
ಇತರ ದಾನಗಳನ್ನು ಮಾಡಿದಾಗ ದಾನಿ ಕಳೆದುಕೊಳ್ಳುತ್ತಾನೆ. ಆದರೆ ರಕ್ತದಾನ ಮಾಡಿದರೆ ದಾನಿ ಮತ್ತು ಸ್ವೀಕಾರ ಮಾಡುವವರು ಉಭಯರು ಪಡೆದುಕೊಳ್ಳುತ್ತಾರೆ. ಈ ನಿಟ್ಟಿಲ್ಲಿ ರಕ್ತದಾನವು ಸರ್ವಶ್ರೇಷ್ಠವಾಗಿದೆ ಎಂದೂ ಸಚಿವರು ಹೇಳಿದರು.

1 ಲಕ್ಷ ಯುನಿಟ್‌ ಗುರಿ
ಸಾಮಾನ್ಯ ಜನರಲ್ಲಿ ರಕ್ತದಾನದ ಕುರಿತಾಗಿ ಅರಿವು ಮೂಡಿಸುವಲ್ಲಿ ಮೊಗವೀರ ಸಂಘಟನೆ ದಾಪುಗಾಲು ಹಾಕುತ್ತಿದೆ. ಬರುವ ಸೆಪ್ಟಂಬರ್‌ ಒಳಗೆ ಒಂದು ಲಕ್ಷ ಯುನಿಟ್‌ ರಕ್ತದಾನದ ಗುರಿಯನ್ನು ಇರಿಸಿಕೊಳ್ಳಲಾಗಿದೆ ಎಂದು ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್‌ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಮ್ಮಾನ
ಸುಮಾರು 50 ಬಾರಿಗೂ ಅಧಿಕ ರಕ್ತದಾನವನ್ನು ಮಾಡಿದ ಮಹೇಶ್‌, ವಿಜಯ್‌, ರವೀಂದ್ರ ಪುತ್ರನ್‌, ಮಲ್ಪೆ ಗುರುರಾಜ್‌, ಕಿನ್ನಿಮೂಲ್ಕಿ ಮಂಜು ಹಾಗೂ ಪಾಡಿಗಾರ ವಿಷ್ಣುಪ್ರಸಾದ್‌ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

Advertisement

ಉಡುಪಿ ಬಿಲ್ಡರ್ಸ್‌ ಅಸೋಸಿಯೇಶನ್ನಿನ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಕೆಎಂಸಿಯ ವೈದ್ಯ ಡಾ| ಮನೀಶ್‌, ಉಡುಪಿ ಕರಾವಳಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹರೀಶ್‌ ಪೂಜಾರಿ, ಮೊಗವೀರ ಸಂಘಟನೆಯ ಅಧ್ಯಕ್ಷ ಗಣೇಶ್‌ ಕಾಂಚನ್‌, ವಿವಿಧ ಸಂಘಟನೆಗಳ ಮುಖಂಡರುಗಳಾದ ಶಶಿಧರ್‌ ಭಟ್‌, ರವಿ ಶೆಟ್ಟಿ, ಜಯ ಕೋಟ್ಯಾನ್‌, ರವೀಂದ್ರ ಪುತ್ರನ್‌, ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿ, ಸತೀಶ್‌ ಸಾಲ್ಯಾನ್‌ ಅವರು  ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next