Advertisement

ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಸಿಗದ ಆಂಬ್ಯುಲೆನ್ಸ್: ಶಾಸಕ ಜಿ.ಪರಮೇಶ್ವರ್ ಗರಂ

05:15 PM Dec 11, 2022 | Team Udayavani |

ಕೊರಟಗೆರೆ ; ತಾಲೂಕಿನ ಇರಕಸಂದ್ರ ಕಾಲೋನಿ ಬಳಿ ಚಿರತೆ ದಾಳಿ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಅವ್ಯವಸ್ಥೆ ಬಗ್ಗೆ ಮಾಜಿ ಉಪ ಮುಖ್ಯ ಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಗರಂ ಆಗಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ನೀಲಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಇರಕಸಂದ್ರಕಾಲೋನಿಯ ಗ್ರಾಮದಲ್ಲಿ ಕಳೆದ ಶನಿವಾರ ಬೆಳಿಗ್ಗೆ ಚಿರತೆಯೊಂದು ಬಸ್ ನಿಲ್ದಾಣದ ಸಮೀಪ ಶ್ರೀನಿವಾಸ(60), ರಾಜು(46) ಎನ್ನುವರ ಮೇಲೆ ದಾಳಿ ನಡೆಸಿ, ನಂತರ ಕೆಂಪರಾಜು ಎಂಬುವರ ದನದ ಕೊಟ್ಟಿಗೆಗೆ ನುಗ್ಗಿ ಅಲ್ಲಿ ಹಾಲು ಕರೆಯುತ್ತಿದ್ದ ಚೇತನ್ (15) ಹಾಗೂ ದನುಷ್ (13) ಎಂಬ ಬಾಲಕರ ಮೇಲೆ ದಾಳಿ ಮಾಡಲಾಗಿತ್ತು, ಈ ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಅಭಿನಂದನಾ ಕಾರ್ಯಕ್ರಮಕ್ಕೆ ಕಲಬುರ್ಗಿಗೆ ಹೋಗಿದ್ದರು, ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದ ಶಾಸಕರು ತಕ್ಷಣ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ಗಾಯ ಗೊಂಡ ಇಬ್ಬರೂ ಬಾಲಕರ ಮತ್ತು ವೃದ್ದರ ಆರೋಗ್ಯ ವಿಚಾರಿಸಿದರು.

ತಕ್ಷಣ ತಮ್ಮ ಸ್ವಂತ ಹಣದಿಂದ ಬಾಲಕರ ತಂದೆಗೂ ಹಾಗೂ ವೃದ್ದರಿಗೆ ಚಿಕಿತ್ಸೆಗಾಗಿ ಪರಿಹಾರ ಹಣ ನೀಡಿದರು. ನಂತರ ಬಾಲಕರ ತಂದೆಯಿಂದ ಸಂಪೂರ್ಣ ವಿವರ ಪಡೆದ ಶಾಸಕರು ದಾಳಿಯಾದ ಸಂದರ್ಭದಲ್ಲಿ ಸುಮಾರು ಗಂಟೆಗಳ ಕಾಲ ಆಂಬುಲೆನ್ಸ್ ಬಾರದೆ ಇದ್ದ ಸಮಸ್ಯೆಯ ಬಗ್ಗೆ ಅಸಮಧಾನ ಗೊಂಡು ಅಲ್ಲೆ ಇದ್ದ ವೈದ್ಯರ ಬಳಿ ವಿಚಾರಿಸಿ ಕೊರಟಗೆರೆ ವೈದ್ಯಾಧಿಕಾರಿಗೆ ಕರೆ ಮಾಡಿ ಇದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಕೂಡಲೇ ಇದನ್ನು ಸರಿಪಡಿಸುವಂತೆ ಆದೇಶಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಡಾ.ಜಿ.ಪರಮೇಶ್ವರ್ ಘಟನೆಯ ಸಂಪೂರ್ಣ ವಿವರ ಪಡೆದಿದ್ದೇನೆ ಗಾಯಾಳುಗಳಿಗೆ ದೈರ್ಯ ತುಂಬಿದ್ದೇನೆ, ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಯವರಿಗೆ ಆದೇಶ ಮಾಡಲಾಗಿದೆ, ಬಹಳ ಬೇಸರದ ಸಂಗತಿ ಏನೆಂದರೆ ಘಟನೆಯಾದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ತುರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿದವರು ತುರ್ತು ವಾಹನಗಳು ಖಾಲಿ ಇಲ್ಲ ಎಂದು ಉತ್ತರ ನೀಡಿದ್ದಾರೆ. ತುರ್ತುವಾಹನದ ಕರೆಯನ್ನು ಪಡೆದ ವ್ಯಕ್ತಿ ಘಟನೆಯ ಗಂಭೀರತೆಯನ್ನು ಅರಿತು ತಕ್ಷಣ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕೆರೆಯನ್ನು ವರ್ಗಾವಣೆ ಮಾಡಿ ಈ ಆಸ್ಪತ್ರೆಯಲ್ಲಿ ಇದ್ದ ವಾಹನವನ್ನು ಕಳುಹಿಸಬಹುದಿತ್ತು.ಆದರೆ ಇದು ಹಾಗೆ ಹಾಗಿಲ್ಲ ಇದೊಂದು ಗಂಭೀರ ಲೋಪವಾಗಿದೆ. ಈ ಘಟನೆ ಈ ಆಸ್ಪತ್ರೆಯಲ್ಲಿ ನಡೆದಿದೆಯೋ ಅಥವಾ ಇಡೀ ಇಲಾಖೆಯಲ್ಲಿನ ವ್ಯವಸ್ಥೆಯೇ ಹೀಗೆ ಇದೆಯೋ ತಿಳಿದಿಲ್ಲ, ಇದನ್ನು ಜಿಲ್ಲಾ ವೈದ್ಯಾಧಿಕಾರಿ ಮತ್ತು ಆಯುಕ್ತರ ಬಳಿ ಮಾತನಾಡುತ್ತೇನೆ. ಇಲ್ಲಿನ ಸ್ಥಳೀಯ ಆರೋಪದಂತೆ ಸರ್ಕಾರಿ ಆಸ್ಪತ್ರೆಯ ತುರ್ತುವಾಹನಗಳು ಖಾಸಗಿ ತುರ್ತು ವಾಹನಗಳ ಜೋತೆ ಕೈಜೋಡಿಸಿ ಉದ್ದೇಶ ಪೂರ್ವಕವಾಗಿ ಜನರಿಗೆ ತುರ್ತುವಾಹನ ಕಳುಹಿಸದೇ ಇರುವುದು ಕಂಡುಬಂದರೆ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು ಎಂದರು.

ಸಂರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ ಕೆ.ಆರ್.ಓಬಳರಾಜು, ತಾ.ಪಂ.ಉಪಾಧ್ಯಕ್ಷೆ ನರಸಮ್ಮ ನರಸಿಂಹಮೂರ್ತಿ, ಮುಖಂಡರುಗಳಾದ ಚಿಕ್ಕರಂಗಯ್ಯ, ಕಣಿವೆ ಹನುಮಂತರಾಯಪ್ಪ, ರವಿಕುಮಾರ್, ಅರವಿಂದ, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

ಇದನ್ನೂ ಓದಿ: ಪಾಲಿಕೆ ಚುನಾವಣೆಯಲ್ಲಿ ಸೋಲು: ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆದೇಶ್ ಗುಪ್ತಾ ರಾಜೀನಾಮೆ

Advertisement

Udayavani is now on Telegram. Click here to join our channel and stay updated with the latest news.

Next