Advertisement

‘ಹೈನುಗಾರಿಕೆಗೆ ಡಾ|ಕುರಿಯನ್‌ ಕೊಡುಗೆ ಅಪಾರ’

10:32 AM Nov 23, 2017 | Team Udayavani |

ಮಹಾನಗರ: ಡಾ| ವರ್ಗೀಸ್‌ ಕುರಿಯನ್‌ ಅವರ 96ನೇ ಜನ್ಮದಿನಾಚರಣೆ ಅಂಗವಾಗಿ ಕೇರಳದಿಂದ ಗುಜರಾತಿನ ಆನಂದ್‌ ತನಕ ಹಮ್ಮಿಕೊಂಡಿದ್ದ ಬೈಕ್‌ ರ‍್ಯಾಲಿಯು ಮಂಗಳವಾರ ಬೆಳಗ್ಗೆ ಮಂಗಳೂರಿನ ದ.ಕ. ಹಾಲು ಒಕ್ಕೂಟಕ್ಕೆ ಆಗಮಿಸಿದ್ದು, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಸ್ವಾಗತಿಸಿದರು.

Advertisement

ಒಕ್ಕೂಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಲ ಬೈಕ್‌ ಸವಾರರನ್ನು ಹೂಗುಚ್ಛ ನೀಡಿ ಸ್ವಾಗತಿಸಿ ಮಾತನಾಡಿದ ಡಾ| ಸತ್ಯನಾರಾಯಣ, ಡಾ| ಕುರಿಯನ್‌ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಪ್ರತಿಯೊಬ್ಬರು ನೆನಪಿನಲ್ಲಿಡಬೇಕು. ಭಾರತವು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ತಿಳಿಸಿದರು.

ರ‍್ಯಾಲಿಯನ್ನು ಡ್ರೋಣ್‌ ಕೆಮರಾ ಮೂಲಕ ಚಿತ್ರೀಕರಿಸಿದ್ದು, ಮುಂದಿನ ದಿನಗಳಲ್ಲಿ ಡಾ| ಕುರಿಯನ್‌ ಬಗ್ಗೆ ಸಾಕ್ಷ್ಯ ಚಿತ್ರವನ್ನು ಗುಜರಾತ್‌ ಮಿಲ್ಕ್ ಫೆಡರೇಶನ್‌ ನಿರ್ಮಾಣ ಮಾಡುವ ವಿಚಾರವನ್ನು ತಿಳಿಸಿದರು.

ವ್ಯವಸ್ಥಾಪಕರಾದ ಜಿ. ರಾಯ್ಕರ್‌, ಶಿವಶಂಕರ ಸ್ವಾಮಿ, ನಿತ್ಯಾನಂದ ಭಕ್ತ, ಸುಮಾರು 40 ಮಂದಿ ಹಾಲು ಉತ್ಪಾ
ದಕರು, ಸೈಂಟ್‌ ಜೋಸೆಫ್‌ ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮೊದಲಾದವರು ಉಪಸ್ಥಿತರಿದ್ದರು. ಮಾರುಕಟ್ಟೆ ವಿಭಾಗದ ಹೇಮಶೇಖರಪ್ಪ ಎಸ್‌.ಪಿ. ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಲಕ್ಕಪ್ಪ ವಂದಿಸಿದರು. ಕೆ. ಸುಬ್ಬರಾವ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next