ತೀರ್ಥಹಳ್ಳಿ: ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಹಲವಾರು ಯೋಜನೆಗಳನ್ನು ತಂದಿದ್ದೇವೆ. ಈಗಾಗಲೇ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗಿರುವ ಕಾರಣ ಕೆರೆ ಅಭಿವೃದ್ಧಿ ಮಾಡುತ್ತಿದ್ದೇವೆ. ಈಗಾಗಲೇ ಮಲೆನಾಡಿನಲ್ಲೇ ಮಳೆಯ ಸಮಸ್ಯೆ ಆಗಿದೆ. ಹಾಗಾಗಿ ನೀರನ್ನು ಮಿತವಾಗಿ ಬಳಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಹೇಳಿದರು.
ಮಂಗಳವಾರ ತೀರ್ಥಹಳ್ಳಿಯ ಯೋಜನಾ ಕಚೇರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಈಗ ನಮ್ಮ ಗ್ರಾಮಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವು ಯೋಜನೆಯನ್ನು ತಂದಿದ್ದೇವೆ. ಅದರಲ್ಲೂ ಡಿಜಿಟಲ್ ಯೋಜನೆ. ಮೊಬೈಲ್ ಅನ್ನು ಬರಿ ಮಾತನಾಡಲು ಅಥವಾ ಇತರ ಚಟುವಟಿಕೆಗಳಿಗಿಂತ ಹಣವನ್ನು ಕಟ್ಟಲು, ತೆಗೆಯಲು ಅನುಕೂಲವಾಗುವಂತೆ ಡಿಜಿಟಲ್ ವ್ಯವಸ್ಥೆ ಮಾಡಿದ್ದೇವೆ.
ಈಗಿನ ಕಾಲದಲ್ಲಿ ಎಲ್ಲವೂ ಉನ್ನತಿಕರಣವಾಗುತ್ತಿದೆ. ಮುಂಚೆ ಗದ್ದೆ ಇದ್ದಂತಹ ಜಾಗದಲ್ಲಿ ಈಗ ತೋಟ ಬಂದಿದೆ. ಇದೆ ರೀತಿ ಹಿಂದೆ ಮಕ್ಕಳು ಶಾಲೆಯಲ್ಲಿ ಓದಿದರೆ ಸಾಕು ಎನ್ನುವ ಕಾಲವಿತ್ತು ಆದರೆ ಈಗ ಡಿಪ್ಲೊಮೊ, ಡಿಗ್ರಿಯಂತಹದನ್ನು ಓದಲೇ ಬೇಕಿದೆ. ಹಾಗಾಗಿ ನಮ್ಮ ಯೋಜನೆಯಲ್ಲೂ ಉನ್ನತಿಕರಣ ಮಾಡುತ್ತಿದ್ದೇವೆ. ಇದರಿಂದ ಪ್ರತಿಯೊಬ್ಬ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಜೀವಂದರ್ ಜೈನ್, ಸೊಪ್ಪುಗುಡ್ಡೆ ರಾಘವೇಂದ್ರ, ಯೋಜನಾಧಿಕಾರಿ ಮಾಲತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಕೌಶಲಕ್ಕೆ ಒತ್ತು: ಪ್ರೊ| ಗುರುರಾಜ ಕುಲಕರ್ಣಿ