Advertisement

HAL ಸಂಸ್ಥೆಯ ನೂತನ ಸಿಎಂಡಿ ಸ್ಥಾನಕ್ಕೆ ಡಾ| ಸುನಿಲ್‌ ನೇಮಕ

01:00 AM Sep 10, 2024 | Team Udayavani |

 ಹೊಸದಿಲ್ಲಿ: ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿ ಟೆಡ್‌ (ಎಚ್‌ಎಎಲ್‌) ಸಂಸ್ಥೆಯ ನೂತನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಡಾ| ಡಿ.ಕೆ.ಸುನಿಲ್‌ ಸೋಮವಾರ ನೇಮಕ ಗೊಂಡಿದ್ದಾರೆ. 2022ರ ಸೆ.29ರಿಂದ ಎಚ್‌ಎಎಲ್‌ನ ಎಂಜಿನಿಯರಿಂಗ್‌, ಸಂಶೋಧನೆ, ಅಭಿವೃದ್ಧಿ ವಿಭಾಗದ ನಿರ್ದೇ ಶಕರಾಗಿದ್ದ ಸುನಿಲ್‌ರನ್ನು ರಕ್ಷಣ ಸಚಿ ವಾಲಯದ ಆದೇಶ ದಂತೆ ಎ.30, 2026ರವರೆಗೆ ಹೆಚ್ಚುವರಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ರನ್ನಾಗಿ ನೇಮಿಸಲಾಗಿದೆ. ಇವರು 1987ರಲ್ಲಿ ಮ್ಯಾನೇಜ್‌ಮೆಂಟ್‌ ಟ್ರೈನಿ ಆಗಿ ಎಚ್‌ಎಎಲ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next