Advertisement

“ದಮನಿತರ ಬದುಕಿಗೆ ಆದರ್ಶ’

11:12 PM Apr 14, 2019 | Team Udayavani |

ಬೆಳ್ತಂಗಡಿ: ಶೋಷಿತ ಸಮಾಜದಿಂದ ಬಂದ ಡಾ| ಅಂಬೇಡ್ಕರ್‌ ದೇಶ ಕಂಡ ಅಪ್ರತಿಮ ನಾಯಕರಾಗಿ ಬೆಳೆದರು. ಅವರ ವಿಚಾರಧಾರೆಗಳು ದಮನಿತರ ಬದುಕಿಗೆ ಆದರ್ಶ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮುರಳೀಧರ್‌ ತಿಳಿಸಿದರು.

Advertisement

ತಾ.ಪಂ. ಸಭಾಂಗಣದಲ್ಲಿ ರವಿವಾರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತ್‌ ವತಿಯಿಂದ ಹಮ್ಮಿಕೊಂಡ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣದಿಂದ ವ್ಯಕ್ತಿ ಶಕ್ತಿಯಾಗಿ ಪರಿವರ್ತನೆಗೊಳ್ಳಲು ಸಾಧ್ಯ ಎಂದು ಅಂಬೇಡ್ಕರ್‌ ಅರಿತಿದ್ದರು. ಶೋಷಿತರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಅವರ ದೂರ ದೃಷ್ಟಿತ್ವ ಅಪಾರವಾದುದು.

ದೇಶದಲ್ಲಿ ದುಡಿಯುವ ಕೈಗಳಿಗೂ ಸ್ವಾತಂತ್ರ್ಯ ಬೇಕು ಎಂಬ ಪರಿಕಲ್ಪನೆ ಅವರಲ್ಲಿನ ಧೀಮಂತ ನಾಯಕತ್ವವನ್ನು ಅಂದೇ ಪ್ರದರ್ಶಿಸಿತ್ತು. ಇಂದು ಶಿಕ್ಷಣ ವಿದ್ದರೂ ನಿರುದ್ಯೋಗ ತಾಂಡವವಾಡು ತ್ತಿದೆ. ಸರಕಾರವನ್ನು ಅವಲಂಬಿತವಾಗದೆ ವಿದ್ಯಾವಂತರು ತಮ್ಮ ನೈಪುಣ್ಯ ಹಾಗೂ ಶ್ರಮದಿಂದ ಉದ್ಯೋಗ ತಮ್ಮನ್ನು ಅರಸುವಂತೆ ಮಾಡಬೇಕು ಎಂಬ ಅವರ ಚಿಂತನೆ, ಭವಿಷ್ಯದ ಭಾರತ ಕಟ್ಟುವಲ್ಲಿ ಅವರ ದಿಟ್ಟ ಹೆಜ್ಜೆ ಇಂದಿನ ಯುವಜನತೆಗೆ ಸ್ಫೂರ್ತಿ ಎಂದರು.ಕಾರ್ಯಕ್ರಮವನ್ನು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಉದ್ಘಾಟಿಸಿದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಎಂ. ಪಾಟೀಲ್‌, ಪ.ಪಂ.ಮುಖ್ಯಾಧಿಕಾರಿ ಅರುಣ್‌, ದಲಿತ ಪದಾಧಿಕಾರಿಗಳು ಮತ್ತಿತರರಿ ದ್ದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಜಯಾನಂದ್‌ ಅವರು ವಂದಿಸಿದರು.

ಕೊಡುಗೆ ಅಪ್ರತಿಮ
ಬಾಲ್ಯದಲ್ಲಿ ಅಸ್ಪ್ರಶ್ಯತೆ ತಾಂಡವವಾಡು ತ್ತಿದ್ದರೂ ಅವನ್ನೆಲ್ಲ ಮೆಟ್ಟಿನಿಂತು ಡಾ|ಅಂಬೇಡ್ಕರ್‌ ದೇಶಕ್ಕೆ ನೀಡಿದ ಕೊಡುಗೆ ಅಪ್ರತಿಮ. ಕಾರ್ಮಿಕರು, ಮಹಿಳೆಯರಿಗೆ ಮೀಸಲಾತಿ, ಭ್ರೂಣ ಹತ್ಯೆ ನಿಷೇಧ, ಮಹಿಳಾ ಶಿಕ್ಷಣ ಇವೆಲ್ಲವನ್ನೂ ಸಮರ್ಥವಾಗಿಸುವ ನಿಟ್ಟಿನಲ್ಲಿ ಸಾಂವಿಧಾನಿಕವಾಗಿ ಹೊರತಂದ ಕಾನೂನು ವಿಚಾರಧಾರೆ ಇಂದಿಗೂ ಪ್ರಸ್ತುತ.
ಮುರಳೀಧರ್‌, ಪ್ರಾಂಶುಪಾಲರು
ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಂಡಾಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next