Advertisement

ಟಗ್ ದುರಂತ ಮತ್ತು ಕೋರಮಂಡಲ ಹಡಗು ದುರಂತದ ಕುರಿತು ಸೂಕ್ತ ತನಿಖೆಯಾಗಲಿ : ಶಾಸಕ ಭರತ್ ಶೆಟ್ಟಿ

06:59 PM May 16, 2021 | Team Udayavani |

ಸುರತ್ಕಲ್: ಟಗ್ ದುರಂತ ಹಾಗೂ ಕೋರಮಂಡಲ ಸರ್ವಿಸ್ ಹಡಗಿನ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

Advertisement

ರಾಜ್ಯ ಸರಕಾರ ಕರಾವಳಿಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಚಂಡಮಾರುತದಿಂದ ಯಾವುದೇ ಮೀನುಗಾರನ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆದರೆ ಈ ಎರಡು ಪ್ರಕರಣಗಳು ಕಂಪನಿಗಳ ಸಮನ್ವಯದ ಕೊರತೆಯಿಂದ ಆಗಿರುವಂತೆ ಕಾಣುತ್ತಿದೆ.

ಬೃಹತ್ ಹಡಗಿನಿಂದ ತೈಲ ಖಾಲಿ ಮಾಡುವ ಪ್ರಕ್ರಿಯೆ ಮುಗಿದ ಬಳಿಕವೂ ಯಾಕೆ ಬಂದರಿನೊಳಗೆ ಟಗ್ ಬಂದಿಲ್ಲ. ಒಳಪ್ರವೇಶಿಲು ಅನುಮತಿ ಸಿಗಲು ತಡವಾಯಿತೆ,ಅಥವಾ ಬೇರೆ ಯಾವುದೇ ಕಾರಣವಿದೆಯೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಇದನ್ನೂ ಓದಿ :ಗ್ರಾಮಗಳಿಗೆ ಉಚಿತ ಸ್ಯಾನಿಟೈಜರ್ ಸಿಂಪಡಿಸುತ್ತಿರುವ ಕಾರ್ಯಕ್ಕೆ ಚಾಲನೆ

Advertisement

ಇದರ ಜತೆಗೆ ಅವಧಿ ಮುಗಿದಿದ್ದರೂ ಅಂಡರ್‌ವಾಟರ್ ಸರ್ವಿಸ್ ಕಂಪನಿ ತನ್ನ ಕೋರಮಂಡಲ ಸರ್ವಿಸ್ ಹಡಗನ್ನು ಬಂದರಿನಲ್ಲಿ ಆಂಕರೇಜ್ ಮಾಡಿದ್ದು ಯಾಕೆ, ಬಳಿಕ ಚಂಡಮಾರುತದ ಸಮಯದಲ್ಲೇ ಹೊರಗೆ ಹೋದದ್ದು ಯಾಕೆ ಎಂಬುದಕ್ಕೆಲ್ಲಾ ಸೂಕ್ತ ಉತ್ತರ ಸಿಗಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ವರದಿ ಪಡೆಯಬೇಕು.ಹಾಗೂ ಸಂತ್ರಸ್ತ ಕಾರ್ಮಿಕ ಕುಟುಂಬಗಳಿಗೆ ಕಂಪನಿಗಳಿಂದ ಪರಿಹಾರ ದೊರಕಿಸಿಕೊಡಲು ಮುಂದಾಗಬೇಕು.ಪ್ರಕರಣದ ಕುರಿತು ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next