Advertisement

 ಸಾರಿಗೆ ನೌಕರರ ಮುಷ್ಕರ ರಾಜಕೀಯ ಪ್ರೇರಿತ : ಡಾ|ಬಸವರಾಜ ಕೇಲಗಾರ

06:20 PM Apr 18, 2021 | Team Udayavani |

ರಾಣಿಬೆನ್ನೂರ: ಸಾರಿಗೆ ನೌಕರರ ಮುಷ್ಕರ ರಾಜಕೀಯ ಪ್ರೇರಿತವಾಗಿದೆ. ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ ಆರೋಪಿಸಿದರು.

Advertisement

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌ . ಯಡಿಯೂರಪ್ಪನವರು ಈಗಾಗಲೇ ಸಾರಿಗೆ ನೌಕರರ 9 ಬೇಡಿಗೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಉಳಿದ ಒಂದು ಬೇಡಿಕೆಯಾದ 6ನೇ ವೇತನ ಯೋಜನೆಯನ್ನು ಸೂಕ್ತ ಸಮಯದಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಮುಷ್ಕರ ನಡೆಸುತ್ತಿರುವುದು ಸೂಕ್ತವೇ ಎಂದು ಪ್ರಶ್ನಿಸಿದರು.

ಈಗಾಗಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1600 ಕೋಟಿ ರೂ. ನಷ್ಟದಲ್ಲಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವುದು ಎಷ್ಟು ಸರಿ? ಸಾರಿಗೆ ನೌಕರರು ನಮ್ಮವರೇ ಇದ್ದು, ಅವರ ಹಿತ ಕಾಯುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಬಡವರು, ಅಂಗವಿಕಲರು, ವಿದ್ಯಾರ್ಥಿಗಳು, ರೋಗಿಗಳು ಸರ್ಕಾರಿ ಬಸ್‌Õಗಳಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಇವರು ವಿ ಧಿ ಇಲ್ಲದೆ ಖಾಸಗಿ ವಾಹನದಲ್ಲಿ ಪ್ರಯಾಣಿಸುವುದು ಕಷ್ಟಕರ ಸಂಗತಿ ಎಂದರು.

ಪ್ರಸ್ತುತ ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯ 4900 ಬಸ್‌ಗಳು ಹಳ್ಳಿಯ ಜನರ ಪ್ರಯಾಣದ ಆಧಾರಸ್ತಂಭವಾಗಿವೆ. ಈ ಮುಷ್ಕರದಿಂದ ಅವರ ಬದುಕು ದುಬಾರಿಯಾಗಿ ಜೀವನ ಕಷ್ಟಕರವಾಗಿದೆ. ಈ ಎಲ್ಲವನ್ನು ಸಾರಿಗೆ ನೌಕರರು ಗಮನದಲ್ಲಿಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗಿ ಬಡ ಪ್ರಯಾಣಿಕರಿಗೆ ನೆರವಾಗಬೇಕೆಂದು ಕೇಲಗಾರ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಆರ್‌. ಶಂಕರ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ಕಾರ್ಯದರ್ಶಿ ಅನೀಲ ಸಿದ್ದಾಳಿ, ಜಿ.ಜಿ. ಹೊಟ್ಟಿಗೌಡರ, ಎ.ಬಿ.ಪಾಟೀಲ, ಬಸವರಾಜ ಹುಲ್ಲತ್ತಿ, ರಾಘವೇಂದ್ರ ಕುಲಕರ್ಣಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next