Advertisement

Dr| ಕಾಸರಗೋಡು ರಮಾನಂದ ಕಾಮತ್‌ ಅವರಿಗೆ ಆಸ್ಟ್ರೇಲಿಯಾದ ಅತ್ಯುಚ್ಚ ಗೌರವ

11:14 PM Feb 05, 2024 | Team Udayavani |

ಮಣಿಪಾಲ: ಕಾಸರಗೋಡು ಮೂಲದ ಡಾ| ಕೆ. ರಮಾನಂದ ಕಾಮತ್‌ ಅವರು “ಆಸ್ಟ್ರೇಲಿಯಾ ಡೇ’ಯ “ಮೆಡಲ್‌ ಆಫ್ ದಿ ಆರ್ಡರ್‌ ಆಫ್ ಆಸ್ಟ್ರೇಲಿಯಾ’ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

87ರ ಹರೆಯದ ಡಾ| ಕಾಮತ್‌ ಅವರು ಮಕ್ಕಳ ಗ್ಯಾಸ್ಟ್ರೊ ಎಂಟರಾಲಜಿ ವಿಭಾಗದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಸಿಡ್ನಿಯ ಮಕ್ಕಳ ಆಸ್ಪತ್ರೆಯಲ್ಲಿ ತೆರೆದ ಈ ವಿಶೇಷ ವಿಭಾಗ ಆಸ್ಟ್ರೇಲಿ ಯಾದಲ್ಲಿ ಮೊದಲನೆಯದ್ದು. ಈಗ ಈ ಆಸ್ಪತ್ರೆಯನ್ನು ವೆಸ್ಟ್‌ ಮೆಡ್‌ ಚಿಲ್ಡ್ರನ್ಸ್‌ ಹಾಸ್ಪಿಟಲ್‌ ಎನ್ನಲಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ಮಕ್ಕಳ ಲಿವರ್‌ ಟ್ರಾನ್ಸ್‌ ಪ್ಲಾಂಟ್‌ ಅನ್ನು ಮೊದಲು ನಿರ್ವಹಿಸಿದ ಕೀರ್ತಿಯೂ ಡಾ| ಕಾಮತ್‌ ಅವರದು. 2003ರಲ್ಲಿ ನಿವೃತ್ತರಾದರೂ ಈ ಕ್ಷೇತ್ರದ ನವೀನ ಬೆಳವಣಿಗೆಗಳ ಬಗೆಗೆ ಅಧ್ಯಯನ ನಡೆಸುತ್ತಿದ್ದಾರೆ. ಮದ್ರಾಸ್‌ ವಿ.ವಿ.ಯಲ್ಲಿ ಎಂಬಿಬಿಎಸ್‌, ವೆಲ್ಲೂರು ಸಿಎಂಸಿಯಲ್ಲಿ ಎಂಡಿ, ಡಿಸಿಎಚ್‌ ಅಧ್ಯಯನ ನಡೆಸಿ ವೆಲ್ಲೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಲಂಡನ್‌, ಮಲೇಶ್ಯಾದಲ್ಲಿ ಕಾರ್ಯನಿರ್ವಹಿಸಿ ಆಸ್ಟ್ರೇಲಿ ಯಾದಲ್ಲಿ ಸೇವೆ ಸಲ್ಲಿಸಿದರು. ಆರಂಭದಲ್ಲಿ ಮಣಿ ಪಾಲ ಕೆಎಂಸಿಯಲ್ಲೂ ಪ್ರಾಧ್ಯಾಪಕರಾ ಗಿದ್ದರು.

“ನಾನ್‌ ಆಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಡಿಸೀಸ್‌/ ಮೆಟಬಾಲಿಕ್‌ ಅಸೋಸಿಯೇಟೆಡ್‌ ಫ್ಯಾಟಿ ಲಿವರ್‌ ಡಿಸೀಸ್‌’ಗೆ ಸಂಬಂಧಿಸಿ ನಾನು ಕಾರ್ಯ ನಿರ್ವಹಿಸುವಾಗ ಒಂದೇ ಒಂದು ಪ್ರಕರಣವನ್ನೂ ಕಂಡಿರಲಿಲ್ಲ. ಈಗ ಪ್ರತೀ ನಾಲ್ವರು ಆಸ್ಟ್ರೇಲಿಯಾದ ಯುವಕರು/ಮಕ್ಕಳಲ್ಲಿ ಒಬ್ಬರಲ್ಲಿ ಕಂಡುಬರುತ್ತಿದೆ. ಬೊಜ್ಜು ಕಂಡುಬರುವುದಕ್ಕೆ ತಪ್ಪಾದ ಆಹಾರಕ್ರಮ, ಕಳಪೆ ಜೀವನಶೈಲಿ ಕಾರಣವಾಗಿದೆ. ಆರಂಭದಲ್ಲಿಯೇ ಇಂತಹ ಸಮಸ್ಯೆಯನ್ನು ಪತ್ತೆಹಚ್ಚಿದರೆ ನಿಯಂತ್ರಿಸಬಹುದು’ ಎನ್ನುತ್ತಾರೆ ಡಾ| ಕಾಮತ್‌.

Advertisement

Udayavani is now on Telegram. Click here to join our channel and stay updated with the latest news.

Next