ಶಿವಮೊಗ್ಗ: ಮೀಸಲಾತಿ ಹೆಚಿÌಸುವ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಇವರ ಸಂಯುಕ್ತ ಆಶ್ರಯ ದಲ್ಲಿ ಜಿಲ್ಲಾಡಳಿತ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮೀಸಲಾತಿ ಹೆಚ್ಚಿಸುವ ಸಂಬಂಧ ಎಲ್ಲಾ ರಾಜ್ಯಗಳು ಅಭಿಪ್ರಾಯ ನೀಡುವಂತೆ ಸುಪ್ರೀಂ ಕೋರ್ಟ್ ಕೇಳಿದೆ. ಅದರಂತೆ ಮೀಸಲಾತಿಯನ್ನು ಯಾವ ರೀತಿ ಹೆಚ್ಚಿಸಬೇಕೆಂಬುದರ ಬಗ್ಗೆ ತೀರ್ಮಾನಿಸಲಾಗಿದೆ. ಮೀಸಲಾತಿ ಪಡೆದವರೇ ಅನುಕೂಲ ಪಡೆಯುತ್ತಿದ್ದಾರೆ. ಶಾಸಕರು, ಸಚಿವರು, ಎಂಪಿಗಳು ಅವರೇ ಆಗುತ್ತಿದ್ದಾರೆ. ಐಎಎಸ್ ಆದವರ ಕುಟುಂಬದವರೇ ಆ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಇದನ್ನು ಹೋಗಲಾಡಿಸಿ ನಿಜವಾದ ಅರ್ಹರಿಗೆ ಮೀಸಲಾತಿ ಸಿಕ್ಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಂದು ಬಹಳಷ್ಟು ಕಡೆಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಈಗಲೇ ಇಷ್ಟಿರುವಾಗ ಅಂಬೇಡ್ಕರ್ ಕಾಲದಲ್ಲಿ ಅದು ಹೇಗಿತ್ತು ಎಂಬುದು ಊಹಿಸುವುದು ಕಷ್ಟಸಾಧ್ಯ. ಇಂದಿಗೂ ದಲಿತರು ದೇವಸ್ಥಾನದೊಳಗೆ ಹೋಗಲು ಹಿಂಜರಿಯುವ ಸ್ಥಿತಿ ಇದೆ. ಇದನ್ನು ಹೋಗಲಾಡಿಸುವುದು ಭಾಷಣದಿಂದ ಸಾಧ್ಯವಿಲ್ಲ. ಮನಪರಿವರ್ತನೆ ಹಾಗೂ ಆಚರಣೆಯಿಂದ ಸಾಧ್ಯ ಎಂದರು. ವಿಶೇಷ ಉಪನ್ಯಾಸ ನೀಡಿದ ಡಾ.ಕೆ.ಜಿ. ವೆಂಕಟೇಶ್, ಶಾಲೆಗೆ ಗೋಣಿಚೀಲ ತೆಗೆದುಕೊಂಡು ಹೋಗಿ ಅದರಲ್ಲಿ ಕುಳಿತು ಪಾಠ ಕೇಳಿ, ದೀಪದ ಬೆಳಕಿನ ಕುಳಿತು ರಾತ್ರಿಯೆಲ್ಲಾ ಓದಿ ಸಂವಿಧಾನ ಶಿಲ್ಪಿ ಎನಿಸಿಕೊಂಡಿದ್ದಾರೆ ಎಂದರು.
ದೇಶದ ಜನತೆಗೆ ಆರ್ಥಿಕ ಶಕ್ತಿ ನೀಡಿ, ಸಾಮಾಜಿಕ, ಸಮಾನತೆ ತನ್ನಿ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂದರು. ಇಂಗ್ಲೆಂಡ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಶೇ. 5 ರಷ್ಟಿರುವ ದಲಿತರಿಗೆ ನ್ಯಾಯ ಕೊಡಿ ಎಂದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಸಂವಿಧಾನದಿಂದಾಗಿ ಇಂದು ದೇಶದಲ್ಲಿ ಬದಲಾವಣೆಯಾಗುತ್ತಿದೆ. ಈ ಭೂಮಿ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೆ ಅಂಬೇಡ್ಕರ್ ಚಿಂತನೆಗಳು, ಹೋರಾಟಗಳು ಇರುತ್ತವೆ ಎಂದರು. ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಮೀಸಲಾತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ಅವಲೋಕಿಸಿ ಮುನ್ನಡೆಯುತ್ತಿದ್ದೇವೆ. ಮೀಸಲಾತಿ ಮತ್ತೆ ಮತ್ತೆ ಮುಂದುವರಿಯುತ್ತಲೇ ಹೋಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪುನರ್ ನಿಗದಿಯಾಗಬೇಕಿದೆ. ಪರಿಶಿಷ್ಟ ಜಾತಿ ಮತ್ತ ಪಂಗಡ ಈ ದೇಶದ ಜನ ಸಂಖ್ಯೆಯಲ್ಲಿ ಶೇ.25 ರಷ್ಟಿದ್ದಾರೆ. ಅವರಿಗೆ ನ್ಯಾಯ ಕೊಡುವ ಕೆಲಸ ಆಗಬೇಕಿದ ಎಂದರು.
ಶಾಸಕರಾದ ಆಯನೂರು ಮಂಜುನಾಥ, ಆರ್. ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಮೇಯರ್ ಸುನೀತಾ ಅಣ್ಣಪ್ಪ, ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುನಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ, ಸಂಘಟಕರಿಗೆ ಸನ್ಮಾನಿಸಲಾಯಿತು.