Advertisement

ಡಾ|ಅಂಬೇಡ್ಕರ್‌ ಸಮುದಾಯ ಭವನ ಕಾಮಗಾರಿ ನನೆಗುದಿಗ

02:34 PM Mar 30, 2019 | pallavi |

ಬಸವಕಲ್ಯಾಣ: ತಾಲೂಕಿನ ಕೋಹಿನೂರ ಗ್ರಾಮದ ಭೀಮನಗರ ಬಡಾವಣೆಯಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನ ಕಾಮಗಾರಿ ಕೈಗೆತ್ತಿಕೊಂಡು ಕೆಲವು ವರ್ಷಗಳೇ ಕಳೆದಿವೆ. ಆದರೆ ಈ ವರೆಗೂ ಕೆಲಸ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಗ್ರಾಮದಲ್ಲಿ ಸಭೆ, ಸಮಾರಂಭ ನಡೆಸುವ ಉದ್ದೇಶದಿಂದ ಮಂಜೂರಾದ ಸಮುದಾಯ ಭವನ ಕೆಲಸವನ್ನು ಲ್ಯಾಂಡ್‌ ಆ್ಯಂಡ್‌ ಆರ್ಮಿ ಇಲಾಖೆ ಕೈಗೆತ್ತಿಕೊಂಡು ಹಲವು ವರ್ಷಗಳು ಆಗಿವೆ. ಆದರೂ ಅಧಿಕಾರಿಗಳ ನಿರ್ಲಕ್ಷದಿಂದ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಮೂಲ ಸೌಕರ್ಯವಿಲ್ಲ: ಸಮುದಾಯ ಭವನದ ಕಟ್ಟಡ ನಿರ್ಮಾಣ ಮಾಡಿ. ಅದಕ್ಕೆ ಬಾಗಿಲು ಮತ್ತು ಕಿಟಕಿ ಮಾತ್ರ ಅಳವಡಿಸಲಾಗಿದೆ. ವಿನಃ ವಿದ್ಯುತ್‌ ಸಂಪರ್ಕ ಸೇರಿದಂತೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ.

ಇದರಿಂದ ಕಟ್ಟಡ ಉದ್ಘಾಟನೆಯಾಗುವ ಮುನ್ನವೇ ಬಾಗಿಲು ಮತ್ತು ಕಿಟಗಿ ಹಾಳಾಗಿರುವುದು ಒಂದೆಡೆಯಾದರೆ, ಕಟ್ಟಡ ಮಾತ್ರ ಯಾರಿಗೂ ಉಪಯೋಗಕ್ಕೆ ಬಾರದಂತಾಗಿದ್ದು, ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರುವುದು ಇನ್ನೊಂದೆಡೆ.

ಮನವಿಗೆ ಬೆಲೆ ಇಲ್ಲ: ಹೀಗಾಗಿ ಸಮುದಾಯ ಭವನದ ಕಾಮಗಾರಿ ಶೀಘ್ರ ಮುಗಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖೀಕವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎನ್ನುವುದು ಜನರ ಕೊರಗು.

Advertisement

ಬೆನ್ನತ್ತಿದಾಗ ಮಾತ್ರ ಕೆಲಸ: ಪ್ರತಿಯೊಂದು ಬಾರಿ ಕೆಲಸ ಮಾಡಿ ಎಂದು ಬೆನ್ನತ್ತಿದಾಗ ಮಾತ್ರ ಯಾವುದಾದರೂ ಒಂದು ಕೆಲಸ ಮಾಡಿ ಮತ್ತೆ ಬಹುದಿನಗಳವರೆಗೆ ಕೈ ಬಿಡಲಾಗುತ್ತಿದೆ. ಹೀಗಾಗಿ ಸಮುದಾಯ ಭವನದ ಕಾಮಗಾರಿ ಪೂರ್ಣಗಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಡಾವಣೆ ನಿವಾಸಿಗಳ ಆರೋಪ.

ಒಟ್ಟಿನಲ್ಲಿ ಕೋಹಿನೂರ ಗ್ರಾಮಸ್ಥರಿಗೆ ಅನುಕೂಲವಾಗಬೇಕಾದ ಸಮುದಾಯ ಭವನ ಕಾಮಗಾರಿ ನನೆಗುದಿಗೆ ಬಿದ್ದಿರುವ ಕಾರಣ ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕಾಮಗಾರಿ ಶೀಘ್ರ ಮುಗಿಸಿ, ಎಲ್ಲರ ಉಪಯೋಗಕ್ಕೆ ಅನುಕೂಲ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸಾಕಷ್ಟು ಪ್ರಯತ್ನದ ಮೂಲಕ ಕಟ್ಟಡವನ್ನು ಒಂದು ಹಂತಕ್ಕೆ ತರಲಾಗಿದ್ದು, ವಿದ್ಯುತ್‌ ಸಂಪರ್ಕ ಹಾಗೂ
ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಅವುಗಳನ್ನು ಕೂಡ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ಆನಂದ ಪಾಟೀಲ್‌, ಜಿಪಂ ಸದಸ್ಯ, ಕೋಹಿನೂರ

ಜಿಪಂ ಸದಸ್ಯ, ಕೋಹಿನೂರ ಕೆಲವು ವರ್ಷಗಳಿಂದ ಸಮುದಾಯ ಭವನ ಪೂರ್ಣಗೊಳ್ಳದೇ ಹಾಗೆಯೇ
ಉಳಿದಿದೆ. ಇದರಿಂದ ಯಾರಿಗೂ ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕಟ್ಟಡ ಕಾಮಗಾರಿ ಶೀಘ್ರ ಮುಗಿಸಬೇಕು.
ಶರಣು ಭೂತೆ, ಗ್ರಾಮಸ್ಥ

„ವೀರಾರೆಡ್ಡಿ.ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next