Advertisement
ಕೃಷಿಕ ಕುಟುಂಬದಲ್ಲಿ ಜನಿಸಿದ ಡಾ| ಗುಡಾರು ಸದ್ಯ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಆಸ್ಟರ್ ರಮೇಶ್ ಆಸ್ಪತ್ರೆಗಳ ಶೈಕ್ಷಣಿಕ ನಿರ್ದೇಶಕರಾಗಿದ್ದಾರೆ. ಎಂಬಿಬಿಎಸ್ ಶಿಕ್ಷಣ ಮುಗಿಸಿದ ಜಗದೀಶ್ ಅವರು ಕೆಎಂಸಿ, ಮಣಿಪಾಲದಲ್ಲಿ ಎಂ.ಎಸ್. ಆರ್ಥೋ ಪದವಿ, ಯುಎಸ್‌ಎಐಎಂನಿಂದ ಎಂ.ಎಸ್., ಎಂಸಿಎಚ್ ಪದವಿ ಪಡೆದು ಟ್ರಾಮಾ ಲೆವೆಲ್ ನಿರ್ವಹಣೆಯಲ್ಲಿ ಕೀಲು ಮರುಜೋಡಣೆಯಲ್ಲಿ ಸಾಗರೋತ್ತರ ಫೆಲೋಶಿಪ್ ಪಡೆದುಕೊಂಡಿದ್ದಾರೆ.
ಡಾ| ಜಗದೀಶ್ 1,83,000ಕ್ಕೂ ಅಧಿಕ ರೋಗಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ಯಶಸ್ವಿ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಸಂದಿವೆ. ಮೂಳೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಕರೇಡು ಮತ್ತು ವೆಂಕಟಗಿರಿ ಗ್ರಾಮಗಳ ಮೀನುಗಾರರು, ನೇಕಾರರು ಸೇರಿದಂತೆ ಸಾರ್ವಜನಿಕರಿಗೆ ಅವರು ನಿರಂತರವಾಗಿ ಉಚಿತ ಮೂಳೆ ಚಿಕಿತ್ಸೆಯ ಸೇವೆಗಳನ್ನು ನೀಡುತ್ತಿದ್ದಾರೆ. ಕರೇಡು ಗ್ರಾಮದಲ್ಲಿ 3,700ಕ್ಕಿಂತ ಹೆಚ್ಚು ವೆಂಕಟಗಿರಿಯಲ್ಲಿ 3,500 ಜನರು ಅವರ ವೈದ್ಯಕೀಯ ಚಿಕಿತ್ಸೆಯಿಂದ ಪ್ರಯೋಜನ ಪಡೆದಿದ್ದಾರೆ.
Related Articles
Advertisement