Advertisement
ಈ ಯೋಜನೆಯಡಿ ಜಿಲ್ಲೆಯಲ್ಲಿ391 ಕಾಮಗಾರಿಗಳಿಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, 145 ಕೋ.ರೂ.ಅನುದಾನ ಮೀಸಲಿರಿಸಲಾಗಿದೆ. 150 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ.
Related Articles
Advertisement
ಏನಿದು ಜಲ ಜೀವನ್ ಮಿಷನ್? :
ಕೇಂದ್ರ ಸರಕಾರ ಜೆಜೆ ಮಿಷನ್ ಅನ್ನು ಆ.2019 ರಲ್ಲಿ ಘೋಷಿಸಿತು. 2024ರ ವೇಳೆಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರು ಸರಬರಾಜು ಒದಗಿಸು ವುದು ಈ ಮಿಷನ್‌ನ ಉದ್ದೇಶ. ದೇಶಾದ್ಯಂತ ಸುಸ್ಥಿರ ನೀರು ಸರಬರಾಜು ನಿರ್ವಹಣೆಯ ಉದ್ದೇಶಗಳನ್ನು ಸಾಧಿಸಲು ಕೇಂದ್ರ, ರಾಜ್ಯ ಸರಕಾರಗಳು ಒಂದಾಗಿವೆ.
ಜೀವನ್ ಮಿಷನ್ ಗುರಿ : ಮಳೆನೀರು ಕೊಯ್ಲು, ಅಂತರ್ಜಲ ಪುನರ್ಭರ್ತಿ, ಕೃಷಿಯಲ್ಲಿ ಮರುಬಳಕೆಗಾಗಿ ಮನೆಯ ತ್ಯಾಜ್ಯ ನೀರನ್ನು ನಿರ್ವಹಿಸಲು ಸ್ಥಳೀಯ ಮೂಲ ಸೌಕರ್ಯ ರಚಿಸುವ ಗುರಿಯನ್ನು ಹೊಂದಿದೆ. ಜತೆಗೆ, ಪಾಯಿಂಟ್ ರೀಚಾರ್ಜ್, ಸಣ್ಣ ನೀರಾವರಿ ಟ್ಯಾಂಕ್‌ಗಳ ನಿರ್ಜಲೀಕರಣ, ಕೃಷಿಗೆ ಗ್ರೇ ವಾಟರ್ ಬಳಕೆ ಮತ್ತು ಮೂಲ ಸುಸ್ಥಿರತೆಯಂತಹ ವಿವಿಧ ನೀರಿನ ಸಂರಕ್ಷಣಾ ಪ್ರಯತ್ನ ಗಳನ್ನೂ ಆಧರಿಸಿದೆ.
ನೀರಿನ ಬೇಡಿಕೆ,ಪೂರೈಕೆಗೆ ಕ್ರಮ :
ಅಂತರ್ಜಲ ಮಟ್ಟ ಕಡಿಮೆಯಾಗು ತ್ತಿರುವುದರಿಂದ, ಇಂದು ದೇಶದಲ್ಲಿ ನೀರಿನ ಸಂರಕ್ಷಣೆಯ ತುರ್ತು ಅವಶ್ಯಕತೆಯಾಗಿದೆ. ಆದ್ದರಿಂದ, ಜಲಜೀವನ್ ಮಿಷನ್ ಸ್ಥಳೀಯ ಮಟ್ಟದಲ್ಲಿ ಸಮಗ್ರ ಬೇಡಿಕೆ ಮತ್ತು ನೀರಿನ ಪೂರೈಕೆ ನಿರ್ವಹಣೆಯತ್ತ ಗಮನ ಹರಿಸಲಿದೆ.
ಬೈಂದೂರಿಗೆ ಪ್ರತ್ಯೇಕ ಡಿಪಿಆರ್ :
ಬೈಂದೂರು ತಾಲೂಕಿಗೆ ನಬಾರ್ಡ್ ಯೋಜನೆಯಡಿ ಪ್ರತ್ಯೇಕ ಡಿಪಿಆರ್ ಸಿದ್ದಪಡಿಸಲು ಯೋಜನೆ ರೂಪಿಸ ಲಾಗುತ್ತಿದೆ. ಇದು ಇನ್ನಷ್ಟೇ ಜಾರಿ ಯಾಗಬೇಕಿದೆ. ಈ ಬಗೆಗಿನ ಪ್ರಕ್ರಿಯೆ ಗಳು ಈಗ ಚಾಲ್ತಿಯಲ್ಲಿದೆ.
ಜಲಜೀವನ್ ಯೋಜನೆ ಮೂಲಕ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪ್ರಥಮ ಹಂತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿವೆ. ಕಾಮಗಾರಿಯ ಮೇಲೆ ಹಣ ಬಿಡುಗಡೆ ಆಗಲಿದೆ. 15-20 ದಿನಗಳೊಳಗೆ ಕಾಮಗಾರಿ ಪ್ರಕ್ರಿಯೆ ಜಿಲ್ಲೆಯಾದ್ಯಂತ ಆರಂಭವಾಗಲಿದೆ.–ಡಾ| ನವೀನ್ ಭಟ್, ಜಿ.ಪಂ.ಸಿಇಒ, ಉಡುಪಿ.