Advertisement

Dozen Snakes: ಮನೆಯಲ್ಲಿ ಅಡಗಿದ್ದ ಒಂದು ಹಾವನ್ನು ಹಿಡಿಯಲು ಹೋಗಿ ಸಿಕ್ಕಿದ್ದು 12 ಹಾವು

05:17 PM Jul 22, 2023 | Team Udayavani |

ಉತ್ತರಪ್ರದೇಶ: ಮನೆಯೊಳಗೆ ಪತ್ತೆಯಾದ ಹಾವನ್ನು ಹಿಡಿಯಲು ಹೋದ ವೇಳೆ ಅದೇ ಮನೆಯಲ್ಲಿ ಬರೋಬ್ಬರಿ ಹನ್ನೆರಡು ಹಾವುಗಳು ಪತ್ತೆಯಾದ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ದೇವಜಿತ್‌ಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement

ಮನೆ ಮಾಲೀಕರಾದ ಅವಧೇಶ್ ಅವರು ಎರಡು ದಿನಗಳ ಹಿಂದೆ ತಮ್ಮ ಮನೆಯ ಆವರಣದಲ್ಲಿ ಎರಡು ಹಾವುಗಳನ್ನು ಕಂಡಿದ್ದಾರೆ ಇದನ್ನು ಹಿಡಿಯಲು ಹೋದ ವೇಳೆ ಅದು ಮನೆಯ ಒಳಗೆ ಇರುವ ಬಿಲದೊಳಗೆ ಸೇರಿಕೊಂಡಿದೆ. ಇದನ್ನು ಅಲ್ಲಿಂದ ರಕ್ಷಿಸಲು ಮುಂದಾಗಿದ್ದಾರೆ. ಹಾವಿನ ರಕ್ಷಣೆಗಾಗಿ ಬಿಲವನ್ನು ಅಗೆದಾಗ ಅದರ ಒಳಗೆ ಒಂದೊಂದೇ ಹಾವುಗಳು ಹೊರ ಬಂದಿವೆ ಅವಧೇಶ್ ಅವರು ಹಾವುಗಳನ್ನು ರಕ್ಷಣೆ ಮಾಡುವವರು ಆಗಿದ್ದರಿಂದ ಹಾವಿನ ಭಯ ಅವರಲ್ಲಿ ಇರಲಿಲ್ಲ ಹಾಗಾಗಿ ಬಿಲದಿಂದ ಹೊರಬಂದ ಒಂದೊಂದೇ ಹಾವುಗಳನ್ನು ಒಂದು ಬಕೆಟ್ ನಲ್ಲಿ ಸುರಕ್ಷಿತವಾಗಿ ಹಾಕಿ ಇಟ್ಟಿದ್ದಾರೆ ಈ ವೇಳೆ ಹಾವುಗಳನ್ನು ಲೆಕ್ಕ ಹಾಕಿದಾಗ ಬರೋಬ್ಬರಿ ಹನ್ನೆರಡು ಹಾವುಗಳು ಪತ್ತೆಯಾಗಿವೆ.

ಸದ್ಯ ಹಾವುಗಳನ್ನು ಬಕೆಟ್ ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೂ ಮಾಹಿತಿಯನ್ನು ನೀಡಲಾಗಿದೆ, ಕೂಡಲೇ ಅವರು ಬಂದು ಹಾವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಿ ಎಂದು ಮನೆಮಂದಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Thirthahalli;ಎರಡು ಕಾರಿನ ನಡುವೆ ಅಪಘಾತ; ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ!

Advertisement

Udayavani is now on Telegram. Click here to join our channel and stay updated with the latest news.