Advertisement

‘ವರದಕ್ಷಿಣೆ ಕಾನೂನು ಪುರುಷರ ದೌರ್ಜನ್ಯಕ್ಕೆ ಬಳಕೆ’

09:05 AM Jul 29, 2017 | Karthik A |

ಹೊಸದಿಲ್ಲಿ: ವರದಕ್ಷಿಣೆ ಕಾನೂನು ಪುರುಷರ ದೌರ್ಜನ್ಯಕ್ಕೆ ಬಳಸುವ ಸಾಧನವಾಗಿದ್ದು, ಇದು ‘ಕಾನೂನಾತ್ಮಕ ಭಯೋತ್ಪಾದನೆ’ ಆಗಿದೆ. ಹಾಗಾಗಿ ಈ ಕಾನೂನಿಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಲೋಕಸಭೆ ಯಲ್ಲಿ ಬಿಜೆಪಿ ಸಂಸದ ಅರ್ನೋಲ್‌ ವರ್ಮಾ ಆಗ್ರಹಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, 1998- 2015ರ ಅವಧಿಯಲ್ಲಿ ವರದಕ್ಷಿಣೆ ಪ್ರಕರಣದಲ್ಲಿ ಸುಮಾರು 27 ಲಕ್ಷ ಮಂದಿ ಬಂಧಿಸಲ್ಪಟ್ಟಿದ್ದಾರೆ. ಎಷ್ಟೋ ಪುರುಷರು ಆತ್ಮಹತ್ಯೆ ಮಾಡಿಕೊಂಡು ‘ಶಾದಿ ಕಿ ಶಹೀದ್‌'(ವಿವಾಹದ ಹುತಾತ್ಮರು) ಆಗಿದ್ದಾರೆ. ಮಹಿಳೆಯರ ಪರ ಎನ್ನುವುದು ಪುರುಷ ವಿರೋಧಿ ಎನ್ನುವಂತಾಗಬಾರದು. ಕಾನೂನಿನ ಲೋಪಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next