Advertisement

ಡೌನ್‌ಲೋಡ್‌ ಆಗದ ಪಿಯು ಸ್ಕ್ಯಾನ್‌ ಪ್ರತಿ: ಪರದಾಟ

01:12 AM Jul 07, 2022 | Team Udayavani |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ.

Advertisement

ಪಿಯು ಇಲಾಖೆಯ ವೇಳಾಪಟ್ಟಿ ಪ್ರಕಾರ ಬುಧವಾರದಿಂದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಸ್ಕ್ಯಾನ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿತ್ತು.

ಆ ಪ್ರಕಾರವಾಗಿ ಪಾಲಕರು ಮತ್ತು ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ತಾಂತ್ರಿಕ ದೋಷದಿಂದ ಕಿರಿಕಿರಿ ಅನುಭವಿಸಿದರು.
ಪಿಯು ಇಲಾಖೆಗೆ ಕರೆ ಮಾಡಿದರೂ ಸೂಕ್ತ ಮಾಹಿತಿ ನೀಡದಿದ್ದರಿಂದ ಇಲಾಖೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವಕಾಶ ಕಲ್ಪಿಸಲಾಗುವುದು
ನಿಗದಿತ ವೇಳೆಗೆ ಸ್ಕ್ಯಾನ್‌ ಕಾಪಿ ಡೌನ್‌ಲೋಡ್‌ ಆಗಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಗುರುವಾರದ ವೇಳೆ ಬಗೆಹರಿಯಲಿದ್ದು, ಮಧ್ಯಾಹ್ನ 12 ಗಂಟೆಯ ಅನಂತರ ಡೌನ್‌ಲೋಡ್‌ಗೆ ಅವಕಾಶ ಕಲ್ಪಿಸುವುದಾಗಿ ಪ.ಪೂ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next