Advertisement
ಇಂಥದ್ದೇ ಬಣ್ಣದ ಮಾತು ಗಳನ್ನಾಡುತ್ತ, ಒಳಗೊಂದು ಥರ – ಹೊರ ಗೊಂದು ಥರ ಇರುವಂಥ ಕಥೆ ಮತ್ತು ಪಾತ್ರಗಳ ಸುತ್ತ ಸಿನಿಮಾ ನಡೆಯುವು ದರಿಂದ, ಚಿತ್ರತಂಡ ಕೂಡ ತಮ್ಮ ಸಿನಿಮಾಕ್ಕೆ “ಡವ್ ಮಾಸ್ಟರ್’ ಅಂಥ ಹೆಸರಿಟ್ಟಿದೆ. ಕನ್ನಡ ಚಿತ್ರರಂಗದ ವಿವಿಧ ವಿಭಾಗ ಗಳಲ್ಲಿ ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಯುವ ಪ್ರತಿಭೆ ಆರ್ಯ, “ಡವ್ ಮಾಸ್ಟರ್’ ಚಿತ್ರಕ್ಕೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
Related Articles
Advertisement
ಈಗಾಗಲೇ ಮೂರ್‍ನಾಲ್ಕು ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ’ ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ಮತ್ತೂಂದು ಪ್ರಮುಖ ಪಾತ್ರ ದಲ್ಲಿ ತಬಲ ನಾಣಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಅವರದ್ದು ಮದುವೆಯಾಗಲು ಹುಡುಗಿಯನ್ನು ಹುಡುಕಲು ಪರದಾಡುತ್ತಿರುವ ವರನ ಪಾತ್ರವಂತೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ತಬಲ ನಾಣಿ, “ಇದೊದು ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರ. ನನ್ನದು ತುಂಬ ವಯಸ್ಸಾದರೂ, ಮದುವೆಯಾಗದ ಮದುವೆ ಗಂಡಿನ ಪಾತ್ರ. ಸಿನಿಮಾದ ಕಥೆಯ ಎಳೆ ತುಂಬ ಚೆನ್ನಾಗಿದೆ. ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತುಗಳನ್ನಾಡಿದರು. “ಡವ್ ಮಾಸ್ಟರ್’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಬಹುಭಾಷಾ ನಟಿ ಶಕೀಲಾ ಮತ್ತೂಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ಬಹಳ ವರ್ಷಗಳ ನಂತರ ಕನ್ನಡ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ತುಂಬ ಚೆನ್ನಾಗಿರು ವಂಥ ಗೃಹಿಣಿ ಪಾತ್ರ ಇದರಲ್ಲಿದೆ. ಹೊಸ ತಂಡದ ಜೊತೆ ಕೆಲಸಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುವುದು ಚಿತ್ರದ ಬಗ್ಗೆ ಶಕೀಲಾ ಮಾತು. ಉಳಿದಂತೆ “ಡವ್ ಮಾಸ್ಟರ್’ ಚಿತ್ರದಲ್ಲಿ ಕಾಕ್ರೊಚ್ ಸುಧಿ, ಗೋವಿಂದೇ ಗೌಡ (ಜಿ.ಜಿ), ಸುಂದರ್, ಗಿರೀಶ್ ಜತ್ತಿ, ನವೀನ್ ಪಡೀಲ್, ಆ್ಯಂಟನಿ ಕಮಲ್, ಸಪ್ನಾ, ಮಿತ್ರ, ಕುರಿ ಪ್ರತಾಪ್ ಮೊದಲಾ ದವರು ಕಾಣಿಸಿಕೊಳ್ಳುತ್ತಿದ್ದು, ಎಲ್ಲರೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಈ ಹಿಂದೆ “ನಮ್ಮೂರ ಹೈಕ್ಳು’ ಸಿನಿಮಾಕ್ಕೆ ಸಂಗೀತ ಮಾಡಿದ್ದ ಶಕೀಲ್ ಅಹಮದ್ ಈ ಚಿತ್ರದ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಹಾಡುಗಳಿಗೆ ನಾಗಿ ನೃತ್ಯ ಸಂಯೋಜನೆಯಿದೆ. ಚಿತ್ರಕ್ಕೆ ಕಿರಣ್ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. “ರೈನ್ ಬೋ’ ಬ್ಯಾನರ್‌ನಲ್ಲಿ ರೋಶನ್ “ಡವ್ ಮಾಸ್ಟರ್’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.