Advertisement

H-1 B ವೀಸಾ ದುಪ್ಪಟ್ಟು ಮಾಡಿ: ಅಮೆರಿಕ ಸರ್ಕಾರಕ್ಕೆ ಐಟಿಸರ್ವ್‌ ಮನವಿ!

10:05 PM Jul 19, 2023 | Team Udayavani |

ವಾಷಿಂಗ್ಟನ್‌: ಭಾರತೀಯ-ಅಮೆರಿಕನ್ನರ ಮಾಲಿಕತ್ವದ ಸಣ್ಣ ಮತ್ತು ಮಧ್ಯಮ ಗಾತ್ರದ ಐಟಿ ಕಂಪನಿಗಳಿಗೆ ಅತ್ಯಂತ ಕುಶಲ ಕೆಲಸಗಾರರ ತೀವ್ರ ಕೊರತೆ ಎದುರಾಗಿದೆ!

Advertisement

ಹೀಗಾಗಿ 2,100 ಕಂಪನಿಗಳನ್ನೊಳಗೊಂಡಿರುವ ಐಟಿಸರ್ವ್‌ ಎಂಬ ಸಂಸ್ಥೆ ಅಮೆರಿಕದ ಸೆನೇಟ್‌ ಮತ್ತು ಕಾಂಗ್ರೆಸ್‌ ಸದಸ್ಯರನ್ನು ಭೇಟಿ ಮಾಡಿ, ಎಚ್‌-1ಬಿ ವೀಸಾಗಳ ಸಂಖ್ಯೆ ಹೆಚ್ಚಿಸುವಂತೆ ಮನವಿ ಮಾಡಲು ನಿರ್ಧರಿಸಿವೆ. ಎಚ್‌-1ಬಿ ವೀಸಾ ಎನ್ನುವುದು ವಲಸೆಯೇತರ ಕಾರಣಗಳಿಗೆ ನೀಡಲ್ಪಡುತ್ತದೆ. ಅಂದರೆ ಯಾವುದೇ ನಿರ್ದಿಷ್ಟ ಹುದ್ದೆಗಳಿಗೆ ತಾತ್ವಿಕವಾಗಿಯಾಗಲೀ, ತಾಂತ್ರಿಕವಾಗಿಯಾಗಲೀ ವಿಶೇಷ ನೈಪುಣ್ಯ ಅಗತ್ಯವಿದ್ದರೆ, ಅಂತಹ ಹುದ್ದೆಗಳಿಗೆ ವಿದೇಶಿಯರನ್ನು ನೇಮಿಸಿಕೊಳ್ಳಬಹುದು. ಅದಕ್ಕೆ ಎಚ್‌-1ಬಿ ವೀಸಾವನ್ನು ಬಳಸಿಕೊಳ್ಳಬಹುದು. ಪ್ರಸ್ತುತ 65,000 ಎಚ್‌-1ಬಿ ವೀಸಾಗಳಿವೆ, ಇದನ್ನು ದುಪ್ಪಟ್ಟು ಮಾಡಬೇಕೆಂದು ಆಗ್ರಹಿಸಿವೆ.

ಮಂಗಳವಾರ ಈ ಬಗ್ಗೆ ಸಭೆ ಸೇರಿದ್ದ ಐಟಿಸರ್ವ್‌ ಸಂಸ್ಥೆ, ಈ ಬಗ್ಗೆ ಬಲವಾದ ಮನವಿ ಮಾಡಲು ನಿರ್ಧರಿಸಿದೆ. ಒಂದು ವೇಳೆ ಈ ಬೇಡಿಕೆಗೆ ಮನ್ನಣೆ ದೊರಕಿದರೆ, ಭಾರತೀಯರಿಗೆ ಅಮೆರಿಕಕ್ಕೆ ತೆರಳಲು ಅತ್ಯುತ್ತಮ ಅವಕಾಶವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next