ದೋಟಿಹಾಳ: ಗ್ರಾಮದಲ್ಲಿ ಕಳೆದ ವರ್ಷದಿಂದ ನನೆಗುಂದಿಗೆ ಬಿದ್ದಿದ್ದ ಗ್ರಾಮದ ಜೆಜೆಎಂ ಕಾಮಗಾರಿ ರವಿವಾರದಿಂದ ಪುನಃ ಆರಂಭಗೊಂಡಿದೆ.
ಒಂದು ವರ್ಷದಿಂದ ಈ ಕಾಮಗಾರಿ ನನೆಗುಂದಿಗೆ ಬಿದ್ದಿತ್ತು. ಗ್ರಾಮದ ಮುಖ್ಯ ರಸ್ತೆಗಳ ಸಿಸಿ ಅಗೆದು ಪೈಪ್‌ಗಳನ್ನು ಹಾಕದೇ ಹಾಗೆ ಬಿಟ್ಟಿದ್ದರು. ಇದರಿಂದ ರಸ್ತೆಯಲ್ಲಿ ಬೈಕ್ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ಮುಂದಿನ ತಿಂಗಳು ಗ್ರಾಮದಲ್ಲಿ ಎರಡು ಜಾತ್ರೆಗಳು ಬರುತ್ತಿವೆ. ಇನ್ನಾದರೂ ರಸ್ತೆ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕಳೆದ ವರ್ಷದಂತೆ ಈ ವರ್ಷವೂ ಜಾತ್ರೆಗೆ ಬರುವ ಸಾವಿರಾರೂ ಭಕ್ತರು ಜನಪ್ರತಿನಿಧಿಗಳಿಗೆ ಮತ್ತು ಮುಖಂಡರಿಗೆ ಛೀಮಾರಿ ಹಾಕುವುದು ಗ್ಯಾರಂಟಿ. ಜಾತ್ರೆಗಳು ಆರಂಭಕ್ಕಿಂತ ಮುಂಚಿತವಾಗಿ ಗ್ರಾಮದ ರಸ್ತೆಗಳನ್ನು ಸರಿಪಡಿಸಿ ಗ್ರಾಮದ ಹೆಸರು ಉಳಿಸಿ ಎಂಬುವುದು ಪ್ರಜ್ಞಾವಂತ ನಾಗರಿಕರ ಪತ್ರಿಕೆಯ ಮೂಲಕ ಕಳಕಳಿ ವ್ಯಕ್ತಪಡಿಸಿದ್ದರು.
Related Articles
ಈ ಬಗ್ಗೆ ಇದರ ಬಗ್ಗೆ ಜ. 11ರಂದು “ಉದಯವಾಣಿ’ ವೆಬ್ ಮತ್ತು “ಉದಯವಾಣಿ’ ಪತ್ರಿಕೆಯಲ್ಲಿ “ಜೆಜೆಎಂ ಕಾಮಗಾರಿ ಆರಂಭ ಯಾವಾಗ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿತ್ತು.
ಇದರಿಂದ ಎಚ್ಚೆತ್ತುಕೊಂಡಅಧಿಕಾರಿಗಳು ರವಿವಾರದಿಂದ ಗ್ರಾಮದಲ್ಲಿ ಮತ್ತೆ ಕಾಮಗಾರಿ ಪುನಃ ಆರಂಭ ಮಾಡಿದ್ದಾರೆ. ಸದ್ಯ ಗ್ರಾಮದ ಬನಶಂಕರಿದೇವಿ ರಥಬೀದಿಸಿಸಿರಸ್ತೆಯಲ್ಲಿಜೆಜೆಎಂ ಕಾಮಗಾರಿಯ ಪೈಪ್‌ಗ್ಳನ್ನು ಹಾಕುವ ಕೆಲಸ ನಡೆದಿದೆ. ಗ್ರಾಮದ ಎರಡು ಜಾತ್ರೆಗಳು ಆರಂಭಕ್ಕಿಂತ ಮುಂಚಿತವಾಗಿ ಗ್ರಾಮದ ಪ್ರಮುಖ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಾಲೂಕು ಅಧಿಕಾರಿ ವಿಲಾಸ್ ಅವರು ತಿಳಿಸಿದ್ದಾರೆ.