Advertisement

ಮೆಗಾ ಹರ್ಟ್ಜ್ ಸಾಮರ್ಥ್ಯದ 5ಜಿ ಸ್ಪೆಕ್ಟ್ರಮ್‌ ಹರಾಜು

10:09 AM Dec 16, 2019 | Team Udayavani |

ಹೊಸದಿಲ್ಲಿ: ದೂರ ಸಂಪರ್ಕ ಇಲಾಖೆ ತನ್ನ 8526 ಮೆಗಾ ಹರ್ಟ್ಜ್ ಸಾಮರ್ಥ್ಯದ 5ಜಿ ತರಂಗಾಂತರದ ಇ ಹರಾಜಿಗೆ ಅರ್ಹ ಟೆಲಿಕಾಂ ಏಜೆನ್ಸಿಗಳಿಗೆ ಆಹ್ವಾನ ನೀಡಿದ್ದು, 4.98 ಲಕ್ಷ ಕೋಟಿ ರೂ. ಮೌಲ್ಯದ 8526 ಮೆಗಾ ಹರ್ಟ್ಜ್ ಸ್ಪೆಕ್ಟ್ರಮ್‌ ಖರೀದಿಸಲು ಆಸಕ್ತ ಕಂಪನಿಗಳು ಜನವರಿ 13ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

Advertisement

ಪ್ರಸ್ತಾವನೆಯ ಕೋರಿಕೆಯ ಮೆರೆಗೆ (ಆರ್‌ಎಫ್ಟಿ) ಜನವರಿ 24ರಂದು ಹಣಕಾಸಿನ ಬಿಡ್‌ ತೆರೆಯಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದ್ದು, ಹರಾಜುದಾರರಿಗೆ 3 ಮತ್ತು 1 ವರ್ಷಗಳ ಕಾಲ ಸಾಮಾನ್ಯ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

3 ವರ್ಷ ಪೂರ್ಣಗೊಂಡ ಅನಂತರ ಅಗತ್ಯವಿದ್ದಲ್ಲಿ ಪರಸ್ಪರ ಒಪ್ಪಿಗೆ ಮೇಲೆ 1 ವರ್ಷ ವಿಸ್ತರಣೆಯನ್ನು ಮಾಡಿಕೊಳ್ಳಬಹುದು ಎಂದು ಆರ್‌ಎಫ್ಟಿ ಹೇಳಿದ್ದು, ಆಯ್ಕೆಯಾದ ಏಜೆನ್ಸಿಗೆ ಅಗತ್ಯವಾದ ಬಿಡ್ಡಿಂಗ್‌ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುವ್ಯವಸ್ಥಿತಗೊಳಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅನಂತರ ಹರಾಜನ್ನು 2020ರ ಜೂನ್‌ ಜುಲೈ ವೇಳೆಗೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ಪೆಕ್ಟ್ರಮ್‌ ಹರಾಜು ನಡೆಸಲು ಕೇಂದ್ರ ಸರಕಾರ ಯೋಜನೆಗಳನ್ನು ಹಾಕಿಕೊಂಡಿತ್ತು. ಆದರೆ, ಟೆಲಿಕಾಂ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾದ ನಿವ್ವಳ ಆದಾಯ (ಅಡ್ಜಸ್ಟೆಡ್‌ ಗ್ರಾಸ್‌ ರೆವೆನ್ಯೂ) ಬಗೆಗಿನ ಸುಪ್ರೀಂಕೋರ್ಟ್‌ ಆದೇಶ ವಿಳಂಬವಾದ ಪರಿಣಾಮ ಹರಾಜು ಪ್ರಕ್ರಿಯೆ ತಡವಾಗಿ ಆರಂಭವಾಗಿದೆ.

ಪ್ರತಿ ಟೆಲಿಕಾಂ ವಲಯದಲ್ಲಿ 5ಜಿ ಹರಾಜಿಗೆ 3,300 3,400 ಮೆಗಾ ಹಟ್ಜ್ ಮತ್ತು 3,425 3,600 ಮೆಗಾ ಹರ್ಟ್ಜ್ ಬ್ಯಾಂಡ್‌ ನಡುವಿನ 275 ಮೆಗಾ ಹರ್ಟ್ಜ್ ಆವರ್ತನ ಲಭ್ಯವಿದೆ. ಡಿಒಟಿಯ ದೃಷ್ಟಿಯಲ್ಲಿ ಪ್ರಸ್ತುತ ಲಭ್ಯವಿರುವ ಈ ಸ್ಪೆಕ್ಟ್ರಮ್‌ಗಳಲ್ಲಿ 5ಜಿ ಸೇವೆ ಆರಂಭಿಸಲು ಸಾಕಾಗುವಷ್ಟು ಸಾಮರ್ಥ್ಯ ಇದೆ ಎಂದು ತಿಳಿಸಲಾಗಿದೆ. ಐಟಿಯು ಪ್ರಕಾರ, ಸಾಮಾನ್ಯವಾಗಿ 5ಜಿ ಅಪ್ಲಿಕೇಷನ್‌ ಸೆಕೆಂಡಿಗೆ 10 ಗಿಗಾಬಿಟ್‌ ವೇಗದಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಸೆಕೆಂಡಿಗೆ 20 ಗಿಗಾಬಿಟ್‌ ವೇಗದಲ್ಲಿ ಡೇಟಾ ರವಾನಿಸಬಹುದು. ಟೆಲಿಕಾಂ ವಲಯದ ತಜ್ಞರು ಪ್ರಕಾರ ಕಡಿಮೆ ಡೇಟಾ ವೇಗಕ್ಕೆ ಸುಮಾರು 320 ಮೆಗಾ ಹರ್ಟ್ಜ್ ಸ್ಪೆಕ್ಟ್ರಮ್‌ ಅಗತ್ಯವಿದೆ. ಹೆಚ್ಚಿನ ಡೇಟಾ ವೇಗಕ್ಕೆ ಸುಮಾರು 670 ಮೆಗಾ ಹರ್ಟ್ಜ್ ತರಂಗಾಂತರ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next