Advertisement

ಭಾರತದ ಬಾಗಿಲಲ್ಲಿ ಡೋಪಿಂಗ್‌ ಕಂಟಕ!

06:45 AM Apr 03, 2018 | Team Udayavani |

ಗೋಲ್ಡ್‌ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡ ಸಮಸ್ಯೆಯ ಸುಳಿಗೆ ಸಿಲುಕಿದೆ. ಭಾರತದ ಬಾಗಿಲಲ್ಲಿ ಡೋಪಿಂಗ್‌ ಕಂಟಕವೊಂದು ಹೆಡೆ ಎತ್ತಿದೆ!

Advertisement

ಹೌದು, ಭಾರತದ ಬಾಕ್ಸರ್‌ಗಳು ಉದ್ದೀಪನ ಮದ್ದು ಸೇವಿಸುವ ಮೂಲಕ ಗೇಮ್ಸ್‌ನ “ಸೂಜಿ ರಹಿತ ನೀತಿ’ಯನ್ನು ಮುರಿದಿದ್ದಾರೆ ಎಂಬ ಊಹಾಪೋಹಗಳು ಹಬ್ಬಿವೆ. ಆದರೆ ಭಾರತ ಡೋಪಿಂಗ್‌ ಮುಜುಗರಕ್ಕೆ ಗುರಿಯಾಗದೆ ಯಶಸ್ವಿಯಾಗಿ ಕೂಟದಲ್ಲಿ ಪಾಲ್ಗೊಳ್ಳುವ ವಿಶ್ವಾಸದಲ್ಲಿದೆ.

ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್‌ ಗ್ರೀವೆಂಬರ್ಗ್‌ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಉದ್ದೀಪನ ಮದ್ದು ಸೇವಿಸಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ಸಿಜಿಎಫ್ ತನಿಖೆ ಆರಂಭಿಸಿದೆ. ಆದರೆ ತನಿಖೆಯಲ್ಲಿ ಭಾರತ ಸಮಸ್ಯೆಗೆ ಸಿಲುಕಿರುವುದನ್ನು ತಿಳಿಸಿಲ್ಲ ಎಂದಿದ್ದಾರೆ.

ಹಬ್ಬಿರುವ ಊಹಾಪೋಹ ಕುರಿತಂತೆ ಕಾಮನ್ವೆಲ್ತ್‌ ಗೇಮ್ಸ್‌ ಅಸೋಸಿಯೇಶನ್‌ ಅಧಿಕಾರಿಗಳೊಂದಿಗೆ ಮಾತನಾಡಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಭಾರತೀಯ ಬಾಕ್ಸರ್‌ಗಳು ಪರೀಕ್ಷೆಗೆ ಒಳಗಾಗಿದ್ದಾರೆ. ಕ್ರೀಡಾ ಸ್ಪರ್ಧೆಗಳು ಎ. 5ರಂದು ಆರಂಭವಾಗುವುದರಿಂದ ಇನ್ನಷ್ಟು ತನಿಖೆಗೆ ಅವಕಾಶವಿದೆ ಎಂದು ಗ್ರೀವೆಂಬರ್ಗ್‌ ಹೇಳಿದ್ದಾರೆ.

ಸಿಜಿಎಫ್ ನಿರ್ಧಾರಕ್ಕೆ ಏನು?
ಭಾರತ ತಂಡದ ಮುಖ್ಯಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, “ಭಾರತದ ಕ್ರೀಡಾಪಟುಗಳು ತಂಗಿದ್ದ ಕ್ರೀಡಾಗ್ರಾಮದ ಬಳಿ ಸಿರಿಂಜ್‌ಗಳು ಸಿಕ್ಕಿದ ಮಾತ್ರಕ್ಕೆ ಉದ್ದೀಪನ ಮದ್ದು ರಹಿತ ನೀತಿಯನ್ನು ಉಲ್ಲಂ ಸಿದಂತೆ ಆಗುವುದಿಲ್ಲ. ವಿಟಮಿನ್‌ಗಳನನ್ನು ದೇಹಕ್ಕೆ ಸೇರಿಸುವುದಕ್ಕಾಗಿಯೂ ಕ್ರೀಡಾಪಟುಗಳು ಸಿರಿಂಜ್‌ಗಳನ್ನು ಬಳಸುತ್ತಾರೆ. ಬಾಕ್ಸರ್‌ಗಳು ಪರೀಕ್ಷೆಗೆ ಒಳಗಾಗಿದ್ದು, ನಿಯಮ ಉಲ್ಲಂಘನೆಯಾಗಿರುವುದಾಗಿ ತಿಳಿದು ಬಂದಿದೆ. 

Advertisement

ಹೀಗಾಗಿ ನಾವೀಗ ಕಾಮನ್ವೆಲ್ತ್‌ ಗೇಮ್ಸ್‌  ಫೆಡರೇಶನ್‌ನ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ.
ಸಿಜಿಎಫ್ ನಿರ್ಧಾರ ಏನೆಂಬುದು ಸದ್ಯದ ನಿರೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next