Advertisement

Ration: ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ: ಮುನಿಯಪ್ಪ

08:35 PM Nov 06, 2023 | Team Udayavani |

ಮೈಸೂರು: ಅನ್ನ ಸುವಿಧಾ ಕಾರ್ಯಕ್ರಮದ ಮೂಲಕ 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಗೆ ಬರಲಾಗದವರಿಗೆ ಪಡಿತರ ತಲುಪಿಸುವ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.
ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಜಾಗೃತಿ ಕಾರ್ಯಕ್ರಮದ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ 2.95 ಲಕ್ಷ ಕೋಟಿ ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. ಈ ಪೈಕಿ 90 ವರ್ಷ ಮೇಲ್ಪಟ್ಟ ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದೆ. ವಿಶೇಷಚೇತನರು, ಅಸಹಾಯಕರಿಗೂ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ಚಿಂತನೆ ನಡೆಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಣ ಬದಲು 10 ಕೆ.ಜಿ. ಅಕ್ಕಿ ಕೊಡುವ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ. ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆಗಳನ್ನು ವಾರದೊಳಗೆ ಸಭೆ ಮಾಡಿ ಇತ್ಯರ್ಥ ಪಡಿಸುವುದಾಗಿ ಹೇಳಿದರು.
18 ಲಕ್ಷ ಜನರಿಗಿಲ್ಲ ಹಣ: 1.28 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. 1.10 ಕೋಟಿ ಕಾರ್ಡ್‌ಗಳಿಗೆ 5 ಕೆ.ಜಿ. ಹಣವನ್ನು ಜಮೆ ಮಾಡಲಾಗುತ್ತಿದೆ. 5 ಲಕ್ಷ ಕಾರ್ಡ್‌ದಾರರು ಕಾಲವಾಗಿದ್ದಾರೆ. 5 ಲಕ್ಷ ಕಾರ್ಡ್‌ಗಳಿಗೆ ಯಜಮಾನರಿಲ್ಲ. ಉಳಿದ 8 ಲಕ್ಷಕ್ಕೆ ಮುಖ್ಯಸ್ಥರು, ಬ್ಯಾಂಕ್‌ ಖಾತೆ ಮಾಹಿತಿ ತಪ್ಪಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಿ ಕಾರ್ಡ್‌ದಾರರಿಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next