Advertisement
ಮನೆಯಲ್ಲಿರುವ ಅನಾರೋಗ್ಯಪೀಡಿತ ಪುತ್ರನ ವರ್ತನೆಯಿಂದಾಗಿ ತಾಯಿಗೆ ಇದು ಅನಿವಾರ್ಯ. ಹುಟ್ಟಿನಿಂದಲೇ ಸಮಸ್ಯೆ ಹೊಂದಿರುವ ಆಸೀಫನಿಗೆ ಈಗ 21 ವರ್ಷ. ಆತನನ್ನು ತಾಯಿ ಮನೆಯೊಳಗೆ ಕಟ್ಟಿ ಹಾಕುತ್ತಾರೆ. ಪುತ್ರನ ಅವಸ್ಥೆ ನೋಡಿ ನಿತ್ಯವೂ ಕಣ್ಣೀರು ಹಾಕುತ್ತಾರೆ.
ಎಂಡೆ ಸಾಗು ನಿವಾಸಿ ಸಾರಮ್ಮ ಅವರ ಏಕೈಕ ಪುತ್ರ ಮಹಮ್ಮದ್ ಆಸಿಫ್. ಸಣ್ಣ ವಯಸ್ಸಿನಲ್ಲೇ ವಿಚಿತ್ರ ಗೀಳೊಂದು ಆತನಿಗೆ ಅಂಟಿಕೊಂಡಿದೆ. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಏನೂ ಪ್ರಯೋಜನವಾಗಿಲ್ಲ. ಮನೆಯಿಂದ ಹೊರಗಡೆ ಹೋದರೆ ಆತನನ್ನು ಹಿಡಿಯಲು ಸಾಧ್ಯವಾಗದು. ಪಕ್ಕದ ಮನೆಗಳಿಗೆ ತೆರಳಿ ಲೂಟಿ ಮಾಡುತ್ತಾನೆ. ಮಾತು ಬರುವುದಿಲ್ಲ. ದೇಹ ಬೆಳೆದಿದೆ. ಹೊರಳಾಡಿಕೊಂಡೇ ಆಚೀಚೆ ತೆರಳುತ್ತಾನೆ. ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಮಾಡುತ್ತಾನೆ. ಬೇರೆಯವರಿಗೆ ತೊಂದರೆ ಆಗಬಾರದೆಂದು ತಾಯಿ ಈತನ ಕಾಲುಗಳನ್ನು ಹಳೆಯ ಬಟ್ಟೆಯೊಂದರಿಂದ ಕಟ್ಟಿ ಹಾಕುತ್ತಾರೆ. ಆದರೆ, ಕಟ್ಟಿರುವ ಬಟ್ಟೆಯನ್ನು ಸುಲಭವಾಗಿ ಬಿಚ್ಚಬಹುದು ಅಥವಾ ತುಂಡು ಮಾಡಬಹುದು ಎಂಬ ಅರಿವೂ ಆಸಿಫನಿಗಿಲ್ಲ! ಮನಕಲಕುವ ದೃಶ್ಯ
ಆಸೀಫ ಮಲಗುವ ಜಾಗದ ಪಕ್ಕದಲ್ಲಿ ಶೌಚಾಲಯಕ್ಕೆ ಸಂಪರ್ಕ ಕೊಂಡಿಯಗಿ ಪೈಪ್ ಜೋಡಿಸಲಾಗಿದೆ. ಆತನನ್ನು ಕಟ್ಟಿ ಹಾಕಲು ಮನೆಯ ಗೋಡೆಯಲ್ಲಿ ರಾಡ್ ಅಳವಡಿಸಲಾಗಿದೆ. ಅನಾರೋಗ್ಯದಿಂದಾಗಿ ದಿನಕ್ಕೆ ಒಂದಷ್ಟು ಮಾತ್ರೆ ಸೇವಿಸುವ ಕಾರಣ ಆತನಿಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ. ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾನೆ. ಕೈಯಿಂದ ತಲೆಗೆ ಹೊಡೆದುಕೊಳ್ಳುತ್ತಾನೆ. ಹೊಡೆತದಿಂದ ತಲೆಯ ಒಂದು ಭಾಗವೇ ಚಪ್ಪಟೆಯಾಗಿದೆ. ತನ್ನ ದೇಹಕ್ಕೆ ತಾನೇ ಹೊಡೆದುಕೊಳ್ಳುವ ಕಾರಣಕ್ಕೆ ತಲೆಯಲ್ಲಿ, ಮೂಗಿನಲ್ಲಿ ಆಗಾಗ ರಕ್ತ ಚಿಮ್ಮುತ್ತದೆ. ಆದರೆ ತಾಯಿ ಇದೆಲ್ಲವನ್ನೂ ನೋಡಿಕೊಂಡು ಮೌನವಾಗಿ ಕಣ್ಣೀರು ಹಾಕುತ್ತಿದ್ದಾರೆ. ಆತನ ಬೊಬ್ಬೆ, ಕಿರುಚಾಟವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆತನ ಆರೈಕೆ ಮಾಡುವುದರಲ್ಲೇ ತಾಯಿಯ ದಿನ ಕಳೆದು ಹೋಗುತ್ತಿದೆ.
Related Articles
ತಿಂಗಳ ವಿಶೇಷ ಮಾಸಾಶನವಾಗಿ 3 ಸಾವಿರ ರೂ. ಬರುತ್ತಿದೆ. ಇದು ಮಗನ ಔಷಧಿಗೆ ಖರ್ಚಾಗಿ ಹೋಗುತ್ತಲಿದೆ. ಮಗನನ್ನು ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ. ಯಾವ ಗಳಿಗೆಯಲ್ಲಿ ಏನಾಗಬಹುದು ಎನ್ನುವ ಭಯ ತಾಯಿಗೆ ಇರುವ ಕಾರಣ ಮನೆ ಬಿಡುವಂತಿಲ್ಲ. ಆದರೂ ಒಮ್ಮೊಮ್ಮೆ ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳಿಗೆ ಹೋಗುತ್ತಾರೆ. ಆಸೀಫನ ತಂದೆ ಎರಡು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ವೃದ್ಧೆ ತಾಯಿಗೆ ಈಗ ಮಗನ ಆರೈಕೆ ಮಾಡಲು ಸಾಧ್ಯವಿಲ್ಲದಷ್ಟು ಆರೋಗ್ಯ ಕೆಟ್ಟಿದೆ. ಹೀಗಾಗಿ, ಅವರೀಗ ಸಹೃದಯರು ಹಾಗೂ ಸಂಘ- ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
Advertisement
ಮನೆಯೊಳಗೆ ಮನಕಲಕುವ ದೃಶ್ಯಆಸೀಫ ಮಲಗುವ ಜಾಗದ ಪಕ್ಕದಲ್ಲಿ ಶೌಚಾಲಯಕ್ಕೆ ಸಂಪರ್ಕ ಕೊಂಡಿಯಗಿ ಪೈಪ್ ಜೋಡಿಸಲಾಗಿದೆ. ಆತನನ್ನು ಕಟ್ಟಿ ಹಾಕಲು ಮನೆಯ ಗೋಡೆಯಲ್ಲಿ ರಾಡ್ ಅಳವಡಿಸಲಾಗಿದೆ. ಅನಾರೋಗ್ಯದಿಂದಾಗಿ ದಿನಕ್ಕೆ ಒಂದಷ್ಟು ಮಾತ್ರೆ ಸೇವಿಸುವ ಕಾರಣ ಆತನಿಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ. ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾನೆ. ಕೈಯಿಂದ ತಲೆಗೆ ಹೊಡೆದುಕೊಳ್ಳುತ್ತಾನೆ. ಹೊಡೆತದಿಂದ ತಲೆಯ ಒಂದು ಭಾಗವೇ ಚಪ್ಪಟೆಯಾಗಿದೆ. ತನ್ನ ದೇಹಕ್ಕೆ ತಾನೇ ಹೊಡೆದುಕೊಳ್ಳುವ ಕಾರಣಕ್ಕೆ ತಲೆಯಲ್ಲಿ, ಮೂಗಿನಲ್ಲಿ ಆಗಾಗ ರಕ್ತ ಚಿಮ್ಮುತ್ತದೆ. ಆದರೆ ತಾಯಿ ಇದೆಲ್ಲವನ್ನೂ ನೋಡಿಕೊಂಡು ಮೌನವಾಗಿ ಕಣ್ಣೀರು ಹಾಕುತ್ತಿದ್ದಾರೆ. ಆತನ ಬೊಬ್ಬೆ, ಕಿರುಚಾಟವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆತನ ಆರೈಕೆ ಮಾಡುವುದರಲ್ಲೇ ತಾಯಿಯ ದಿನ ಕಳೆದು ಹೋಗುತ್ತಿದೆ. ಪಂಚಾಯತ್‌ನಿಂದ ಸಹಕಾರ
ಅಂಗವಿಕಲನ ಕುಟುಂಬಕ್ಕೆ ಸರಕಾರದಿಂದ ನೀಡುವ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ದೊರಕಿಸಿ ಕೊಡಲಾಗುತ್ತದೆ. ಗ್ರಾಮ ಪಂಚಾಯತ್ ವತಿಯಿಂದ ಗೋದ್ರೆಜ್ ಕಪಾಟನ್ನು ನೀಡಲಾಗಿದೆ.
– ಸವಿತಾ ಎಸ್.,
ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ ದಿನೇಶ್ ಬಡಗನ್ನೂರು