Advertisement

Sirsi: ಮನೆ-ಮನೆಗೂ ಪೊಲೀಸ್; ಶಿರಸೀಲಿ ವಿಶಿಷ್ಠ ಸಾರ್ವಜನಿಕ ಜಾಗೃತಿ

01:04 PM Jan 13, 2024 | Team Udayavani |

ಶಿರಸಿ: ಘಟನೆಗಳು, ಅವಘಟಗಳು ಆದಾಗ ಪೊಲೀಸರು ಬರುವದು‌ ಮಾಮೂಲಿ. ಆದರೆ, ಶಿರಸಿ‌ ನಗರ ಠಾಣೆಯ ಪೊಲೀಸರು ಕಾರಣ ಇಲ್ಲದೆಯೂ ಮನೆ ಮನೆಗಳಿಗೆ ಭೇಟಿ‌ ನೀಡಲಿದ್ದಾರೆ.

Advertisement

ಭಯ ಬೇಡಿ, ಕಾರಣ ಇಷ್ಟೇ!

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024 ರ ಅಂಗವಾಗಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕರಿಗೆ ರಸ್ತೆ ಅಪಘಾತಗಳು ಹಾಗೂ ರಸ್ತೆ ಸುರಕ್ಷತಾ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಶಿರಸಿ ನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ತಮ್ಮ-ತಮ್ಮ ಬೀಟ್ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗಳಿಗೆ ತೆರಳಿ ಜಾಗೃತಿ ಕರ ಪತ್ರಗಳನ್ನು ನೀಡಲಿದ್ದಾರೆ.

ಮನೆಯ ಸದಸ್ಯರಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಮನೆ-ಮನೆಗೂ ಪೊಲೀಸ್ ಎಂಬ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ಜ.13ರ ಶನಿವಾರ ಚಾಲನೆ ನೀಡಲಾಯಿತು.

ಶನಿವಾರದಿಂದ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಮನೆಗಳಿಗೆ   ಪೊಲೀಸರು ತೆರಳಿ ಜಾಗೃತಿ ಮೂಡಿಸಲಿದ್ದಾರೆ.

Advertisement

ಉಪವಿಭಾಗದ ಡಿಎಸ್ಪಿ ಶ ಗಣೇಶ ಕೆ‌.ಎಲ್ ಚಾಲನೆ ನೀಡಿ, ಪ್ರತಿಯೊಬ್ಬ ಸಾರ್ವಜನಿಕರಿಗೂ ರಸ್ತೆ ಸುರಕ್ಷತೆಯ ಅರಿವು ಮತ್ತು ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಸಿ ಅಪಘಾತಗಳಿಗೆ ಬ್ರೇಕ್ ಹಾಕುವ ಮೂಲ ಉದ್ದೇಶ ಪೊಲೀಸರ ಈ ಕಾರ್ಯದ ಹಿಂದೆ ಅಡಗಿದೆ. ಸಾರ್ವಜನಿಕರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಶಿರಸಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ, ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ, ಬೀಟ್ ಉಸ್ತುವಾರಿ ಹೊನ್ನಪ್ಪ ಅಗೇರ ಎಎಸ್ಐ, ಬೀಟ್ ಸಿಬ್ಬಂದಿ ಮಂಜುನಾಥ ಪಾವಗಡ, ಅರುಣ, ಹಾಗೂ ಮುಖಂಡರಾದ ಪ್ರದೀಪ್ ಶೆಟ್ಟಿ, ಶೋಭಾ ನಾಯ್ಕ, ಮಾಲತಿ ಶೆಟ್ಟಿ, ಸುರೇಶ ಶೆಟ್ಟಿ, ಹೈಸ್ಕೂಲ್ ಶಿಕ್ಷಕ ಕೆ‌.ಎಲ್.ಭಟ್ ಮತ್ತು ಶಾಲಾ ಮಕ್ಕಳು, ಗಣೇಶ ನಗರದ ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next