Advertisement

ಅಣ್ಣಾವ್ರ ಜನ್ಮದಿನಕ್ಕೆ ಡೂಡಲ್‌ ಗೌರವ

12:25 PM Apr 24, 2017 | |

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ದಿವಂಗತ ಡಾ. ರಾಜ್‌ 88ನೇ ಜನ್ಮದಿನಕ್ಕೆ ಗೂಗಲ್‌ ಸಂಸ್ಥೆ ಡೂಡಲ್‌ನಲ್ಲಿ ಕಲಾತ್ಮಕ ಥೀಮ್‌ ಫೋಟೊ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ. ಪ್ರತಿದಿನವೂ ವಿಶ್ವದ ಜನಪ್ರಿಯರ ಹಾಗೂ ಜನಪ್ರಿಯ ಘಟನೆಗಳನ್ನು ಬಳಸುವುದರ ಜತೆಗೆ ನೆನಪು ಮಾಡಿಕೊಡುವ ಡೂಡಲ್‌, ಥೀಮ್‌ ಚಿತ್ರದಲ್ಲಿ ಡಾ. ರಾಜ್‌ ಚಿತ್ರಮಂದಿರದ ತೆರೆ ಮೇಲೆ ಕಾಣಿಸಿಕೊಂಡರೆ, ಮುಂಭಾಗದಲ್ಲಿ  ಅಭಿಮಾನಿಗಳು ವೀಕ್ಷಿಸುತ್ತಿರುವಂತೆ ಚಿತ್ರಿಸಲಾಗಿದೆ. ಹಿಂಭಾಗದಲ್ಲಿ ಸಂಭ್ರಮದ ವಾತಾವರಣ ಇರುವುದನ್ನು ಕಾಣಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next