ದೊಡ್ಡಬಳ್ಳಾಪುರ: ನಗರಸಭೆಗೆ ಏ.27 ರಂದು ಚುನಾವಣೆ ನಡೆಸಲು, ವೇಳಾ ಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ, ಸಂಜೆ ವೇಳೆಗೆ ತಾಂತ್ರಿಕ ಕಾರಣ ನೀಡಿ ಹಿಂದಕ್ಕೆ ಪಡೆದು ಆದೇಶ ಹೊರಡಿಸಿದೆ. ನಗರಸಭೆಯ ಸದಸ್ಯರ ಅಧಿಕಾರ ಮುಕ್ತಾಯವಾಗಿ ಇದೇ ಮಾ.12ಕ್ಕೆ ಎರಡು ವರ್ಷಗಳಾಗಿವೆ.
ಸೋಮವಾರ ಮಧ್ಯಾಹ್ನದ ವೇಳೆಗೆ ನಗರಸಭೆ ಸದಸ್ಯರ ಆಯ್ಕೆಗೆ ಏ.27 ರಂದು ಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿಯನ್ನುಪ್ರಕಟಿಸಿತ್ತು. ಆದರೆ, ಸಂಜೆ, ತಾಂತ್ರಿಕ ಕಾರಣಗಳಿಂದಾಗಿ ಚುನಾವಣೆಗೆ ಹೊರಡಿಸಿರುವ ವೇಳಾಪಟ್ಟಿಯನ್ನು ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದ್ದು,ಪರಿಷ್ಕೃತ ವೇಳಾ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯೋಗ ಪ್ರಕಟಣೆ ಹೊರಡಿಸಿದೆ.
ನಗರಸಭೆಯ ವಾರ್ಡ್ ಮೀಸಲಾತಿ, ಗಡಿ ವಿಂಗಡಣೆ ಸರಿ ಇಲ್ಲ ಎಂದು ಪ್ರಶ್ನಿಸಿ ಹಲವು ಮಂದಿಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿದ್ದರು. ಈ ಅರ್ಜಿ ವಿಚಾರಣೆಯಿಂದಾಗಿಯೇ ನಗರಸಭೆ ಸದಸ್ಯರಅಧಿಕಾರ ಮುಕ್ತಾಯವಾಗಿ ಎರಡು ವರ್ಷಕಳೆದಿದ್ದರೂ ಚುನಾವಣೆ ದಿನಾಂಕ ಪ್ರಕಟವಾಗಿರಲಿಲ್ಲ.ಕೋರ್ಟ್ ಸೂಚನೆಯಂತೆ ಎರಡು ತಿಂಗಳ ಹಿಂದೆಯಷ್ಟೇ ರಾಜ್ಯ ಚುನಾವಣೆ ಆಯೋಗಮೀಸಲಾತಿ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿತ್ತು. ಹಲವು ಮಂದಿ ಮೀಸಲಾತಿಕರಡುಪಟ್ಟಿಗೆ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು.
ವಾರ್ಡ್‌ಗಳ ಗಡಿ ವಿಂಗಡಣೆ ಕುರಿತ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲೇ ಇದೆ. ಸಾರ್ವಜನಿಕರ ಆಕ್ಷೇಪಣೆನಂತರ ಮೀಸಲಾತಿ ಪಟ್ಟಿಯನ್ನು ಅಧಿಕೃವಾಗಿಪ್ರಕಟಿಸಿಲ್ಲ. ಆದರೆ, ಚುನಾವಣಾ ವೇಳಾಪಟ್ಟಿಯನ್ನು ದಿಢೀರ್ ಪ್ರಕಟಿಸಿರುವುದಕ್ಕೆ ಹಲವು ಮಂದಿರಾಜಕೀಯ ಪಕ್ಷಗಳ ಮುಖಂಡರು ಆಕ್ಷೇಪವ್ಯಕ್ತಪಡಿಸಿದ್ದರು. ಈ ಕುರಿತಂತೆ ಮತ್ತೆ ಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದರು.
ನಗರಸಭೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಹಲವು ಮಂದಿ ಆಕಾಂಕ್ಷಿಗಳಲ್ಲಿಸಂತಸ ಮೂಡಿಸಿತ್ತು. ಮೀಸಲಾತಿ ಸರಿ ಇಲ್ಲ ಎಂದು ಆಕ್ಷೇಪಣೆ ಸಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು.ಆದರೆ, ಸಂಜೆ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯಆಯೋಗ ಹಿಂದಕ್ಕೆ ಪಡೆಯುತ್ತಿದ್ದಂತೆ ಮತ್ತೆ ಆಕಾಂಕ್ಷಿಗಳಲ್ಲಿ ಗೊಂದಲ ಅರಂಭವಾಗಿದೆ.ವೇಳಾಪಟ್ಟಿಯನ್ನು ಹಿಂದಕ್ಕೆ ಪಡೆಯಲು ತಾಂತ್ರಿಕಕಾರಣ ಎಂದಷ್ಟೇ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.ಆದರೆ, ನಿಖರವಾದ ಕಾರಣ ಕುರಿತು ಸ್ಪಷ್ಟ ಉತ್ತರ ದೊರಕಿಲ್ಲ.