Advertisement

ಭಯ ಬೇಡ, ಮಕ್ಕಳು ಬೇಗ ಗುಣಮುಖರಾಗುತ್ತಾರೆ…

07:37 PM Jun 29, 2021 | Team Udayavani |

ವೈರಸ್‌, ಬ್ಯಾಕ್ಟೀರಿಯಾ, ಫಂಗಸ್‌ ಮುಂತಾದ ಸೂಕ್ಷ್ಮ ಜೀವಿಗಳು ಮಾವನ ಸಂಕುಲದ ಆರಂಭಕ್ಕೂ ಮುನ್ನ ವೇ ಅಸ್ತಿತ್ವದಲ್ಲಿವೆ. ಮನುಕುಲದ ಆರೋಗ್ಯಕ್ಕೆ ಮತ್ತು ಜೀವ ವೈವಿಧ್ಯತೆಯ ಸಮತೋಲನಕ್ಕೆ ಈ ಸೂಕ್ಷ್ಮಾಣು ಗಳು ಅನಿವಾರ್ಯವಾಗಿದ್ದು, ಕಾಲಕಾಲಕ್ಕೆ ಇವುಗಳ ವಿಷ ಮ ರೂಪಾಂತರದಿಂದ ರೋಗಗಳು ಹೊಸದಾಗಿ ಹುಟ್ಟಿ  ಕೊಳ್ಳುವುದು ಸಾಮಾನ್ಯ ಪ್ರಾಕೃತಿಕ ಪ್ರಕ್ರಿಯೆಯಾಗಿದೆ.

Advertisement

ಪ್ರಸ್ತುತ ಸಾಂಕ್ರಾಮಿಕ ಸೋಂಕು ಉಂಟು ಮಾಡಿರುವ ಕೊರೊ ನಾ ವೈರಸ್‌ ಒಂದು ಆರ್‌ಎನ್‌ಎ ವೈರಸ್‌. ಇದು ಶ್ವಾಸನಾಳ ಮತ್ತು ಶ್ವಾಸಕೋಶ ಸೋಂಕು ಉಂಟು ಮಾಡುತ್ತದೆ. ಕೆಮ್ಮಿದಾಗ ಮತ್ತು ಸೀನಿದಾಗ ಶ್ವಾಸ ನಾಳಗಳಿಂದ ಚಿಮ್ಮುವ ಸೂಕ್ಷ್ಮ ಹನಿಗಳ ಮೂಲಕ ಈ ವೈರಸ್‌ ಹರಡುತ್ತದೆ. ಈ ಸೋಂಕುಳ್ಳ ಸೂಕ್ಷ್ಮ ಹನಿಗಳನ್ನು ಉಸಿರಾಡಿದಾಗ/ ಹನಿಗಳು ಮ್ಯೂಕಸ್‌ ಪದರಗಳ ಸಂಪರ್ಕಕ್ಕೆ ಬಂದಾಗ ನಮ್ಮ ದೇಹಕೋಶಗಳಲ್ಲಿ ಸೇರಿ, ವೃದ್ಧಿಹೊಂದಿ, ಅನಂತರ ರಕ್ತಕ್ಕೆ ಹಾಗೂ ಆ ಮೂಲಕ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ರೀತಿ ದೇಹ ಸೇರಿದ ವೈರಸ್‌, ಸರಾಸರಿ 5-7 ದಿನಗಳ ಇನ್‌ಕುÂಬೇಶನ್‌ ಅವಧಿಯ ಅನಂತರ ಸೋಂಕಿತರಲ್ಲಿ ಜ್ವರ, ಕೆಮ್ಮು, ಗಂಟಲು ಕೆರೆತ, ಮೈಕೈ ನೋವು, ತಲೆನೋವು, ಭೇದಿ, ವಾಂತಿಯಂತಹ ಲಕ್ಷಣಗಳನ್ನು ಮೂಡಿಸುತ್ತದೆ.

ಮಕ್ಕಳಲ್ಲಿ ಕಂಡುಬರುವ ರೋಗಲಕ್ಷಣಗಳು ಹಿರಿಯ ರಲ್ಲಿ ಕಂಡುಬರುವ ರೋಗಲಕ್ಷಣಗಳಿಗಿಂತ ಹೆಚ್ಚು ಸೌಮ್ಯ ಸ್ವರೂಪದ್ದಾಗಿರುತ್ತವೆ. ಮಕ್ಕಳಲ್ಲಿ ಸೋಂಕು ಉಂಟು ಮಾಡಲು ಆವಶ್ಯಕವಾದ ರಿಸೆಪಾrರ್‌ ಕಡಿಮೆ ಇದ್ದು, ಅವರ ರೋಗನಿರೋಧಕ ಹಾಗೂ ಉರಿಯೂತ ವ್ಯವಸ್ಥೆ ಹಿರಿಯರಲ್ಲಿನ ವ್ಯವಸ್ಥೆಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ಈವರೆಗೂ ಕೊರೊನಾ ಸೋಂಕು ಮಕ್ಕಳಲ್ಲಿ ತೀವ್ರತರ ರೋಗ ಉಂಟುಮಾಡಿಲ್ಲ.

ಸರಿಸುಮಾರು ಶೇ.80ಕ್ಕಿಂತಲೂ ಹೆಚ್ಚಿನ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದೇ ಸಂಪೂರ್ಣ ಗುಣಮುಖರಾಗುತ್ತಾರೆ. ಶೇ.10ರಿಂದ 15ರಷ್ಟು ಮಕ್ಕಳಷ್ಟೇ ಮೇಲಿನ ರೋಗಲಕ್ಷಣಗಳನ್ನು ಹೊಂದಿರು ತ್ತಾರೆ. ಸುಮಾರು ಶೇ.5ಕ್ಕಿಂತ ಕಡಿಮೆ ಮಕ್ಕಳಿಗೆ ಆಸ್ಪತ್ರೆ ದಾಖಲಾತಿ ಅಗತ್ಯ ಬರಲಿದ್ದು, ಶೇ.0.05ಕ್ಕಿಂತ ಕಡಿಮೆ ಮಕ್ಕಳಲ್ಲಿ ಸಾವು ಸಂಭವಿಸಬಹುದಾಗಿರುತ್ತದೆ. ಪ್ರಸ್ತುತ ನಾವು ಸಾರ್ವತ್ರಿಕ ಸೋಂಕಿನ 2ನೇ ಅಲೆಯ ಕಾಲ ಘಟ್ಟದಲ್ಲಿ ಇರುವುದರಿಂದ ರೋಗಲಕ್ಷಣ ವುಳ್ಳ ಪ್ರತಿ ಯೊಂದು ಮಗುವೂ ಸೋಂಕಿ ತರೆಂದೇ ಪರಿ ಗಣಿಸಿ ವೈದ್ಯಕೀಯ ತಪಾಸಣೆ ಹಾಗೂ ಸೋಂಕು ದೃಢ ಪಡಿಸಲು ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಬೇಕು.

ರೋಗಲಕ್ಷಣಗಳುಳ್ಳ ಬಹುಪಾಲು ಮಕ್ಕಳಿಗೆ ಉಪಚಾರ ಹಾಗೂ ಚಿಕಿತ್ಸೆಯಷ್ಟೇ ಆವಶ್ಯಕವಾಗಿರುತ್ತದೆ. ದೀರ್ಘ‌ಕಾಲದ ಹೃದಯ, ಶಾಸಕೋಶ, ಮೂತ್ರಪಿಂಡ, ಸಕ್ಕರೆ ಕಾಯಿಲೆ ಯಂಥ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳು ಹಾಗೂ ವೇಗ ಶ್ವಾಸ, ಉಸಿರಾಟದ ತೊಂದರೆ, ಕಡಿಮೆ ಆಮ್ಲಜನಕ ಪ್ರಮಾಣ, ನಿಶ್ಶಕ್ತಿ, ಪ್ರಜ್ಞಾಹೀನತೆ, ಆಹಾರ ಸೇವನೆ ಕ್ಷೀಣತೆ ಮುಂತಾದ ರೋಗ ಲಕ್ಷಣಗಳಿರುವ ಮಕ್ಕಳಿಗೆ ಆಸ್ಪತ್ರೆ ದಾಖಲಾತಿಯ ಅಗತ್ಯ ಇರುತ್ತದೆ. ಹಾಲುಣಿಸುವ ತಾಯಂದಿರಲ್ಲಿ ಕೊರೊನಾ ಸೋಂಕು ಕಂಡುಬಂದಲ್ಲಿ ಸೋಂಕು ಹರಡುವುದನ್ನು ತಡೆಯುವ ವಿಧಿವಿಧಾನಗಳನ್ನು ಅನುಸರಿಸಿ, ಮಗುವಿಗೆ ಹಾಲುಣಿಸಬಹುದು. ಲಸಿಕೆ ತೆಗೆದುಕೊಂಡಾಗಲೂ ಹಾಲುಣಿಸುವುದನ್ನು ಮುಂದುವರಿಸಬಹುದು.

Advertisement

ಇತ್ತೀಚೆಗೆ ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆ ಹಾಗೂ ಕ್ಷಮತೆಯನ್ನು ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆಗಳ ಫಲಿತಾಂಶಗಳು ಸಕಾರಾತ್ಮಕವಾದರೆ ಮುಂದಿನ ದಿನ ಗಳಲ್ಲಿ ಮಕ್ಕಳಿಗೂ ಲಸಿಕೆ ಲಭ್ಯವಾಗಲಿದೆ. ಕೊರೊನಾ ಬಗ್ಗೆ ಭಯಪಡದೇ ಎಚ್ಚರಿಕೆಯಿಂದಿದ್ದು, ಕೋವಿಡ್‌ ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತ, ಸರಕಾರ‌ದಿಂದ ಕಾಲಕಾಲಕ್ಕೆ ಸೂಚಿಸಲ್ಪಡುವ ಮಾರ್ಗಸೂಚಿಗಳನ್ನು ಸಾಮೂಹಿಕವಾಗಿ ಪಾಲನೆ ಮಾಡುವ ಮೂಲಕ ಕೊರಾನಾ ಮಹಾಮಾರಿಯನ್ನು ನಿಗ್ರಹಿಸಿ ನಮ್ಮ ಹಾಗೂ ನಮ್ಮ ಸಮಾಜದ ರಕ್ಷಣೆಗೆ ಒಂದಾಗಿ ಶ್ರಮಿಸೋಣ.

 ಡಾ|ಟಿ. ವೈ. ಕಿರಣ್‌ ಕುಮಾರ್‌, ಮಕ್ಕಳ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next