Advertisement
ಹೀಗಾಗಿ ಮತ್ತೆ ಲಾಕ್‌ಡೌನ್ ಸೇರಿದಂತೆ ಹಲವು ಪ್ರತಿಬಂಧಕ ಕ್ರಮಗಳು ಜಾರಿಯಾಗಲಿದೆಯೇ ಎಂಬ ದುಗುಡ ಸಹಜವೇ. ರಾಜ್ಯದಲ್ಲಿ ಕೂಡ ಇದುವರೆಗಿನ ಮಾಹಿತಿ ಪ್ರಕಾರ ಎರಡು ಕೇಸುಗಳು ದೃಢಪಟ್ಟಿದೆ. ಆದರೆ ದೇಶವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದ್ದರೂ ಅದನ್ನು “ಇನ್ನೂ ಅಧ್ಯಯನ ದಲ್ಲಿರುವ ಹಂತದ ರೂಪಾಂತರಿ’ ಎಂದೇ ಉಲ್ಲೇಖಿಸಿದ್ದಾರೆ.ಇದರ ಜತೆಗೆ ರಾಜ್ಯ ಸಹಿತ ದೇಶದ ಹಲವು ಭಾಗಗಳಲ್ಲಿ ಪತ್ತೆಯಾಗಿರುವ ಎ.ವೈ.4.2 ರೂಪಾಂತರಿ ಸೆಪ್ಟಂಬರ್‌ನಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇದ್ದ ವೇಳೆ ನಡೆಸಲಾಗಿದ್ದ ಮಾದರಿಗಳ ಅಧ್ಯಯನದಿಂದ ದೃಢಪಟ್ಟದ್ದು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವರದಿ ಹೇಳಿದೆ. ಹೀಗಾಗಿ ಇದೊಂದು ಸಮಾಧಾನದ ವಿಚಾರ. ಹೊಸ ರೂಪಾಂತರಿಯ ಸವಾಲಿನ ಬಗ್ಗೆ ಕೇಂದ್ರ ಸರಕಾರ ಕೂಡ ತತ್‌ಕ್ಷಣ ಕಾರ್ಯಪ್ರವೃತ್ತವಾಗಿದೆ.
Related Articles
Advertisement
ಇದನ್ನೂ ಓದಿ:ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧ್ಯಯನದ ಪ್ರಕಾರ ಎ.ವೈ.4.2 ರೂಪಾಂತರಿಯಲ್ಲದೆ, ಎ.ವೈ. 33, ಎ.ವೈ.4.1 ಎಂಬ ಮತ್ತೆ ಎರಡು ಹೊಸ ವರ್ಗೀಕರಣವೂ ಇದೆ. ಹೀಗಾಗಿ ಸಮಾಧಾನದ ಜತೆಗೆ ಎಲ್ಲರೂ ಎಚ್ಚರಿಕೆಯಿಂದಲೇ ಇರುವ ಅನಿವಾರ್ಯತೆ ಉಂಟಾಗಿದೆ. ವಿಜ್ಞಾನಿಗಳ ಕ್ಷಿಪ್ರ ಸಂಶೋಧನೆಯಿಂದಾಗಿ ಪಿಡುಗಿನ ವಿರುದ್ಧ ಲಸಿಕೆ ಸಿದ್ಧಗೊಂಡಿದೆ. ಕೆಲವು ದಿನಗಳ ಹಿಂದಷ್ಟೇ 100 ಕೋಟಿ ಡೋಸ್ ಲಸಿಕೆ ನೀಡಿ ದಾಖಲೆಯನ್ನೂ ಬರೆಯಲಾಗಿದೆ. ಈ ಪೈಕಿ ಮೊದಲ ಡೋಸ್ ಪಡೆದಿರುವವರ ಸಂಖ್ಯೆ ಹೆಚ್ಚು. ಸೋಂಕಿನಿಂದ ಉಂಟಾಗುವ ಪ್ರತಿಕೂಲ ಪರಿಣಾಮ ತಡೆಯಬೇಕಾಗಿದೆ. ಜತೆಗೆ ಶೀಘ್ರದಲ್ಲಿಯೇ ಚಳಿಗಾಲವೂ ಆರಂಭವಾಗುವುದರಿಂದ ನಾವೆಲ್ಲರೂ ಗರಿಷ್ಠ ಎಚ್ಚರಿಕೆ ವಹಿಸಬೇಕು. ಇದರ ಜತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅದಕ್ಕಾಗಿ ವೈಯಕ್ತಿಕ ಶುಚಿತ್ವ, ಸಾರ್ವಜನಿಕವಾಗಿಯೂ ಕಸ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಅದನ್ನು ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳ ಜತೆಗೆ ನಾವೂ ಕೈಜೋಡಿಸಬೇಕಾಗಿದೆ.